ಶ್ರೀಮಂಗಲ, ಅ. ೨೪: ವಿವಿಧ ಸಂಸ್ಥೆಗಳಿಗೆ ವೇದಿಕೆ ನೀಡಿ ಕಲಾವಿದರ ಪ್ರತಿಭಾ ಪ್ರದರ್ಶನಕ್ಕೆ ಅವಕಾಶ ನೀಡುವುದರೊಂದಿಗೆ ಮುಂದಿನ ಪೀಳಿಗೆಗೆ ಕೊಡವ ಸಂಸ್ಕೃತಿಯನ್ನು ಕಲಿಸುವ ಮಹತ್ತರ ಕಾರ್ಯವನ್ನು ಮಾಡುತ್ತಿರುವ ತಾವಳಗೇರಿ ಮೂಂದ್ನಾಡ್ ಕೊಡವ ಸಮಾಜದ ಕಾರ್ಯ ಶ್ಲಾಘನೀಯ ಎಂದು ಬೆಳೆಗಾರ ಕೇಚಮಡ ವಾಸು ಉತ್ತಪ್ಪ ಅಭಿಪ್ರಾಯಪಟ್ಟರು.
ಟಿ.ಶೆಟ್ಟಿಗೇರಿಯಲ್ಲಿರುವ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಚಂಗ್ರಾAದಿ ಪತ್ತಾಲೋದಿ ಪೈತಾಂಡ್ ನಮ್ಮೆ ಕಾರ್ಯಕ್ರಮದಲ್ಲಿ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಅವರು ಈ ರೀತಿಯ ಕಾರ್ಯಕ್ರಮಗಳು ಮುಂದಿನ ಪೀಳಿಗೆಗೆ ದಾರಿದೀಪವಾಗಲಿದ್ದು ಪೋಷಕರು ಮಕ್ಕಳನ್ನು ಇಂತಹ ಕಾರ್ಯಕ್ರಮಗಳಿಗೆ ಕರೆತಂದು ತೋರಿಸಿಕೊಡಬೇಕೆಂದರು.
ಲೇಖಕಿ ಉಳುವಂಗಡ ಕಾವೇರಿ ಉದಯ ಮಾತನಾಡಿ, ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜವು ಸಂಸ್ಕೃತಿಯೊAದಿಗೆ ಸಾಹಿತ್ಯಿಕ ಚಟುವಟಿಕೆಗಳಿಗೂ ಒತ್ತು ನೀಡುತ್ತಿರುವುದು ಮೆಚ್ಚುವಂತದ್ದು. ಈ ರೀತಿಯ ಕಾರ್ಯಕ್ರಮಗಳು ಇನ್ನಷ್ಟು ನಡೆಯಲಿ ಎಂದು ಆಶಿಸಿದರು.
ಮತ್ತೋರ್ವ ಅತಿಥಿ ತೀತೀರ ಪ್ರಭು ಸುಬ್ಬಯ್ಯ ಮಾತನಾಡಿ ಇತಿಹಾಸವನ್ನು ಕೈಮಡ, ಐನ್ಮನೆ, ಕಲ್ಲಿನ ಶಾಸನಗಳು, ತಾಮ್ರಪತ್ರ ಇತ್ಯಾದಿಗಳನ್ನು ಪರಿಶೀಲಿಸುವುದರೊಂದಿಗೆ ಧೀರ್ಘ ಅಧ್ಯಯನ ಮಾಡಿ ತಿಳಿದುಕೊಳ್ಳಬಹುದು.
ಕೊಡವರ ಆಹಾರ ಪದ್ದತಿ ಹಾಗೂ ಜಾನಪದ ಕಲೆ, ಸಂಸ್ಕೃತಿ ಪ್ರಪಂಚ ಮೆಚ್ಚುವಂತದ್ದು, ಇದನ್ನೆಲ್ಲಾ ಪ್ರದರ್ಶಿಸಲು ವೇದಿಕೆ ನೀಡುತ್ತಿರುವ ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಚಂಗ್ರಾAದಿ ಪತ್ತಾಲೋದಿ ಕಾರ್ಯಕ್ರಮಕ್ಕೆ ಎಲ್ಲರೂ ಸಹಕಾರ ನೀಡಬೇಕೆಂದು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಅತಿಥಿಗಳಾದ ಕೊಡವ ಸಾಹಿತ್ಯ ಅಕಾಡೆಮಿಯ ಸದಸ್ಯರಾದ ಚೊಟ್ಟೆಯಂಡ ಸಂಜು ಕಾವೇರಪ್ಪ, ಕೊಂಡಿAಜಮ್ಮನ ಬಾಲಕೃಷ್ಣ, ಮೊಳ್ಳಕುಟ್ಟಡ ದಿನು ಬೋಜಪ್ಪ, ನಾಯಂದಿರ ಶಿವಾಜಿ, ಕೋಟ್ರಮಾಡ ಮಂಜು ಅಯ್ಯಪ್ಪ, ಕಾವೇರಿ ಕಾಲೇಜಿನ ಉಪನ್ಯಾಸಕಿ ಮಚ್ಚಮಾಡ ರೀತ್ಯಾ ಉತ್ತಪ್ಪ, ಕೇಚಮಡ ಬೀನ ಉತ್ತಪ್ಪ ಕಾರ್ಯಕ್ರಮಕ್ಕೆ ಶುಭ ಹಾರೈಸಿದರು.
