ಕೋವರ್‌ಕೊಲ್ಲಿ ಇಂದ್ರೇಶ್

ಬೆAಗಳೂರು, ಅ. ೨೩: ಸಾಮಾಜಿಕ ಜಾಲತಾಣದ ಪೋಸ್ಟ್ಗೆ ಸಂಬAಧಿಸಿದ ದೂರುಗಳ ಮೇರೆಗೆ, ಯಾವುದೇ ಸ್ವಯಂ ನಿರ್ಧಾರಿತ ಬಂಧನಗಳು ನಡೆಯದಂತೆ ನೋಡಿಕೊಳ್ಳಲು ಪೊಲೀಸ್ ಮುಖ್ಯಸ್ಥರಿಗೆ ಸೂಕ್ತ ಆಡಳಿತಾತ್ಮಕ ನಿರ್ದೇಶನಗಳನ್ನು ನೀಡುವಂತೆ ಕರ್ನಾಟಕ ಹೈಕೋರ್ಟ್ ಸೂಚಿಸಿದೆ.

ಅಪರಾಧಗಳ ನೋಂದಣಿ, ಅಭಿವ್ಯಕ್ತಿ ಸ್ವಾತಂತ್ರ‍್ಯದ ರಕ್ಷಣೆ ಮತ್ತು ಅನಗತ್ಯ ಬಂಧನಗಳ ವಿರುದ್ಧದ ಸುರಕ್ಷತಾ ಕ್ರಮಗಳಿಗೆ ಸಂಬAಧಿಸಿದ ನಿಯಮಗಳನ್ನು ಎಲ್ಲಾ ಸಂಬAಧಪಟ್ಟ ಪೊಲೀಸ್ ಅಧಿಕಾರಿಗಳ ಗಮನಕ್ಕೆ ತರುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಪೊಲೀಸ್ ಮಹಾನಿರೀಕ್ಷಕರಿಗೆ (ಆಉP & IಉP) ನ್ಯಾಯಾಲಯ ನಿರ್ದೇಶನ ನೀಡಿದೆ.

ಒಂದು ಅಪರಾಧ ಪ್ರಕರಣ ದಾಖಲಾದ ಕೂಡಲೇ ಸ್ವಯಂ ನಿರ್ಧರಿಸಿ ಬಂಧನವಾಗಬಾರದು ಎಂದು ನ್ಯಾಯಾಲಯ ಹೇಳಿದೆ. “ಸಂಬAಧಪಟ್ಟ ಪೊಲೀಸರು ಬಿಎನ್‌ಎಸ್‌ಎಸ್ (ಃಓSS) ನ ಸೆಕ್ಷನ್ ೩೫ (ಆರೋಪಿಗೆ ನೋಟಿಸ್ ನೀಡುವುದು) ಅನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಜೊತೆಗೆ, ಸತೇಂದರ್ ಕುಮಾರ್, ಜೋಗಿಂದರ್ ಕುಮಾರ್ ಮತ್ತು ಅರ್ನೇಶ್‌ಕುಮಾರ್ ಪ್ರಕರಣಗಳಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ಸೂಚನೆಗಳನ್ನು ಅನುಸರಿಸಬೇಕು. ಬಂಧನಕ್ಕೆ ಅಗತ್ಯವಾದ ಕಾನೂನು ಷರತ್ತುಗಳು ಪೂರೈಸಲ್ಪಡದಿದ್ದಲ್ಲಿ, ಬಿಎನ್‌ಎಸ್‌ಎಸ್‌ನ ಸೆಕ್ಷನ್ ೩೫(೩) ರ ಅಡಿಯಲ್ಲಿ ಸೂಚಿಸಲಾದ ಕಾರ್ಯವಿಧಾನವನ್ನು ಅನುಸರಿಸಬೇಕು” ಎಂದು ನ್ಯಾಯಮೂರ್ತಿ ಎಂ. ನಾಗಪ್ರಸನ್ನ ತಿಳಿಸಿದ್ದಾರೆ.

