ಮಡಿಕೇರಿ, ಅ. ೧೯: ಮಡಿಕೇರಿ ಹಾಗೂ ಗೋಣಿಕೊಪ್ಪದಲ್ಲಿ ತಾ.೨೧ರ ರಾತ್ರಿ ನಡೆಯಲಿರುವ ಮಂಟಪಗಳ ಶೋಭಾ ಯಾತ್ರೆ ಸಂದರ್ಭ ಯಾವುದೇ ರೀತಿಯ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾ ಪೊಲೀಸ್ ವತಿಯಿಂದ ಬಂದೋಬಸ್ತ್ ಕಲ್ಪಿಸಲಾಗುವುದು ಎಂದು ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ಅವರು ಮಾಹಿತಿ ನೀಡಿದರು.

ಈ ಬಗ್ಗೆ ಜಿಲ್ಲಾ ಪೊಲೀಸ್ ಕಚೇರಿಯಲ್ಲಿಂದು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದ ಅವರು, ಮಡಿಕೇರಿಯಲ್ಲಿ ತಾ.೨೧ ರಂದು ನಡೆಯಲಿರುವ ಶೋಭಾಯಾತ್ರೆ ಸಂದರ್ಭ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿಗಳನ್ನು ಸೇರಿ ಒಟ್ಟು ೧,೪೫೧ ಪೊಲೀಸರಿಂದ ಬಂದೋಬಸ್ತ್ ಕಲ್ಪಿಸಲಾಗಿದೆ. ೭ ಕೆ.ಎಸ್.ಆರ್.ಪಿ ಹಾಗೂ ೧೦ ಡಿ.ಎ.ಆರ್ ತಂಡಗಳು ನಿಯೋಜಿಸಲಾಗುವುದು. ಟ್ರಾಫಿಕ್, ಕಾನೂನು ಸುವ್ಯವಸ್ಥೆ ಹಾಗೂ ದಶಮಂಟಪಗಳ ಬಳಿ ಕಾರ್ಯನಿರ್ವಹಣೆಗೆ ೧೫೦ ಹೋಮ್ ಗಾರ್ಡ್ಸ್ಗಳನ್ನು ನಿಯೋಜಿಸಲಾಗುವುದು ಎಂದರು.

ಗೋಣಿಕೊಪ್ಪ ದಸರಾ ಮಂಟಪಗಳ ಶೋಭಾಯಾತ್ರೆಗೆ ೬೧೦ ಪೊಲೀಸ್ ಅಧಿಕಾರಿ ಹಾಗೂ ಸಿಬ್ಬಂದಿ, ೨ ಕೆ.ಎಸ್.ಆರ್.ಪಿ ತಂಡ ಹಾಗೂ ೪ ಡಿ.ಎ.ಆರ್ ತಂಡಗಳು ಸೇರಿದಂತೆ ೧೦೦ ಹೋಮ್ ಗಾರ್ಡ್ಸ್ಗಳನ್ನು ನಿಯೋಜಿಸಲಾಗುವುದೆಂದರು.

೮೨ ಹೆಚ್ಚುವರಿ ಕ್ಯಾಮರಾಗಳು

ಮಡಿಕೇರಿಯಲ್ಲಿ ಈಗಾಗಲೇ ಇರುವ ಸಿ.ಸಿ ಕ್ಯಾಮರಾಗಳನ್ನು ಸೇರಿದಂತೆ ಹೆಚ್ಚುವರಿಯಾಗಿ ೬೭ ಹಾಗೂ ಗೋಣಿಕೊಪ್ಪದಲ್ಲಿ ೧೫ ಹೆಚ್ಚುವರಿ ಸಿ.ಸಿ ಕ್ಯಾಮರಾಗಳನ್ನು ಅಳವಡಿಸಲಾಗಿದೆ. ಪ್ರಮುಖ ಸ್ಥಳಗಳನ್ನು ಆಯ್ದು ಕ್ಯಾಮರಾಗಳನ್ನು ಇರಿಸಲಾಗಿದೆ. ಕಂಟ್ರೋಲ್ ರೂಂನಲ್ಲಿ ಕ್ಯಾಮರಾಗಳ ಮೂಲಕ ಸಿಬ್ಬಂದಿಗಳು ವೀಕ್ಷಣೆ ಮಾಡುತ್ತಿರುತ್ತಾರೆ ಎಂದು ಮಾಹಿತಿ ನೀಡಿದರು. ಮಹಿಳೆಯರ ಹಾಗೂ ಮಕ್ಕಳ ಸುರಕ್ಷತೆಗೆ ಮಡಿಕೇರಿ ಹಾಗೂ ಗೋಣಿಕೊಪ್ಪದಲ್ಲಿ ಪ್ರತ್ಯೇಕ ತಂಡ ಕಾರ್ಯನಿರ್ವಹಿಸಲಿದೆ.

