ಮಡಿಕೇರಿ, ಅ. ೨೦; ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಡಿಕೇರಿ ನಗರ ದಸರಾ ಸಮಿತಿ ವತಿಯಿಂದ ಮಡಿಕೇರಿ ದಸರಾ ಜನೋತ್ಸವ ಅಂಗವಾಗಿ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ತಾ. ೧೯ರಂದು ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಒಬ್ಬರಿಗಿಂತ ಒಬ್ಬರಂತೆ ಮಹಿಳಾ ತಂಡದವರು ಹೆಜ್ಜೆ ಹಾಕಿದರು. ಇದರೊಂದಿಗೆ ಮಂಗಳೂರಿನ ಗಾಯಕಿ ಅಖಿಲ ಪಜಿಮಣ್ಣು ಹಾಗೂ ಗಣೇಶ್ ಕಾರಂತ್ ಅವರುಗಳ ಹಾಡಿನ ಮೋಡಿಗೆ ಪ್ರೇಕ್ಷಕರು ಸಂಭ್ರಮಿಸಿದರು.
ಕೊಡಗು ಗೌಡ ಮಹಿಳಾ ಒಕ್ಕೂಟದ ಸಾಂಪ್ರದಾಯಿಕ ನೃತ್ಯ, ಕೊಡವ ಸಮಾಜ ಪೊಮ್ಮಕ್ಕಡ ಕೂಟದಿಂದ ಸಾಂಪ್ರದಾಯಿಕ ಫ್ಯಾಷನ್ ಶೋ, ಹಿಂದೂ ಮಲಯಾಳಿ ಸಂಘದವರಿAದ ಸಾಂಪ್ರದಾಯಿಕ ನೃತ್ಯ,
ಟೀಂಕಾಮಾಕ್ಷಿ ತಂಡದಿAದ ಸಾಂಪ್ರದಾಯಿಕ ನೃತ್ಯ, ಶನಿವಾರಸಂತೆಯ ನಾಟ್ಯ ನಿಲಯಂ ಅಕಾಡೆಮಿಯಿಂದ ಶಾಸ್ತಿçÃಯ ನೃತ್ಯ ಸೇರಿದಂತೆ ವಿವಿಧ ಕಲಾತಂಡಗಳ ಸಾಂಸ್ಕೃತಿಕ ಕಾರ್ಯಕ್ರಮಗಳು ಗಮನ ಸೆಳೆದವು. ಮಹಿಳಾ ದಸರಾ ಅಂಗವಾಗಿ ನಡೆದ ಕಾರ್ಯಕ್ರಮದ ಸಭಾಂಗಣದಲ್ಲಿ ಪ್ರೇಕ್ಷಕರು ಕಿಕ್ಕಿರಿದು ನೆರೆದಿದ್ದರು.