ಶ್ರೀಮಂಗಲ, ಅ. ೨೨: ಕೊಡವರ ಕುಲದೇವಿ ಕಾವೇರಿ ತಾಯಿಯ ಹೆಸರಿನಲ್ಲಿ ಹತ್ತು ದಿನಗಳವರೆಗೆ ಮಕ್ಕಳು, ಯುವಕ-ಯುವತಿಯರು, ಹಿರಿಯರು ಸೇರಿದಂತೆ ಎಲ್ಲರನ್ನೊಳಗೊಂಡು ಜನೋತ್ಸವದ ರೀತಿಯಲ್ಲಿ ಚಂಗ್ರಾAದಿ ಪತ್ತಾಲೋದಿ ಕಾರ್ಯಕ್ರಮ ನಡೆಸುತ್ತಿರುವುದು ತಾವಳಗೇರಿ ಮೂಂದ್ನಾಡ್ ಕೊಡವ ಸಮಾಜ ಮಾತ್ರ ಎಂಬುದು ಹೆಮ್ಮೆಯ ವಿಚಾರವಾಗಿದೆ ಎಂದು ಬ್ರಹ್ಮಗಿರಿ ಕೊಡವ ವಾರಪತ್ರಿಕೆಯ ಸಂಪಾದಕ, ಕೊಡವ ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ಉಳ್ಳಿಯಡ ಎಂ. ಪೂವಯ್ಯ ಮೆಚ್ಚುಗೆಯ ನುಡಿಯನ್ನಾಡಿದರು.
ಟಿ. ಶೆಟ್ಟಿಗೇರಿಯಲ್ಲಿರುವ ತಾವಳಗೇರಿ ಮೂಂದ್ನಾಡ್ ಕೊಡವ ಸಮಾಜದ ಚಂಗ್ರಾAದಿ ಪತ್ತಾಲೋದಿ ಪೈತಾಂಡ್ ನಮ್ಮೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಎಲೆಮರೆಯ ಕಾಯಿಯಂತಿರುವ ಹಲವು ಪ್ರತಿಭೆಗಳಿಗೆ ವೇದಿಕೆ ನೀಡುವ ಕಾರ್ಯಕ್ರಮ ಇದಾಗಿದ್ದು, ಎಲ್ಲರೂ ಈ ಅವಕಾಶವನ್ನು ಬಳಸಿಕೊಂಡು ತಮ್ಮಲ್ಲಿರುವ ಪ್ರತಿಭೆಯನ್ನು ಪ್ರದರ್ಶಿಸಬೇಕು. ತನ್ಮೂಲಕ ಕಾವೇರಿ ತಾಯಿಯ ಸೇವೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡು ತಾಯಿಯ ಕೃಪೆಗೆ ಪಾತ್ರರಾಗುವುದರೊಂದಿಗೆ ಈ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಬೇಕು. ಹತ್ತು ದಿನಗಳವರೆಗೆ ವಿವಿಧ ತಂಡಗಳಿAದ ಸಾಂಸ್ಕೃತಿಕ ಪ್ರದರ್ಶನ ಮಾಡಿಸುತ್ತಿರುವುದು ಸಾಮಾನ್ಯ ಕೆಲಸವಲ್ಲ. ಈ ಕಾರ್ಯಕ್ಕೆ ನಾಡಿನ ಎಲ್ಲರೂ ಕೈಜೋಡಿಸಬೇಕು. ಹತ್ತನೆ ವರ್ಷದ ಈ ಕಾರ್ಯಕ್ರಮ ಯಶಸ್ಸು ಕಾಣುವುದರೊಂದಿಗೆ ಪ್ರತೀ ವರ್ಷ ಅತ್ಯುತ್ತಮವಾಗಿ ಚಂಗ್ರಾAದಿ ಪತ್ತಾಲೋದಿ ಕಾರ್ಯಕ್ರಮ ನಡೆಯಲಿ ಎಂದು ಹಾರೈಸಿದರು.
