ನಾಪೋಕ್ಲು, ಅ. ೨೪: ಇಲ್ಲಿನ ಬಿಲ್ಲವ ಸಮಾಜ, ವತಿಯಿಂದ ಸಾಮೂಹಿಕ ಆಯುಧ ಪೂಜಾ ಕಾರ್ಯಕ್ರಮ ಸಂಘದ ನಿವೇಶನದಲ್ಲಿ ನಡೆಯಿತು.
ಪೂಜಾ ಕಾರ್ಯಕ್ರಮವನ್ನು ಶ್ರೀ ಭಗವತಿ ದೇವಾಲಯದ ಅರ್ಚಕರಾದ ಹರೀಶ್ ಭಟ್ ನೆರವೇರಿಸಿದರು.
ಇದೇ ಸಂದರ್ಭ ಬಿರ್ವಾಸ್ ಗೋಣಿಕೊಪ್ಪದ ವತಿಯಿಂದ ಆಯೋಜಿಸಲಾಗಿದ್ದ ೩ನೇ ವರ್ಷದ ‘ಪೂಜಾರಿ ಪ್ರೀಮಿಯರ್ ಲೀಗ್ -೨೦೨೬' ಕ್ರೀಡಾಕೂಟ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಬಿಲ್ಲವ ಸಮಾಜ ನಾಪೋಕ್ಲು ಪರವಾಗಿ ಭಾಗವಹಿಸಿ ಮಹಿಳೆಯರ ಥ್ರೋಬಾಲ್ನಲ್ಲಿ: ಪ್ರಥಮ ಹಾಗೂ ದ್ವಿತೀಯ ಸ್ಥಾನ, ಪುರುಷರ ಹಗ್ಗಜಗ್ಗಾಟದಲ್ಲಿ: ದ್ವಿತೀಯ ಸ್ಥಾನ, ಮಹಿಳೆಯರ ನೃತ್ಯ ಸ್ಪರ್ಧೆಯಲ್ಲಿ: ದ್ವಿತೀಯ ಸ್ಥಾನ, ಏಕ ನೃತ್ಯ ಸ್ಪರ್ಧೆಯಲ್ಲಿ: ಕೃತನ್ ಅವರಿಗೆ ಪ್ರಥಮ ಸ್ಥಾನ, ಸೇರಿದಂತೆ ವಿವಿಧ ವಿಭಾಗಗಳಲ್ಲಿ ವಿಜೇತರಾದ ಪ್ರತಿಭಾನ್ವಿತ ಕ್ರೀಡಾಪಟುಗಳನ್ನು ನಾಪೋಕ್ಲು ಬಿಲ್ಲವ ಸಮಾಜ ಅಭಿನಂದಿಸಿದರು.
ಕಾರ್ಯಕ್ರಮದಲ್ಲಿ ಬಿಲ್ಲವ ಸಮಾಜದ, ಪದಾಧಿಕಾರಿಗಳು, ಸದಸ್ಯರು ಹಾಗೂ ಸಮಾಜದವರು ಉಪಸ್ಥಿತರಿದ್ದರು.