“ಸಾಮಾಜಿಕ ಜಾಲತಾಣದ ಪೋಸ್ಟ್, ಹೇಳಿಕೆ ಅಥವಾ ಅಭಿವ್ಯಕ್ತಿಗೆ ಸಂಬAಧಿಸಿದAತೆ ಅಪರಾಧ ನಡೆದಿದೆ ಎಂದು ದೂರು ಬಂದಾಗ, ಪೊಲೀಸರು ಆ ಆರೋಪಗಳನ್ನು ಪರಿಶೀಲಿಸಬೇಕು. ಮೇಲ್ನೋಟಕ್ಕೆ ಆ ಆರೋಪಗಳು, ಅಪರಾಧಕ್ಕೆ ಅಗತ್ಯವಾದ ಮೂಲಭೂತ ಅಂಶಗಳನ್ನು ಒಳಗೊಂಡಿವೆಯೇ ಎಂದು ನೋಡಬೇಕು. ಕೇವಲ ಕಾನೂನಿನ ಕಲಮುಗಳಲ್ಲಿರುವ ಪದಗಳನ್ನು ಯಥಾವತ್ತಾಗಿ ಉಲ್ಲೇಖಿಸುವುದು, ಅಪರಾಧದ ಅಂಶಗಳನ್ನು ವಿವರಿಸುವ ವಾಸ್ತವಿಕ ಆರೋಪಗಳಿಗೆ ಪರ್ಯಾಯವಾಗಲಾರದು.” ಎಂದು ಹೇಳಿರುವ ನ್ಯಾಯಾಲಯ , “ಒಂದೇ ಘಟನೆ, ವ್ಯವಹಾರ ಅಥವಾ ಸಾಮಾಜಿಕ ಜಾಲತಾಣದಲ್ಲಿನ ಬಹುತೇಕ ಒಂದೇ ರೀತಿಯ ಅಭಿವ್ಯಕ್ತಿಗೆ ಸಂಬAಧಿಸಿದAತೆ ದೂರುಗಳು ಬಂದಾಗ, ಆ ಘಟನೆಗೆ ಸಂಬAಧಿಸಿದAತೆ ಈಗಾಗಲೇ ಯಾವುದೇ ಪ್ರಕರಣ ದಾಖಲಾಗಿದೆಯೇ ಎಂಬುದನ್ನು ಸಂಬAಧಪಟ್ಟ ಪೊಲೀಸ್ ಠಾಣೆಯು ಪರಿಶೀಲಿಸಬೇಕು. ಒಂದೇ ಘಟನೆಗೆ ಸಂಬAಧಿಸಿದAತೆ ಅನೇಕ ದೂರುಗಳು ಬಂದಲ್ಲಿ, ಅಂತಹ ಸಂದರ್ಭಗಳಲ್ಲಿ ‘ಸತತ ಎಫ್‌ಐಆರ್’ಗಳಿಗೆ (suಛಿಛಿessive ಈIಖs) ಅನ್ವಯಿಸುವ ತತ್ವಗಳ ಪ್ರಕಾರ ಕ್ರಮ ಕೈಗೊಳ್ಳಬೇಕು. ದೂರುದಾರರು ಬೇರೆ ಬೇರೆ ವ್ಯಕ್ತಿಗಳಾಗಿದ್ದಾರೆ ಎಂಬ ಕಾರಣಕ್ಕಾಗಿಯೇ ಹೊಸ ಪ್ರಕರಣವನ್ನು ದಾಖಲಿಸಬಾರದು; ಆರೋಪಗಳು ಕಾನೂನುಬದ್ಧವಾಗಿ ಪ್ರತ್ಯೇಕವಾದ ಘಟನೆಯನ್ನು ಅಥವಾ ಸ್ವತಂತ್ರವಾಗಿ ಪ್ರಕರಣ ದಾಖಲಿಸಲು ಯೋಗ್ಯವಾದ ಅಪರಾಧವನ್ನು ಸೂಚಿಸಿದರೆ ಮಾತ್ರ ಹೊಸ ಪ್ರಕರಣವನ್ನು ದಾಖಲಿಸಬೇಕು.” ಎಂದು ಹೇಳಿದೆ.

