ಮಡಿಕೇರಿ, ಅ. ೨೩: ಮಡಿಕೇರಿಯ ಶ್ರೀ ವಿನಾಯಕ ಕೊಡವಕೇರಿಯ ೨೦೨೬ನೇ ಸಾಲಿನ ಕೈಲ್ಪೊಳ್ದ್ ಒತ್ತೋರ್ಮೆ ಕೂಟ ಸಮಾರಂಭ ಕೊಡವ ಸಮಾಜ ಸಭಾಂಗಣದಲ್ಲಿ ಕೇರಿಯ ಅಧ್ಯಕ್ಷ ಪೆಮ್ಮಡಿಯಂಡ ಎಂ. ಉತ್ತಪ್ಪ ಅಧ್ಯಕ್ಷತೆಯಲ್ಲಿ ಜರುಗಿತು.
ದೇವರಲ್ಲಿ ಪ್ರಾರ್ಥನೆಯೊಂದಿಗೆ ವಿವಿಧ ಸ್ಪರ್ಧೆಗಳು ನಡೆಯಿತು. ಸಭಾ ಕಾರ್ಯಕ್ರಮ ಬೊಟ್ಟೋಳಂಡ ಕಾಶಿ ಅಚ್ಚಯ್ಯ ಅವರ ದೇವರ ಪ್ರಾರ್ಥನೆಯೊಂದಿಗೆ ಚಾಲನೆಗೊಂಡಿತು.
ಅಧ್ಯಕ್ಷರು ಸಭೆಗೆ ಸ್ವಾಗತ ಬಯಸಿ ಕೇರಿಯು ಸಾಗಿ ಬಂದ ರೀತಿ, ಕಷ್ಟ - ಸುಖದಲ್ಲಿ ಸದಸ್ಯರುಗಳು ಪರಸ್ಪರ ಸಹಕಾರ ನೀಡುತ್ತಾ ಬರುತ್ತಿದ್ದು ಅಚಾರ, ವಿಚಾರ, ಪದ್ಧತಿ, ಪರಂಪರೆಯನ್ನು ಬೆಳೆಸಿಕೊಳ್ಳುವುದು, ಪ್ರೀತಿ - ವಿಶ್ವಾಸದಿಂದ ಬದುಕುವುದು ಈಗಿನ ಪರಿಸ್ಥಿತಿಯಲ್ಲಿ ಬಹು ಮುಖ್ಯ.
ಜನಾಂಗ ಬಾಂಧವರು ಕ್ಷೀಣಿಸುತ್ತಿರುವುದು ದುಃಖಕರ ಎಂದು ಅಭಿಪ್ರಾಯಪಟ್ಟರು. ಸ್ಪರ್ಧೆಯಲ್ಲಿ ವಿಜೇತರಿಗೆ ನಗದು ಬಹುಮನ ವಿತರಿಸಲಾಯಿತು.
ಸದಸ್ಯ ಲೆ.ಕ. ಮುಲ್ಲೇರ ಕಾವೇರಪ್ಪ ಮಾತನಾಡಿ, ಜನಾಂಗದವರಲ್ಲಿ ಸಂಪ್ರದಾಯ, ಉಡುಪು - ತೊಡುಪುಗಳಲ್ಲಿ ಆಸಕ್ತಿ ಕಮ್ಮಿಯಾಗುವುದರ ಬಗ್ಗೆ ವಿಷಾದ ವ್ಯಕ್ತಪಡಿಸಿ ಯುವ ಜನಾಂಗಕ್ಕೆ ಕೆಲವು ಸೂಕ್ಷö್ಮತೆಯ ವಿಚಾರವನ್ನು ತಿಳಿಹೇಳಿದರು.
ಉಪಾಧ್ಯಕ್ಷೆ ನೆರವಂಡ ಅನಿತಾ ಪೂವಯ್ಯ ವಂದಿಸಿದರು. ರಾಷ್ಟç ಗೀತೆಯಯೊಂದಿಗೆ ಸಭಾ ಕಾರ್ಯಕ್ರಮ ಮುಕ್ತಾಯಗೊಂಡ ನಂತರ ಊಟೋಪಚಾರದಲ್ಲಿ ಸಮಾರಂಭ ಕೊನೆಗೊಂಡಿತು.
ವೇದಿಕೆಯಲ್ಲಿ ಖಜಾಂಚಿ ಕಾಂಡೇರ ಲಲ್ಲು ಕುಟ್ಟಪ್ಪ, ನಿರ್ದೇಶಕರಾದ ಕುಡುವಂಡ ಸಾಬು ಉತ್ತಪ್ಪ, ಬಲ್ಯಂಡ ವಿಜು ನಂಜಪ್ಪ, ಚೆಟ್ಟಿಯಾರಂಡ ಸುರೇಶ್ ಉತ್ತಯ್ಯ, ಕುಂಡ್ಯೋಳAಡ ಸಂಜು ಅಯ್ಯಪ್ಪ, ಬೊಟ್ಟೋಳಂಡ ಶಾಂತಿ ಅಚ್ಚಯ್ಯ, ಪುದಿಯೊಕ್ಕಡ ಕಾಶಿ ಕರುಂಬಯ್ಯ, ಚೊಟ್ಟೆಯಂಡ ಶರತ್, ಮಂಡೇಟಿರ ಅಶ್ವಿನ್, ಆಪಾಡಂಡ ರವಿ ಚಿಟ್ಯಪ್ಪ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಚೊಟ್ಟೆಯಂಡ ಸಂಜು ಕಾವೇರಪ್ಪ ಉಪಸ್ಥಿತರಿದ್ದರು.