ಕುಶಾಲನಗರ, ಅ. ೨೦: ಕಾವೇರಿ ಸಂಕ್ರಮಣ ಹಿನ್ನೆಲೆಯಲ್ಲಿ ಕುಶಾಲನಗರ-ಕೊಪ್ಪ ಗಡಿಭಾಗದಲ್ಲಿ ಬಾರವಿ ಕಾವೇರಿ ಕನ್ನಡ ಸಂಘದ ವತಿಯಿಂದ ೧೪ನೇ ವರ್ಷದ ಕಾವೇರಿ ತೀರ್ಥ ವಿತರಣೆ ಮತ್ತು ಅನ್ನಸಂತರ್ಪಣೆ ಕಾರ್ಯಕ್ರಮ ನಡೆಯಿತು.

ಕುಶಾಲನಗರ ಗಡಿಭಾಗದ ಕಾವೇರಿ ವೃತ್ತದಲ್ಲಿರುವ ಕಾವೇರಿ ಮಾತೆ ಪ್ರತಿಮೆಗೆ ದಿನದ ವಿಶೇಷ ಪೂಜೆ ನೆರವೇರಿಸಲಾಯಿತು. ಅರ್ಚಕ ಪುರುಷೋತ್ತಮ್ ಭಟ್ ಪೂಜಾ ವಿಧಿ ನೆರವೇರಿಸಿದರು.

ಎಸ್.ಎಲ್.ಎನ್ ಸಮೂಹ ಸಂಸ್ಥೆಯ ಪ್ರಮುಖರಾದ ನಾರಾಯಣ್, ಸಾತಪ್ಪನ್ ಮತ್ತು ವಿಶ್ವನಾಥನ್ ಕುಟುಂಬಸ್ಥರು ಪೂಜೆ ನೆರವೇರಿಸಿ ತೀರ್ಥ ವಿತರಣೆ ಕಾರ್ಯಕ್ಕೆ ಚಾಲನೆ ನೀಡಿದರು.

ಇದೇ ಸಂದರ್ಭ ಸೋಮವಾರಪೇಟೆ ಮತ್ತು ಮರಗೋಡಿನಲ್ಲಿ ತೀರ್ಥ ಪ್ರಸಾದ ವಿತರಣೆಗೆ ತೆರಳುವ ವಾಹನಕ್ಕೆ ಪೂಜೆ ಸಲ್ಲಿಸಿ ಚಾಲನೆ ನೀಡಿ ಬೀಳ್ಕೊಡಲಾಯಿತು.

ಮಡಿಕೇರಿ ಕ್ಷೇತ್ರ ಶಾಸಕ ಡಾ.ಮಂತರ್ ಗೌಡ ಅವರು ಪಕ್ಷದ ಮುಖಂಡರೊAದಿಗೆ ಆಗಮಿಸಿ ಕಾವೇರಿ ಮಾತೆಗೆ ಪೂಜೆ ಸಲ್ಲಿಸಿದರು. ನಂತರ ಮಾತನಾಡಿದ ಅವರು, ಕಾವೇರಿ ಸಂರಕ್ಷಣೆ ಎಲ್ಲರ ಪ್ರಮುಖ ಆದ್ಯತೆಯಾಗಬೇಕಿದೆ. ತಾಯಿ ಕಾವೇರಿ ಎಲ್ಲರಿಗೂ ಸಮೃದ್ಧಿ ಕರುಣಿಸಲಿ. ಕಳೆದ ೧೪ ವರ್ಷಗಳಿಂದ ಪ್ರತಿ ವರ್ಷ ತೀರ್ಥ ವಿತರಣೆ, ಅನ್ನಸಂತರ್ಪಣೆ ನೆರವೇರಿಸುತ್ತಿರುವುದು ಶ್ಲಾಘನೀಯ ಕಾರ್ಯ ಎಂದರು.

ಈ ಸಂದರ್ಭ ಮಾತನಾಡಿದ ಸಂಘದ ಪ್ರಮುಖರಾದ ರವೀಂದ್ರ ಪ್ರಸಾದ್, ಉತ್ತಮ ಮಳೆಯಾಗುವ ಮೂಲಕ ನಾಡಿನ ಸಂರಕ್ಷಣೆಗೆ ಕೋರಿ ಸಾಮೂಹಿಕವಾಗಿ ಪ್ರಾರ್ಥಿಸಲಾಗಿದೆ ಎಂದು ತಿಳಿಸಿದರು. ಆವರಣದಲ್ಲಿ ನೆಟ್ಟು ಬೆಳೆಸಿದ ಗಿಡವೊಂದಕ್ಕೆ ವೃಕ್ಷ ಮಾತೆ ಸಾಲುಮರದ ತಿಮ್ಮಕ್ಕ ನಾಮಕರಣ ಮಾಡಲಾಯಿತು. ಸ್ವಚ್ಛತೆ ಬಗ್ಗೆ ಅಳವಡಿಸಿದ ಫಲಕಗಳ ಅನಾವರಣ ಮಾಡಲಾಯಿತು.