ಸಾಮಾಜಿಕ ಜಾಲತಾಣದಲ್ಲಿನ ಪೋಸ್ಟ್ ಒಂದನ್ನು ಮರುಹಂಚಿಕೆ (ಡಿeಠಿosಣ) ಮಾಡಿದ್ದಕ್ಕಾಗಿ ಪುತ್ತೂರು ನಗರ ಪೊಲೀಸ್ ಠಾಣೆಯಲ್ಲಿ ದಾಖಲಿಸಲಾಗಿದ್ದ ಪ್ರಕರಣವನ್ನು ರದ್ದುಗೊಳಿಸುವ ಸಂದರ್ಭದಲ್ಲಿ ನ್ಯಾಯಮೂರ್ತಿ ನಾಗಪ್ರಸನ್ನ ಅವರು ಈ ಮಾರ್ಗಸೂಚಿಗಳನ್ನು ನೀಡಿದರು. ಬೆಂಗಳೂರಿನ ನಿವಾಸಿಯಾದ ಅರ್ಜಿದಾರ ಸಂದೀಪ್ ಕುಮಾರ್, ಜೀಪಿನಲ್ಲಿದ್ದ ಆರು ಮಂದಿ ವ್ಯಕ್ತಿಗಳು ಮಹಿಳೆಯೊಬ್ಬರನ್ನು ಹಿಂಬಾಲಿಸಿದ ಘಟನೆಯ ಬಗ್ಗೆ ತಾನು ಕೇವಲ ಸಾಮಾಜಿಕ ಜಾಲತಾಣದಲ್ಲಿ ಮರುಹಂಚಿಕೆ ಮಾಡಿದ್ದೆ ಅಷ್ಟೇ ಎಂದು ತಿಳಿಸಿದ್ದರು.

ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ತಾಲೂಕಿನ ಪುರುಷರಕಟ್ಟೆ ಎನ್ನುವಲ್ಲಿ ಕೆಲಸಕ್ಕೆ ತೆರಳುತ್ತಿದ್ದ ಮಹಿಳೆಯೊಬ್ಬರಿಗೆ ಬೆದರಿಕೆ ಹಾಕಿ, ಅವರನ್ನು ಫಾಲೋ ಮಾಡಿದ ಆರೋಪದ ಮೇಲೆ ಆರು ಮಂದಿ ಯುವಕರನ್ನು ಪುತ್ತೂರು ಪೊಲೀಸರು ತಮ್ಮ ವಶಕ್ಕೆ ಪಡೆದುಕೊಂಡಿದ್ದರು. ಈ ಸುದ್ದಿಯನ್ನು “ಕರ್ನಾಟಕ ಪೋರ್ಟ್ ಫೋಲಿಯೋ'' ಎನ್ನುವ ಎಕ್ಸ್ ಖಾತೆ ರಿಪೋಸ್ಟ್ ಮಾಡಿತ್ತು. ಇದಕ್ಕಾಗಿ, ಇವರ ಅಡ್ಮಿನ್ ವಿರುದ್ಧ ಎಫ್‌ಐಆರ್ ದಾಖಲಾಗಿತ್ತು. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಪ್ರತಿವಾದಿಗಳು, ಇವರು ಸುಳ್ಳು ಮಾಹಿತಿಯನ್ನು ಹರಡುತ್ತಾ, ಕೋಮುದ್ವೇಷಕ್ಕೆ ಕಾರಣರಾಗುತ್ತಿದ್ದಾರೆ ಎಂದು ಆರೋಪಿಸಿದ್ದರು. ಈ ಹಿನ್ನಲೆಯಲ್ಲಿ ಕರ್ನಾಟಕ ಪೋರ್ಟ್ ಫೋಲಿಯೋ ಮೇಲೆ, ಃಓS ೩೫೩(೨) ಅಡಿಯಲ್ಲಿ ದೂರು ದಾಖಲಾಗಿತ್ತು. ಆದರೆ, ಪ್ರತಿವಾದಿಗಳ ದೂರಿಗೆ ಸಂಬAಧಿಸಿದAತೆ ಸಾಕ್ಷಿಯಿಲ್ಲ ಮತ್ತು ದುರುದ್ದೇಶ ಸಾಬೀತಾಗಿಲ್ಲ ಎಂದು ಹೈಕೋರ್ಟ್, ಎಫ್‌ಐಆರ್ ಅನ್ನು ರದ್ದುಗೊಳಿಸಿತ್ತು.