ಮತ್ತೋರ್ವ ಮುಖ್ಯ ಅತಿಥಿ ಲೋಪಮುದ್ರ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಮುಕ್ಕಾಟಿರ ಅಮೃತ್ ನಾಣಯ್ಯ ಮಾತನಾಡಿ, ೩೨ನೆ ವಯಸ್ಸಿನಲ್ಲಿ ಕಷ್ಟಪಟ್ಟು ಒಂದೆರಡು ಕಿ.ಮೀ. ಓಡಲು ಪ್ರಯತ್ನಿಸಿದ ತಾನು ಈಗ ಇಷ್ಟಪಟ್ಟು ೪೨ ಕಿ.ಮೀ.ವರೆಗೆ ಓಡುತ್ತಿದ್ದೇನೆ ಎಂಬ ತಮ್ಮ ಉದಾಹರಣೆಯನ್ನು ಹೇಳುವುದರೊಂದಿಗೆ ಯಾವುದೇ ಕಾರ್ಯವನ್ನು ಇಷ್ಟಪಟ್ಟು ಛಲಬಿಡದೆ ದೃಢ ನಿಶ್ಚಯದಿಂದ ಮಾಡಿದರೆ ಯಶಸ್ಸು ಕಾಣಬಹುದು ಎಂಬುದಕ್ಕೆ ತಾವಳಗೇರಿ ಮೂಂದ್ನಾಡ್ ಕೊಡವ ಸಮಾಜದ ಈ ಚಂಗ್ರಾAದಿ ಪತ್ತಾಲೋದಿ ಕಾರ್ಯಕ್ರಮ ಸಾಕ್ಷಿಯಾಗಿದೆ. ಎಷ್ಟೇ ಕಷ್ಟವಾದರೂ ನಿಲ್ಲಿಸಬಾರದೆಂಬ ನಿಶ್ಚಯದಿಂದ ಕೊಡವ ಸಮಾಜದ ಅಧ್ಯಕ್ಷ ಹಾಗೂ ಆಡಳಿತ ಮಂಡಳಿಯವರು ಸಂಕಲ್ಪ ಮಾಡಿಕೊಂಡು ಪ್ರಯತ್ನಿಸುತ್ತಿರುವುದರಿಂದ ಈ ಕಾರ್ಯಕ್ರಮ ಯಶಸ್ವೀ ಹತ್ತನೆ ವರ್ಷಾಚರಣೆಯನ್ನು ವಿಜೃಂಭಣೆಯಿAದ ಆಚರಿಸುತ್ತಿದೆ ಎಂದರು. ಸಣ್ಣ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ತಮ್ಮ ಪ್ರತಿಭೆಯ ಪ್ರದರ್ಶನ ಮಾಡುವುದರೊಂದಿಗೆ ಕೊಡವ ಸಂಸ್ಕೃತಿಯ ಬಗ್ಗೆ ಹೆಚ್ಚಿನ ಮಾಹಿತಿ ಪಡೆಯುವಂತಾಗಲಿ. ಕೊಡವ ಸಂಸ್ಕೃತಿಯ ಯಾವುದೇ ಕಾರ್ಯಕ್ರಮಕ್ಕೆ ನಮ್ಮ ಸಹಕಾರ ಇದ್ದೇ ಇರುತ್ತದೆ. ಮುಂದಿನ ದಿನಗಳಲ್ಲಿ ತಾವಳಗೇರಿ ಮೂಂದ್ನಾಡ್ ಕೊಡವ ಸಮಾಜದಲ್ಲಿ ಉಚಿತ ಆರೋಗ್ಯ ಶಿಬಿರ ನಡೆಸಲು ಎಲ್ಲಾ ರೀತಿಯ ಸಹಕಾರ ನೀಡುವ ಭರವಸೆ ನೀಡಿದರು.
