ಇಂದಿನಿAದಲೇ ರಾಜಾಸೀಟ್ ರಸ್ತೆ

ಸಭೆಯಲ್ಲಿ ಸದಸ್ಯ ರಾಜೇಶ್ ಕಳೆದ ಸಭೆಯಲ್ಲಿ ಸೂಚಿಸಿದಂತೆ ತಾ.೨೫ರಿಂದ ರಾಜಾಸೀಟ್ ರಸ್ತೆ ಕಾಮಗಾರಿ ಆರಂಭ ಮಾಡಬೇಕಿದೆ, ಆದರೆ ರಸ್ತೆ ಬಂದ್ ಮಾಡಬೇಕಿದ್ದು, ಅದರಲ್ಲಿ ಸಮಸ್ಯೆಯಿದೆ ಹಾಗಾಗಿ ಜಿಲ್ಲಾಧಿಕಾರಿಗಳನ್ನು ಭೇಟಿಯಾಗಿ ಅನುಮತಿ ಪಡೆಯಬೇಕೆಂದರು. ಪ್ರತಿಕ್ರಿಯಿಸಿದ ಶಾಸಕರು, ಇಂದು ಸಭೆಯ ಬಳಿಕ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ತಾ.೨೪ರಿಂದ( ಇಂದಿನಿAದ) ಕೆಲಸ ಆರಂಭಿಸುವAತೆ ಸೂಚಿಸಿದರು. ಇದರಿಂದ ರಾಜಾಸೀಟ್ ಕಡೆಗೆ ತೆರಳುವ ಪ್ರವಾಸಿಗರಿಗೆ ತೊಂದರೆಯಾಗಬಹುದು, ಆದರೂ ಕೆಲಸ ಆಗಬೇಕಿದೆ, ಆರಂಭ ಮಾಡುವಂತೆ ಹೇಳೀದರು. ಸದಸ್ಯ ಸತೀಶ್ ಕುಮಾರ್ ಮಾತನಾಡಿ; ಕೆಲಸ ಆರಂಭಿಸೋಣ ಕೇಸ್ ಹಾಕಿದರೆ ಎದುರಿಸೋಣ ಎಂದು ಹೇಳಿದರು. ಸದಸ್ಯ ರಮೇಶ್ ಮಾತನಾಡಿ; ಅಭಿವೃದ್ಧಿ ಕಾರ್ಯಕ್ಕಾಗಿ ರಸ್ತೆ ಬಂದ್ ಮಾಡಿದರೆ ಕೇಸ್ ಹಾಕುವ ಹಾಗಿಲ್ಲ ಎಂದು ಹೇಳಿದರು. ಉಪಾಧ್ಯಕ್ಷ ಮಹೇಶ್ ಜೈನಿ ಮಾತನಾಡಿ ರಾಜಾಸೀಟ್‌ಗೆ ತೆರಳಲು ಬದಲಿ ರಸ್ತೆಗಳಿವೆ, ತೊಂದರೆಯಾಗುವದಿಲ್ಲವೆAದು ಹೇಳಿದರು.

ಮಡಿಕೇರಿ ನಗರ ಸಭೆಯ ಆಡಳಿತ ಮಂಡಳಿ ಅವಧಿ ಇದೇ ತಾ.೨೮ಕ್ಕೆ ಕೊನೆಗಾಣಲಿದೆ. ಹಾಗಾಗಿ ಇಂದು ನಡೆದ ಕೊನೆಯ ಅವಧಿಯ ಸಭೆಯಲ್ಲಿ ನಗರಸಭೆ ಹಾಗೂ ಮಡಿಕೇರಿ ದಸರಾಗೆ ಹೆಚ್ಚಿನ ಅನುದಾನ ತರುವುದರೊಂದಿಗೆ ಎಲ್ಲ ರೀತಿಯ ಸಹಕಾರ ನೀಡಿದ ಕ್ಷೇತ್ರದ ಶಾಸಕ ಡಾ. ಮಂತರ್ ಗೌಡ ಅವರನ್ನು ನಗರ ಸಭೆಯ ಪರವಾಗಿ ಸನ್ಮಾನಿಸಿ ಗೌರವಿಸಲಾಯಿತು. ಅಧ್ಯಕ್ಷರಾದಿಯಾಗಿ ಸದಸ್ಯರುಗಳು ಶಾಸಕರನ್ನು ಅಭಿನಂದಿಸಿದರು. ಜೊತೆಗೆ ದಸರಾ ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ನೀಡಿದ ಸಹಕಾರಕ್ಕಾಗಿ ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ಶಾಸಕರಿಗೆ ನೆನಪಿನ ಕಾಣಿಕೆ ನೀಡಿ ಅಭಿನಂದಿಸಿದರು.