ಸಾವಿರಾರು ಮಂದಿ ಭಕ್ತಾದಿಗಳು ಆಗಮಿಸಿ ತೀರ್ಥ ಪ್ರಸಾದ ಪಡೆದರು. ಈ ಸಂದರ್ಭ ಕುಡಾ ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡುರಾವ್, ರೋಟರಿ ಸಂಸ್ಥೆ ನಿಕಟಪೂರ್ವ ಅಧ್ಯಕ್ಷ ಮನು ಪೆಮ್ಮಯ್ಯ, ಭಾರವಿ ಕನ್ನಡ ಸಂಘದ ಪ್ರಮುಖರಾದ ಬಬೀಂದ್ರಪ್ರಸಾದ್, ವಿಜೇಂದ್ರ ಪ್ರಸಾದ್, ಮೈಸೂರು ಜಿಲ್ಲಾ ಬಿಜೆಪಿ ಮುಖಂಡ ಚಂದ್ರು ಬೆಮ್ಮತ್ತಿ, ಚಂದ್ರು, ತಿಲಕ್ ಪೂಜಾರಿ, ರುದ್ರ, ಜಬೀಬುಲ್ಲಾ, ಹೇಮಂತ್ ರಾವ್, ಅಬೀಬ್ ರೆಹಮಾನ್, ಕಿಶನ್ ಕಾರ್ಯಪ್ಪ, ಸೇರಿದಂತೆ ಸಂಘದ ಪ್ರಮುಖರು ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಇದ್ದರು.ವೀರಾಜಪೇಟೆ, ಅ. ೨೦: ವೀರಾಜಪೇಟೆಯ 'ಹಿಂದೂ ಅಗ್ನಿದಳ' ಸಂಘಟನೆಯ ಸದಸ್ಯರುಗಳು ಕಾವೇರಿ ತೀರ್ಥವನ್ನು ತಂದು ಭಾನುವಾರ ಬೆಳಿಗ್ಗೆಯಿಂದಲೇ ವೀರಾಜಪೇಟೆ ಪಟ್ಟಣದ ಮೂರ್ನಾಡು ರಸ್ತೆ, ಗಡಿಯಾರ ಕಂಬ, ಖಾಸಗಿ ಬಸ್ ನಿಲ್ದಾಣ, ಪಂಜರುಪೇಟೆ, ಗಾಂಧಿನಗರ, ತೆಲುಗರ ಬೀದಿ, ಮೀನುಪೇಟೆ, ಸೇರಿದಂತೆ ಪಟ್ಟಣದ ಇತರೆಡೆಗಳಲ್ಲಿ ಸಾರ್ವಜನಿಕರಿಗೆ ವಿತರಿಸಿದರು. ಹಾಗೂ ಮಧ್ಯಾಹ್ನ ಸಾರ್ವಜನಿಕರಿಗೆ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಕಾವೇರಿತೀರ್ಥ ವಿತರಣೆ ಸಂದರ್ಭ ಹಿಂದೂ ಅಗ್ನಿದಳ ಸಂಘಟನೆಯ ಅಧ್ಯಕ್ಷ ಪ್ರಸನ್ನಾ, ಕಾರ್ಯದರ್ಶಿ ಸಿನೋದ್, ಸಲಹೆಗಾರರಾದ ವಕೀಲ ಟಿ.ಪಿ.ಕೃಷ್ಣ, ಸದಸ್ಯರುಗಳಾದ ಮಹೇಶ್, ಅಯ್ಯಪ್ಪ, ಸುನೀಲ್ ಗೌಡ, ಕಿರಣ್, ಯೋಗೇಶ್ ನಾಯ್ಡು, ಮಣಿಕಂಠ, ಪ್ರದೀಪ್ ರೈ, ಬಿಪಿನ್, ವಿವೇಕ್ ರೈ, ಪ್ರಭಾಕರ, ವಿನು ಕುಂಜು, ಕೀರ್ತನ್, ಸಿದ್ಧಾರ್ಥ, ಮನೋಜ್, ಜನಾರ್ದನ ಮತ್ತಿತರರು ಹಾಜರಿದ್ದರು.ಸೋಮವಾರಪೇಟೆ, ಅ. ೨೦: ಇಲ್ಲಿನ ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ವತಿಯಿಂದ ಪಟ್ಟಣದಲ್ಲಿ ಸಾರ್ವಜನಿಕ ಭಕ್ತಾದಿಗಳಿಗೆ ಶ್ರೀ ಕಾವೇರಿ ತೀರ್ಥವನ್ನು ವಿತರಿಸಲಾಯಿತು.

ಒಕ್ಕಲಿಗರ ಸಂಘದ ರಾಜ್ಯ ನಿರ್ದೇಶಕ ಹೆಚ್.ಎನ್. ರವೀಂದ್ರ ಅವರು ಪಟ್ಟಣದ ಶ್ರೀ ಕಾವೇರಿ ಮಾತೆ ಪ್ರತಿಮೆಗೆ ವಿಶೇಷ ಪೂಜೆ ಸಲ್ಲಿಸಿದ ಬಳಿಕ, ಪಟ್ಟಣದ ಜೇಸೀ ವೇದಿಕೆ ಬಳಿಯಲ್ಲಿ ಸಾರ್ವಜನಿಕರಿಗೆ ಕಾವೇರಿ ತೀರ್ಥ ವಿತರಿಸಲಾಯಿತು. ಈ ಸಂದರ್ಭ ಹರಪಳ್ಳಿ ರವೀಂದ್ರ ಅಭಿಮಾನಿಗಳ ಸಂಘದ ಅಧ್ಯಕ್ಷ ಹೆಚ್.ಎ. ನಾಗರಾಜು, ಪದಾಧಿಕಾರಿಗಳಾದ ಮಣಿಕಂಠ, ಹೃದಯ್, ದಿನೇಶ್, ಜಗದೀಶ್, ಅಜಯ್, ಶೇಷಪ್ಪ, ಪ್ರಮುಖರಾದ ಕಾಟ್ನಮನೆ ಗಿರೀಶ್, ಬಾಲಕೃಷ್ಣ, ನಾಗರಾಜು ಸೇರಿದಂತೆ ಇತರರು ಇದ್ದರು.