ಲೋಪಮುದ್ರ ದೃಷ್ಠಿ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ಮುಕ್ಕಾಟಿರ ಸೌಮ್ಯ ಗಣೇಶ್ ನಾಣಯ್ಯ ಮಾತನಾಡಿ, ಇದು ಮಕ್ಕಳಲ್ಲಿ ಮನೋಬಲ, ಆತ್ಮಸ್ಥೆöÊರ್ಯ ಹೆಚ್ಚಿಸುವ ಮಹತ್ತರ ಕಾರ್ಯವಾಗಿದೆ. ಮಕ್ಕಳಿಗೆ ಪ್ರಾಥಮಿಕ ಹಂತದಲ್ಲಿರುವಾಗಲೇ ಕೊಡವ ಸಂಸ್ಕೃತಿಯನ್ನು ಕಲಿಸಬೇಕು. ಈ ಸಣ್ಣ ವಯಸ್ಸಿನಲ್ಲಿ ಕಲಿಯುವುದು ಬಹಳ ಸುಲಭ. ಸಣ್ಣ ವಯಸ್ಸಿನಲ್ಲಿ ಕಲಿತರೆ ನಂಬಿಕೆ ಬಲಗೊಳ್ಳಲು ಸಾಧ್ಯವಾಗುತ್ತದೆ. ಎಲ್ಲರೂ ಈ ಅವಕಾಶವನ್ನು ಬಳಸಿಕೊಂಡು ಕೊಡವ ಸಮಾಜದಿಂದ ಇನ್ನಷ್ಟು ಉತ್ತಮ ಕಾರ್ಯಕ್ರಮ ನಡೆಯಲು ಸಹಕರಿಸಬೇಕೆಂದು ಕರೆ ನೀಡಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾವಳಗೇರಿ ಮೂಂದ್ನಾಡ್ ಕೊಡವ ಸಮಾಜದ ಅಧ್ಯಕ್ಷ ಕೈಬಿಲೀರ ಹರೀಶ್ ಅಪ್ಪಯ್ಯ ಪ್ರಾಸ್ತಾವಿಕ ಮಾತನಾಡಿ, ನಮ್ಮ ಕೊಡವ ಸಮಾಜ ಕೊಡವ ಸಂಸ್ಕೃತಿಯನ್ನು ಉಳಿಸಿ ಬೆಳೆಸುವ ನಿಟ್ಟಿನಲ್ಲಿ ಚಂಗ್ರಾAದಿ ಪತ್ತಾಲೋದಿ ಕಾರ್ಯಕ್ರಮ ಮಾಡುವುದರೊಂದಿಗೆ ಕೊಡವರ ಜನಸಂಖ್ಯೆ ವೃದ್ಧಿಸಲು ಪ್ರೋತ್ಸಾಹಿಸುವ ಉದ್ದೇಶದಿಂದ ತಾವಳಗೇರಿ ಮೂಂದ್ನಾಡ್ ವ್ಯಾಪ್ತಿಗೊಳಪಟ್ಟಂತೆ ಮೂರು ಮಕ್ಕಳನ್ನು ಪಡೆಯುವ ಪೋಷಕರ ಮೂರನೇ ಮಗುವಿನ ಹೆಸರಿನಲ್ಲಿ ರೂ. ೫೦ ಸಾವಿರ ಹಾಗೂ ನಾಲ್ಕನೆ ಮಗುವಿನ ಹೆಸರಿನಲ್ಲಿ ಒಂದು ಲಕ್ಷ ರೂಪಾಯಿಗಳನ್ನು ಪ್ರೋತ್ಸಾಹ ಧನವಾಗಿ ಮಗುವಿನ ಹೆಸರಿನಲ್ಲಿ ಠೇವಣಿ ಇಡುವುದಾಗಿ ಘೋಷಿಸಿದ್ದು ಪ್ರಸಕ್ತ ವರ್ಷ ಇಬ್ಬರು ಪೋಷಕರ ಅರ್ಜಿ ಬಂದಿದ್ದು ಅವರಿಗೆ ಪ್ರೋತ್ಸಾಹ ಧನ ನೀಡುವುದಾಗಿ ಸಭೆಗೆ ಮಾಹಿತಿ ನೀಡಿದರು.
