ಕುಶಾಲನಗರ, ಅ. ೨೩: ಎಸ್ ಐ ಆರ್ ಪ್ರಕ್ರಿಯೆಯನ್ನು ತಕ್ಷಣ ರದ್ದುಗೊಳಿಸುವಂತೆ ಆಗ್ರಹಿಸಿ ಕುಶಾಲನಗರದಲ್ಲಿ ಬೃಹತ್ ಪ್ರತಿಭಟನೆ ನಡೆಯಿತು.

ಸಂವಿಧಾನ ಮತ್ತು ಪ್ರಜಾಪ್ರಭುತ್ವ ರಕ್ಷಣಾ ವೇದಿಕೆ ಆಶ್ರಯದಲ್ಲಿ ನಡೆದ ಪ್ರತಿಭಟನಾ ರ‍್ಯಾಲಿಗೆ ಕುಶಾಲನಗರ ಬೈಚನಹಳ್ಳಿ ಬಳಿ ಕಾಂಗ್ರೆಸ್ ಪಕ್ಷದ ವಕ್ತಾರ ಲಕ್ಷö್ಮಣ್ ಚಾಲನೆ ನೀಡಿದರು.

ಮುಖ್ಯ ರಸ್ತೆಯಲ್ಲಿ ಮೆರವಣಿಗೆ ಸಾಗಿ ಕುಶಾಲನಗರ ಪಟ್ಟಣದ ಕಡೆಗೆ ತೆರಳುವ ಸಂದರ್ಭ ಸುರಿದ ಭಾರಿ ಮಳೆಯಿಂದ ಮೆರವಣಿಗೆಗೆ ಅಡ್ಡಿ ಉಂಟಾಯಿತು.

ದಲಿತ ಅಲ್ಪಸಂಖ್ಯಾತ ಬಡಜನರ ಮತದಾನದ ಹಕ್ಕನ್ನು ಕಸಿಯಲು ಕೇಂದ್ರ ಸರ್ಕಾರ ಯತ್ನಿಸುತ್ತಿದೆ ಎಂದು ಆರೋಪಿಸಿ ಪ್ರತಿಭಟನಾಕಾರರು ಎಐಆರ್ ಪ್ರಕ್ರಿಯೆಯನ್ನು ಕೂಡಲೇ ರದ್ದು ಗೊಳಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭ ಮಾತನಾಡಿದ ಲಕ್ಷö್ಮಣ್ ದೇಶದಲ್ಲಿ ಸಂವಿಧಾನ ಮೌಲ್ಯಗಳನ್ನು ಬದಿಗೊತ್ತಿ ಜನವಿರೋಧಿ ಧೋರಣೆ ನಡೆಯುತ್ತಿದೆ ಎಂದು ದೂರಿದರು.

ವೇದಿಕೆಯ ಸಂಚಾಲಕರಾದ ನಿರ್ವಾಣಪ್ಪ, ಪಿ ಎಂ ಹನೀಫ್, ಮಂಜುನಾಥ್, ಪ್ರೇಮ್ ಕುಮಾರ್, ಜಕ್ರಿಯ ಮತ್ತು ಸ್ಥಳೀಯ ಕೆಲವು ಸಂಘ ಸಂಸ್ಥೆಗಳ ಪ್ರಮುಖರು ವೇದಿಕೆಯ ಸದಸ್ಯರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.