ಮಡಿಕೇರಿ, ಅ. ೨೩: ಕರ್ನಾಟಕ ಪ್ಲಾಂಟರ್ಸ್ ಅಸೋಸಿಯೇಷನ್‌ನ ನೂತನ ಅಧ್ಯಕ್ಷರಾಗಿ ಆಯ್ಕೆಯಾಗಿರುವ ಮಾತಂಡ ಪೀಟು ಕಾರ್ಯಪ್ಪ ಅವರನ್ನು ಕೊಡವ ವ್ಯಾಪಾರೋದ್ಯಮಿಗಳ ಸೌಹಾರ್ದ ಕ್ರೆಡಿಟ್ ಕೋಆಪರೇಟಿವ್ ಲಿಮಿಟೆಡ್ ವತಿಯಿಂದ ಸನ್ಮಾನಿಸಲಾಯಿತು.

ಕೊಡವ ವ್ಯಾಪಾರೋದ್ಯಮಿಗಳ ಸೌಹಾರ್ದ ಕ್ರೆಡಿಟ್ ಕೋಆಪರೇಟಿವ್ ಲಿಮಿಟೆಡ್‌ನ ನಿರ್ದೇಶಕರೂ ಆಗಿರುವ ಪೀಟು ಕಾರ್ಯಪ್ಪ ಅವರು ಬೆಳೆಗಾರರ ಪರವಾಗಿ ಕೆಲಸ ನಿರ್ವಹಿಸಲಿ ಎಂದು ಪ್ರಮುಖರು ಶುಭ ಹಾರೈಸಿದರು. ನಗರದಲ್ಲಿರುವ ಕ್ರೆಡಿಟ್ ಕೋಆಪರೇಟಿವ್ ಕಚೇರಿಯಲ್ಲಿ ಸಂಘದ ಅಧ್ಯಕ್ಷ ಕುಂಡ್ಯೋಳAಡ ದಿನೇಶ್ ಕಾರ್ಯಪ್ಪ, ನಿರ್ದೇಶಕರುಗಳಾದ ಕುಕ್ಕೇರ ಜಯ ಚಿಣ್ಣಪ್ಪ, ಉದಿಯಂಡ ಚಂಗಪ್ಪ, ತಮ್ಮು ಪೂವಯ್ಯ, ಚೆಯ್ಯಂಡ ಸತ್ಯ ಮತ್ತಿತರರು ಹಾಜರಿದ್ದರು.