ವೇದಿಕೆಯಲ್ಲಿ ಉಪಸ್ಥಿತರಿದ್ದ ಪೊನ್ನಂಪೇಟೆ ಕೊಡವ ಸಮಾಜದ ಜಂಟಿ ಕಾರ್ಯದರ್ಶಿ ಆಲೆಮಾಡ ಸುಧೀರ್ ಹಾಗೂ ನಿರ್ದೇಶಕಿ ಮೂಕಳೆರ ಕಾವ್ಯ ಮಾತನಾಡಿ, ಚಂಗ್ರಾAದಿ ಪತ್ತಾಲೋದಿ ಕಾರ್ಯಕ್ರಮದಿಂದ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭ ಪೊನ್ನಂಪೇಟೆ ಕೊಡವ ಸಮಾಜದ ವತಿಯಿಂದ ನೀಡಿದ ‘ಆರೋಡ ಮಣ್ಣ್'ಲ್ ಕಾರೋಣಂಡ ಬಲ' ಎಂಬ ಸಾಂಸ್ಕೃತಿಕ ಕಾರ್ಯಕ್ರಮ ಕಲಾಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಯಿತು.
ಕಾರ್ಯಕ್ರಮದ ಆರಂಭದಲ್ಲಿ ಸಂಭ್ರಮ ಪೊಮ್ಮಕ್ಕಡ ಕೂಟದ ಸದಸ್ಯೆ ಅಜ್ಜಮಾಡ ಸಾವಿತ್ರಿ ಪ್ರಾರ್ಥಿಸಿ, ಕೊಡವ ಸಮಾಜದ ನಿರ್ದೇಶಕಿ ಚಂಗುಲAಡ ಅಶ್ವಿನಿ ಸತೀಶ್ ಸ್ವಾಗತಿಸಿ, ಸಾಂಸ್ಕೃತಿಕ ಸಂಚಾಲಕ ಚೆಟ್ಟಂಗಡ ರವಿ ಸುಬ್ಬಯ್ಯ ನಿರೂಪಿಸಿ, ನಿರ್ದೇಶಕಿ ತೀತಿರ ಅನಿತ ಸುಬ್ಬಯ್ಯ ವಂದಿಸಿದರು.
ಕಾರ್ಯಕ್ರಮದಲ್ಲಿ ತಾವಳಗೇರಿ ಮೂಂದ್ನಾಡ್ ಕೊಡವ ಸಮಾಜದ ಉಪಾಧ್ಯಕ್ಷ ಮಚ್ಚಮಾಡ ಸುಮಂತ್, ಕಾರ್ಯದರ್ಶಿ ಕೋಟ್ರಮಡ ಸುಮಂತ್ ಮಾದಪ್ಪ, ಸಹ ಕಾರ್ಯದರ್ಶಿ ಬಾದುಮಂಡ ವಿಷ್ಣು ಕಾರ್ಯಪ್ಪ, ಖಜಾಂಚಿ ಚಂಗುಲAಡ ಸತೀಶ್, ನಿರ್ದೇಶಕರಾದ ತಡಿಯಂಗಡ ಸೌಮ್ಯ ಕರುಂಬಯ್ಯ, ಮಾಣೀರ ದೀಪಕ್, ಕೊಡವ ಸಮಾಜ ಪೊಮ್ಮಕ್ಕಡ ಕೂಟದ ಅಧ್ಯಕ್ಷೆ ಕೋಟ್ರಮಡ ರೇಷ್ಮ ಕಾರ್ಯಪ್ಪ, ಕಾರ್ಯದರ್ಶಿ ಕಳ್ಳಿಚಂಡ ದೀನ ಉತ್ತಪ್ಪ ಮತ್ತಿತರ ಪ್ರಮುಖರು ಭಾಗವಹಿಸಿದ್ದರು.