ಮಡಿಕೇರಿ, ಅ. ೨೦: ಇತ್ತೀಚೆಗೆ ಕರ್ನಾಟಕ ಜ್ಞಾನ ವಿಜ್ಞಾನ ಸಮಿತಿಯ ವೀರಾಜಪೇಟೆ ತಾಲೂಕು ಘಟಕವನ್ನು ಜಿಲ್ಲಾ ಕಾರ್ಯಾದರ್ಶಿ ಕುಮಾರ್.ಎನ್.ಎಸ್ ಅವರ ಮುಂದಾಳತ್ವದಲ್ಲಿ ರಚಿಸಲಾಯಿತು.

ತಾಲೂಕು ಅಧ್ಯಕ್ಷರಾಗಿ ಎಂ.ಕೆ. ನಳಿನಾಕ್ಷಿ, ಗೌರವಾಧ್ಯಕ್ಷರಾಗಿ ವೀರಾಜಪೇಟೆ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಡಾ. ದಯಾನಂದ್, ಕಾರ್ಯಾದರ್ಶಿಯಾಗಿ ಕಾಕೋಟು ಪರಂಬಿನ ಶಿಕ್ಷಕಿ ಟಿ.ಬಿ. ರಾಜೇಶ್ವರಿ, ಖಜಾಂಚಿಯಾಗಿ ಟಿ.ಬಿ. ಚೋಂದಮ್ಮ, ಘಟಕಕ್ಕೆ ಕಾರ್ಯಾಕಾರಿಣಿ ಸಮಿತಿ ಸದಸ್ಯರಾಗಿ ಎಂ.ಕೆ. ಸತೀಶನ್ ಅವರುಗಳನ್ನು ಆಯ್ಕೆ ಮಾಡಲಾಯಿತು.

ತಾ. ೨೩ ರಿಂದ ೨ ದಿನಗಳ ಮಹಿಳಾ ಕೆ.ಜೆ.ವಿ.ಎಸ್. ಕಾರ್ಯಕರ್ತರಿಗೆ ತುಮಕೂರು ಜಿಲ್ಲೆ ಸಿರಾದಲ್ಲಿ ತರಬೇತಿ ಕಾರ್ಯಾಗಾರಕ್ಕೆ ಮಹಿಳಾ ಕಾರ್ಯಕರ್ತರು ಪಾಲ್ಗೊಳ್ಳಲು ಸದಸ್ಯರನ್ನು ಆಯ್ಕೆ ಮಾಡಲಾಯಿತು.

ಕೆ.ಜೆ.ವಿ.ಎಸ್. ವಾರ್ಷಿಕ ಸದಸ್ಯರ ನೋಂದಣಿ ಮತ್ತು ನವೀಕರಣ ಆಂದೋಲನವನ್ನು ಅಕ್ಟೋಬರ್ ತಿಂಗಳ ಕೊನೆಯವರೆಗೂ ಹಮ್ಮಿಕೊಳ್ಳುವಂತೆ ತೀರ್ಮಾನಿಸಲಾಯಿತು.