ಮಡಿಕೇರಿ, ಅ. ೨೪: ನವದೆಹಲಿಯಲ್ಲಿ ನಡೆದ ಭಾರತೀಯ ಕೈಗಾರಿಕಾ ಒಕ್ಕೂಟದ (ಅII) ಎಫ್ಪಿಒ ಎಕ್ಸಲೆನ್ಸ್ ಪ್ರಶಸ್ತಿಗಳಲ್ಲಿ ಸದ್ಗುರುಗಳು ರೂಪಿಸಿರುವ ಈಶ ಔಟ್ರೀಚ್ ಬೆಂಬಲಿತ ಕರ್ನಾಟಕದ ಕೊಡಗು ಮೂಲದ ಪೊನ್ನಾಡ್ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ತಂತ್ರಜ್ಞಾನ ಮತ್ತು ಸುಸ್ಥಿರತೆ ವಿಭಾಗದಲ್ಲಿ ವಿಜೇತವಾಗಿ ಹೊರಹೊಮ್ಮಿದೆ.
ತಮಿಳುನಾಡಿನಲ್ಲಿ ಈಶ ಔಟ್ರೀಚ್ ಬೆಂಬಲಿತ ಇತರ ಎರಡು ರೈತ ಉತ್ಪಾದಕ ಸಂಸ್ಥೆಗಳು ಸಹ ಈ ಪ್ರಶಸ್ತಿ ಸಮಾರಂಭದಲ್ಲಿ ಗೌರವ ಮನ್ನಣೆ ಗಳಿಸಿವೆ. ಕೊಯಂಬತ್ತೂರಿನ ತೇಂಚೇರಿಮಲೈ ಫಾರ್ಮರ್ ಪ್ರೊಡ್ಯೂಸರ್ ಕಂಪನಿ ಲಿಮಿಟೆಡ್ ಮಾರುಕಟ್ಟೆ ಸಂಪರ್ಕ ವಿಭಾಗದಲ್ಲಿ ಜಯಗಳಿಸಿದರೆ, ಕೊಯಂಬತ್ತೂರಿನ ಸೆನ್ನಿಯಾಂಡವರ್ ಎಫ್ಪಿಒ ಅದೇ ವಿಭಾಗದಲ್ಲಿ ವಿಶೇಷ ಮನ್ನಣೆ ಗಳಿಸಿದೆ. ಸಿಐಐ ಎಫ್ಪಿಒ ಎಕ್ಸಲೆನ್ಸ್ ಪ್ರಶಸ್ತಿಗಳಲ್ಲಿ ಈಶ ಔಟ್ರೀಚ್ ಬೆಂಬಲಿತ ರೈತ ಉತ್ಪಾದಕ ಸಂಸ್ಥೆಗಳು ಸತತ ನಾಲ್ಕನೇ ವರ್ಷವೂ ಮಾನ್ಯತೆ ಪಡೆದಿವೆ.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಪೊನ್ನಾಡ್ ರೈತ ಉತ್ಪಾದಕ ಸಂಸ್ಥೆಯ ನಿರ್ದೇಶಕರಾದ ಎ.ಕೆ. ಮುತ್ತಪ್ಪ; ಹಾಗೂ ಕೆ. ರತ್ನ ಚರ್ಮಣ ಈ ಪ್ರಶಸ್ತಿಯು ನಮ್ಮೆಲ್ಲಾ ರೈತ ಸದಸ್ಯರಿಗೆ ಹೆಮ್ಮೆಯ ಕ್ಷಣವಾಗಿದೆ. ಪ್ರಬಲವಾದ ಮತ್ತು ಹೆಚ್ಚು ಸುಸ್ಥಿರ ಕೃಷಿ ಉದ್ಯಮವನ್ನು ನಿರ್ಮಿಸುವ ನಿಟ್ಟಿನಲ್ಲಿ ನಮ್ಮ ರೈತರ ಸಾಮೂಹಿಕ ಪ್ರಯತ್ನವಾಗಿದೆ. ಈಶ ಔಟ್ರೀಚ್ನ ಬೆಂಬಲ ಮತ್ತು ಮಾರ್ಗದರ್ಶನದೊಂದಿಗೆ, ನಮ್ಮ ಚಟುವಟಿಕೆಗಳನ್ನು ಬಲಪಡಿಸಲು ಮತ್ತು ನಮ್ಮ ರೈತರಿಗಾಗಿ ಉತ್ತಮ ಅವಕಾಶಗಳನ್ನು ಕಲ್ಪಿಸಿಕೊಡುವ ನಿಟ್ಟಿನಲ್ಲಿ ಕೆಲಸ ಮಾಡಲು ನಮಗೆ ಸಾಧ್ಯವಾಗಿದೆ ಎಂದು ಹೇಳಿದರು.