ಅದೇ ಘಟನೆಗೆ ಸಂಬAಧಿಸಿದAತೆ, ಅದೇ ಪೊಲೀಸ್ ಠಾಣೆಯಲ್ಲಿ ಭಾರತೀಯ ನ್ಯಾಯ ಸಂಹಿತೆ (ಃಓS) ಸೆಕ್ಷನ್ ೩೫೩ರ ಅಡಿಯಲ್ಲಿ (ಸಾರ್ವಜನಿಕ ಗೊಂದಲಕ್ಕೆ ಕಾರಣವಾಗುವ ಹೇಳಿಕೆಗಳು) ಸುಮಾರು ಏಳು ಪ್ರಕರಣಗಳನ್ನು ದಾಖಲಿಸಲಾಗಿದೆ ಎಂದು ನ್ಯಾಯಾಲಯಕ್ಕೆ ಮಾಹಿತಿ ನೀಡಲಾಯಿತು.

ದೂರಿನಲ್ಲಿ ಅಥವಾ ಟ್ವೀಟ್‌ನಲ್ಲಿ, ಕೋಮು ಸಾಮರಸ್ಯವನ್ನು ಕದಡುವ ಉದ್ದೇಶದಿಂದ ಯಾವುದೇ ಧಾರ್ಮಿಕ ಗುಂಪುಗಳ ಹೆಸರನ್ನು ಎಲ್ಲಿಯೂ ಉಲ್ಲೇಖಿಸಿಲ್ಲ ಎಂದು ನ್ಯಾಯಾಲಯ ಗಮನಿಸಿತು. “ಒಂದೇ ಘಟನೆಯ ವರದಿಗೆ ಸಂಬAಧಿಸಿದAತೆ, ಒಂದರ ಮೇಲೊಂದರAತೆ ಪ್ರಕರಣಗಳನ್ನು ಅದೇ ಪೊಲೀಸ್ ಠಾಣೆಯು ದಾಖಲಿಸುತ್ತಿರುವುದು ಆಘಾತಕಾರಿ ಸಂಗತಿಯಾಗಿದೆ. ಯಾವುದೇ ಅಪರಾಧದ ಅಂಶಗಳಿಲ್ಲದಿದ್ದರೂ ಮತ್ತು ಯಾವುದೇ ಪ್ರಾಥಮಿಕ ತನಿಖೆಯನ್ನು ನಡೆಸದಿದ್ದರೂ, ಕೇವಲ ದೂರು ಬಂದ ತಕ್ಷಣ ಪೊಲೀಸರು ಒಂದೇ ಘಟನೆಗೆ ಸಂಬAಧಿಸಿದAತೆ ಪದೇ ಪದೇ ಪ್ರಕರಣಗಳನ್ನು ದಾಖಲಿಸುತ್ತಿರುವುದು ಹೇಗೆ?” ಎಂದು ನ್ಯಾಯಾಲಯ ಪ್ರಶ್ನಿಸಿತು.