ಈ ಸಂದರ್ಭ ನಡೆದ ಅಡುಗೆ ಪೈಪೋಟಿಯಲ್ಲಿ ಬಾಳೆನುರ್ಕ್ ಮಾಡುವ ಸ್ಪರ್ಧೆಯಲ್ಲಿ ಚೆಟ್ಟಂಗಡ ಪಿಂಕಿ ವಸಂತ್ ಪ್ರಥಮ, ಮಚ್ಚಮಾಡ ಕವಿತ ಸತೀಶ್ ದ್ವಿತೀಯ, ಬಾಚೀರ ಶೈಲ ಹಾಗೂ ಕೋಟ್ರಮಡ ನಿಶ ತೃತೀಯ ಸ್ಥಾನ ಪಡೆದರೆ ಕೋಡುಬಾಳೆ ಮಾಡುವ ಸ್ಪರ್ಧೆಯಲ್ಲಿ ಕಾಳಿಮಾಡ ಬೀನ ಪ್ರಥಮ, ಕಾಳಿಮಾಡ ಸೀಮ ದ್ವೀತೀಯ ಹಾಗೂ ಮಲ್ಲಮಡ ಶ್ಯಾಮಲ ತೃತೀಯ ಬಹುಮಾನ ಪಡೆದರು. ಗೋಣಿಕೊಪ್ಪ ಕಾವೇರಿ ಕಾಲೇಜು ವಿದ್ಯಾರ್ಥಿಗಳ ‘ಕೊಡವ ಜಾನಪದ ಚಂಗ್ರಾAದಿರ ಬೋಜ’ ಎಂಬ ನೃತ್ಯರೂಪಕ ಜನಮನ ಗೆದ್ದಿತು.
ಕಾರ್ಯಕ್ರಮದ ಆರಂಭದಲ್ಲಿ ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಸದಸ್ಯೆ ಚಟ್ಟಂಡ ರಶ್ಮಿ ಪ್ರಾರ್ಥಿಸಿ, ಕೊಡವ ಸಮಾಜದ ಕಾರ್ಯದರ್ಶಿ ಕೋಟ್ರಮಡ ಸುಮಂತ್ ಮಾದಪ್ಪ ಸ್ವಾಗತಿಸಿ, ಸಾಂಸ್ಕೃತಿಕ ಸಂಚಾಲಕ ಚೆಟ್ಟಂಗಡ ರವಿ ಸುಬ್ಬಯ್ಯ ನಿರೂಪಿಸಿ, ನಿರ್ದೇಶಕಿ ಚಂಗುಲAಡ ಅಶ್ವಿನಿ ವಂದಿಸಿದರು.
ತಾವಳಗೇರಿ ಮೂಂದ್ ನಾಡ್ ಕೊಡವ ಸಮಾಜದ ಖಜಾಂಚಿ ಚಂಗುಲAಡ ಸತೀಶ್, ಸಹ ಕಾರ್ಯದರ್ಶಿ ಬಾದುಮಂಡ ವಿಷ್ಣು ಕಾರ್ಯಪ್ಪ, ಕ್ರೀಡಾ ಕಾರ್ಯದರ್ಶಿ ತಡಿಯಂಗಡ ಶಮ್ಮಿ ಸುಬ್ಬಯ್ಯ, ನಿರ್ದೇಶಕರಾದ ತೀತೀರ ಅನಿತ ಸುಬ್ಬಯ್ಯ, ಕೋಟ್ರಮಡ ರೇಶ್ಮ ಕಾರ್ಯಪ್ಪ, ಮಾಣೀರ ದೀಪಕ್ ಕಾರ್ಯಕ್ರಮ ನಿರ್ವಹಿಸಿದರು.