ಈಶ ಔಟ್ರೀಚ್ನ ಮಣ್ಣು ಉಳಿಸಿ ರೈತ ಅಭಿಯಾನವು, ರೈತ ಉತ್ಪಾದಕ ಸಂಸ್ಥೆಗಳ ಮೂಲಕ ಲಾಭದಾಯಕ, ರೈತರ ಒಡೆತನದ ಉದ್ಯಮಗಳನ್ನು ನಿರ್ಮಿಸಲು ಸಣ್ಣ ಮತ್ತು ಅತಿಸಣ್ಣ ರೈತರನ್ನು ಬೆಂಬಲಿಸುತ್ತದೆ. ಈ ಉಪಕ್ರಮವು ತಂತಜ್ಞಾನ, ಆರ್ಥಿಕ ಮತ್ತು ಮಾರುಕಟ್ಟೆ ಸಹಾಯವನ್ನು ಒದಗಿಸುತ್ತದೆ. ರೈತರು ಒಟ್ಟಾಗಿ ಕೆಲಸ ಮಾಡಲು, ತಮ್ಮ ವ್ಯಾಪಾರ ಸಾಮರ್ಥ್ಯವನ್ನು ಬಲಪಡಿಸಲು, ಮಾರುಕಟ್ಟೆ ಪ್ರವೇಶವನ್ನು
೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ಸುಧಾರಿಸಲು ಮತ್ತು ಆರ್ಥಿಕವಾಗಿ ಲಾಭದಾಯಕ ಕೃಷಿ ವ್ಯವಹಾರಗಳನ್ನು ಅಭಿವೃದ್ಧಿಪಡಿಸಲು ಅನುವು ಮಾಡಿಕೊಡುತ್ತದೆ ಎಂದರು.
೨೦೧೩ರಲ್ಲಿ ವೆಳ್ಳಿಯಂಗಿರಿ ಉಳವನ್ ರೈತ ಉತ್ಪಾದಕ ಸಂಸ್ಥೆಯ ರಚನೆಯೊಂದಿಗೆ ಪ್ರಾರಂಭವಾಗಿದ್ದು, ಅಂದಿನಿAದ ತಮಿಳುನಾಡು ಮತ್ತು ಕರ್ನಾಟಕದಾದ್ಯಂತ ೨೫ ರೈತ ಉತ್ಪಾದಕ ಸಂಸ್ಥೆಗಳಿಗೆ ವಿಸ್ತರಿಸಿದೆ. ಈ ರೈತ ಉತ್ಪಾದಕ ಸಂಸ್ಥೆಗಳು ೧೭,೦೦೦ ಕ್ಕೂ ಹೆಚ್ಚು ರೈತ ಸದಸ್ಯರನ್ನು ಹೊಂದಿದ್ದು, ಅವರಲ್ಲಿ ಶೇ. ೬೦ ಸಣ್ಣ ಮತ್ತು ಅತಿಸಣ್ಣ ರೈತರು ಮತ್ತು ಶೇ. ೧೫ರಷ್ಟು ಮಹಿಳೆಯರಿದ್ದಾರೆ. ಅವರು ಎಂಟು ಜಿಲ್ಲೆಗಳು ಮತ್ತು ೫೮೦ ಕ್ಕೂ ಹೆಚ್ಚು ಹಳ್ಳಿಗಳಲ್ಲಿ ೫೪,೦೦೦ ಎಕರೆಗೂ ಹೆಚ್ಚು ಪ್ರದೇಶದಲ್ಲಿ ಕೃಷಿ ಮಾಡುತ್ತಿದ್ದು, ತೆಂಗು, ಕಾಫಿ, ಬಾಳೆ ಮತ್ತು ಸಿರಿಧಾನ್ಯಗಳನ್ನು ಒಳಗೊಂಡAತೆ ೧೫ ಪ್ರಭೇದದ ಬೆಳೆಗಳನ್ನು ಬೆಳೆಯುತ್ತಾರೆ. ಒಟ್ಟಾರೆಯಾಗಿ, ಈ ರೈತ ಉತ್ಪಾದಕ ಸಂಸ್ಥೆಗಳು ರೂ. ೪೦೦ ಕೋಟಿಗೂ ಹೆಚ್ಚು ವಹಿವಾಟನ್ನು ದಾಖಲಿಸಿವೆ.