ಮಡಿಕೇರಿ, ಅ. ೨೨: ಕೊಡಗು ಜಿಲ್ಲೆಯ ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದಲ್ಲಿ ೨೦೨೭-೨೮ನೇ ಸಾಲಿಗೆ ಖಾಲಿ ಇರುವ ೯ ಮತ್ತು ೧೧ನೇ ತರಗತಿ ಸೀಟುಗಳ ಭರ್ತಿಗಾಗಿ ಲ್ಯಾಟರಲ್ ಎಂಟ್ರಿ ಆಯ್ಕೆ ಪರೀಕ್ಷೆಗೆ ಅರ್ಹ ವಿದ್ಯಾರ್ಥಿಗಳಿಂದ ಆನ್‌ಲೈನ್ ಅರ್ಜಿ ಆಹ್ವಾನಿಸಲಾಗಿದ್ದು, ಅರ್ಜಿ ಸಲ್ಲಿಸಲು ಅವಧಿ ವಿಸ್ತರಿಸಲಾಗಿದೆ.

ನಿರ್ದಿಷ್ಟ ಪಡಿಸಿದ ಕ್ಷೇತ್ರಗಳಲ್ಲಿ (ಪ್ರದೇಶ/ವರ್ಗ/ವಿಕಲತೆ/ಲಿಂಗ) ಮಾತ್ರ ತಿದ್ದುಪಡಿಗಳನ್ನು ಮಾಡಲು ತಾ. ೨೩ ರಿಂದ ೨೫ ರವರೆಗೆ ಅವಕಾಶ ನೀಡಲಾಗಿದೆ.

೨೦೨೬-೨೭ನೇ ಶೈಕ್ಷಣಿಕ ಸಾಲಿನಲ್ಲಿ ಕೊಡಗು ಜಿಲ್ಲೆಯ ಮಾನ್ಯತೆ ಪಡೆದ ಶಾಲೆಯಲ್ಲಿ ೧೦ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳು ೧೧ನೇ ತರಗತಿಯ ವಿಜ್ಞಾನ ಮತ್ತು ವಾಣಿಜ್ಯ ವಿಭಾಗಗಳ ಖಾಲಿ ಸೀಟುಗಳಿಗೆ ಅರ್ಜಿ ಸಲ್ಲಿಸಬಹುದಾಗಿದೆ.

೯ನೇ ತರಗತಿಗೆ ಅರ್ಜಿ ಸಲ್ಲಿಸಲು: hಣಣಠಿs://ಛಿbseiಣms.ಟಿiಛಿ.iಟಿ/೨೦೨೬/ಟಿvsix_೯⁠ ಮತ್ತು ೧೧ನೇ ತರಗತಿಗೆ ಅರ್ಜಿ ಸಲ್ಲಿಸಲು: hಣಣಠಿs://ಛಿbseiಣms.ಟಿiಛಿ.iಟಿ/೨೦೨೬/ಟಿvsix_೧೧⁠

೯ ಮತ್ತು ೧೧ನೇ ತರಗತಿಯ ಲ್ಯಾಟರಲ್ ಎಂಟ್ರಿ ಆಯ್ಕೆ ಪರೀಕ್ಷೆಯು ೨೦೨೭ರ ಏಪ್ರಿಲ್ ೧೦ ರಂದು ನಡೆಯಲಿದೆ. ಹೆಚ್ಚಿನ ಮಾಹಿತಿಗೆ ವಿದ್ಯಾರ್ಥಿಗಳು ಹಾಗೂ ಪೋಷಕರು ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯವನ್ನು ೯೪೪೮೨೧೫೬೨೩ / ೯೬೧೧೮೬೨೮೩೫ ದೂರವಾಣಿ ಸಂಖ್ಯೆಗಳ ಮೂಲಕ ಸಂಪರ್ಕಿಸಬಹುದು ಎಂದು ಗಾಳಿಬೀಡು ಜವಾಹರ್ ನವೋದಯ ವಿದ್ಯಾಲಯದ ಪ್ರಾಂಶುಪಾಲರು ತಿಳಿಸಿದ್ದಾರೆ.