ಮಡಿಕೇರಿ, ಅ. ೨೦: ಪೊನ್ನಂಪೇಟೆಯಲ್ಲಿ ಸಿವಿಲ್ ಜಡ್ಜ್ ಹಿರಿಯ ಶ್ರೇಣಿ ಹಾಗೂ ಜೆ.ಎಂ.ಎಫ್.ಸಿ ನ್ಯಾಯಾಲಯದ ಉದ್ಘಾಟನೆಯು ತಾ.೩೧ರಂದು ಬೆಳಿಗ್ಗೆ ೧೧ ಗಂಟೆಗೆ ನಡೆಯಲಿದೆ.
ನಿವೃತ್ತ ಸುಪ್ರೀಂಕೋರ್ಟಿನ ನ್ಯಾಯಾಧೀಶರಾದ ಜಸ್ಟಿಸ್ ಎ.ಎಸ್ ಬೋಪಣ್ಣ ಹಾಗೂ ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶರಾದ ಎಂ.ಜಿ ಶುಕ್ರೇ ಕಮಲ್ ಅವರು ಉದ್ಘಾಟನೆಯನ್ನು ನೆರವೇರಿಸಲಿದ್ದಾರೆ.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಾಜ್ಯ ಉಚ್ಚ ನ್ಯಾಯಾಲಯದ ನ್ಯಾಯಾಧೀಶರು ಹಾಗೂ ಕೊಡಗು ಜಿಲ್ಲೆಯ ನ್ಯಾಯಾಲಯಗಳ ಆಡಳಿತಗಾರರಾದ ಜಸ್ಟಿಸ್ ರಾಚಯ್ಯ ಅವರು ವಹಿಸಲಿದ್ದಾರೆ.
ಮುಖ್ಯ ಅತಿಥಿಗಳಾಗಿ ಉಚ್ಚ ನ್ಯಾಯಾಲಯದ ನ್ಯಾಯಾಧೀಶರುಗಳಾದ ಸಿ.ಎಂ ಪೂಣಚ್ಚ, ಕೆ.ಜಿ ಶಾಂತಿ, ಕೆ.ಎಸ್ ಭರತ್ ಕುಮಾರ್ ಹಾಗೂ ಮುಖ್ಯಮಂತ್ರಿಗಳ ಕಾರ್ಯದರ್ಶಿಗಳು ಮತ್ತು ಶಾಸಕರಾದ ಎ.ಎಸ್ ಪೊನ್ನಣ್ಣ, ಬೆಂಗಳೂರಿನ ವಕೀಲರಾದ ಎಂ. ಸುರೇಶ್ ಅಯ್ಯಪ್ಪ ಅವರುಗಳು ಭಾಗವಹಿಸಲಿದ್ದಾರೆ.
ಕಾರ್ಯಕ್ರಮದಲ್ಲಿ ಕೊಡಗು ಜಿಲ್ಲಾ ಸೆಷನ್ಸ್ ನ್ಯಾಯಾಧೀಶರಾದ ಮಾರುತಿ ಎಸ್ ಬಾಗಡೆ, ಪೊನ್ನಂಪೇಟೆ ಬಾರ್ ಅಸೋಸಿಯೇಷನ್ ಅಧ್ಯಕ್ಷರಾದ ಎಂ.ಜಿ ರಾಕೇಶ್, ಕಾರ್ಯದರ್ಶಿಗಳಾದ ಗಿರೀಶ್ ಅಣ್ಣಯ್ಯ ಉಪಸ್ಥಿತರಿದ್ದು ಕಾರ್ಯಕ್ರಮವನ್ನು ನಿರ್ವಹಿಸಲಿದ್ದಾರೆ.