ಸಾರ್ವಜನಿಕರಿಗೆ ತೊಂದರೆಗಳಾದಲ್ಲಿ ಮಡಿಕೇರಿಯಲ್ಲಿ ೪ ಕಡೆ ಹೆಲ್ಪ್ ಡೆಸ್ಕ್ಗಳಿವೆ. ಗಾಂಧಿ ಮೈದಾನ, ಜಿ.ಟಿ ಸರ್ಕಲ್, ಎಂಎA ವೃತ್ತ, ಪೊಲೀಸ್ ಠಾಣೆ ಮುಂಭಾಗ ಹೆಲ್ಪ್ ಡೆಸ್ಕ್ಗಳು ಇರಲಿದ್ದು, ಅದೇ ಸ್ಥಳದಲ್ಲಿ ತುರ್ತು ಚಿಕಿತ್ಸೆ ಸಂಬAಧ ಕ್ಲಿನಿಕಲ್ ಡೆಸ್ಕ್ ಇರಲಿದೆ. ಗೋಣಿಕೊಪ್ಪದಲ್ಲಿ ಬಸ್ ನಿಲ್ದಾಣ ಹಾಗೂ ಆರ್.ಎಂ.ಸಿ ಆವರಣದಲ್ಲಿ ಹೆಲ್ಪ್ ಡೆಸ್ಕ್ಗಳಿರಲಿವೆ ಎಂದು ಎಸ್.ಪಿ ಮಾಹಿತಿ ನೀಡಿದರು. ಗೋಣಿಕೊಪ್ಪದಲ್ಲಿ ೭ ಚೀತಾ ವಾಹನಗಳ ಮೂಲಕ ಪ್ಯಾಟ್ರೋಲಿಂಗ್ ನಡೆಯಲಿದೆ ಎಂದು ಕೂಡ ಮಾಹಿತಿ ನೀಡಿದರು.

೧೦ ಗಂಟೆ ನಂತರ ಧ್ವನಿವರ್ಧಕ - ಪ್ರಕರಣ ದಾಖಲು

ನ್ಯಾಯಾಲಯದ ಆದೇಶದಂತೆ ೧೦ ಗಂಟೆಯವರೆಗೆ ಮಾತ್ರ ಧ್ವನಿವರ್ಧಕಗಳ ಬಳಕೆಗೆ ಅವಕಾಶವಿದೆ. ಇದನ್ನು ಉಲ್ಲಂಘಿಸುವ ಮಂಟಪ ಸಮಿತಿಗಳ ಮೇಲೆ ಪ್ರಕರಣ ದಾಖಲಿಸಲಾಗುವುದು ಎಂದು ಎಸ್.ಪಿ ಮಾಹಿತಿ ನೀಡಿದರು.

ಮಂಟಪ ಸಮಿತಿಗಳ ಪದಾಧಿಕಾರಿಗಳೊಂದಿಗೆ ಹಲವಾರು ಬಾರಿ ಸಭೆಗಳನ್ನು ನಡೆಸಿ ಲೋಕೋಪಯೋಗಿ ಅಭಿಯಂತರರ ಸಹಕಾರದಲ್ಲಿ ಮಂಟಪಗಳ ಸ್ಥಿರತೆ ಬಗ್ಗೆ, ವಾಹನಗಳ ಫಿಟ್ನೆಸ್ ಸಂಬAಧ ೪ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ಆರ್.ಟಿ.ಓ ಅಧಿಕಾರಗಳ ಸಹಕಾರದಲ್ಲಿ ಮಾಹಿತಿ, ಪರಿಶೀಲನೆ ನಡೆಸಿ ಮಾಹಿತಿ ನೀಡಲಾಗಿದೆ.

ಮುಖವಾಡ ನಿಷೇಧ

ಶೋಭಾಯಾತ್ರೆ ವೀಕ್ಷಣೆಗೆ ಆಗಮಿಸುವ ಸಾರ್ವಜನಿಕರು ಯಾವುದೇ ರೀತಿಯ ಮುಖವಾಡಗಳನ್ನು ಹಾಗೂ ಕರ್ಕಶ ಶಬ್ದ ಮಾಡುವ ಪರಿಕರಗಳನ್ನು ಬಳಸುವಂತಿಲ್ಲ. ಅಂತಹ ಪ್ರಕರಣಗಳು ಕಂಡು ಬಂದಲ್ಲಿ ಪ್ರಕರಣ ದಾಖಲಿಸಲಾಗುವುದು ಎಂದು ಎಸ್.ಪಿ ಮಾಹಿತಿ ನೀಡಿದರು.

ತುರ್ತು ವೈದ್ಯಕೀಯ ಚಿಕಿತ್ಸೆಗೆ ಸಿದ್ಧತೆ

ಮಡಿಕೇರಿ ಹಾಗೂ ಗೋಣಿಕೊಪ್ಪದಲ್ಲಿ ನಡೆಯುವ ಶೋಭಾಯಾತ್ರೆ ಸಂದರ್ಭ ಅನಿಶ್ಚಿತ ಘಟನೆಗಳು ಸಂಭವಿಸಿ ತುರ್ತು ವೈದ್ಯಕೀಯ ಚಿಕಿತ್ಸೆ ಅಗತ್ಯವಿದ್ದಲ್ಲಿ, ತಕ್ಷಣಕ್ಕೆ ಗಾಯಾಳುಗಳನ್ನು ಸ್ಥಳಾಂತರಿಸಲು ವ್ಯವಸ್ಥೆಗಳನ್ನು ಮಾಡಲಾಗಿದೆ. ಈ ಸಂಬAಧ ಈಗಾಗಲೇ ಅಣಕು ಪ್ರದರ್ಶನವನ್ನೂ ನಡೆಸಲಾಗಿದೆ. ಮಡಿಕೇರಿಯ ಜಿ.ಟಿ ವೃತ್ತ, ಅಜ್ಜಮಾಡ ದೇವಯ್ಯ ವೃತ್ತ ಹಾಗೂ ಐ.ಜಿ ವೃತ್ತದ ಬಳಿ ಆಂಬ್ಯುಲೆನ್ಸ್ಗಳು ಇರಲಿವೆ. ಇಲ್ಲಿಂದ ವೈವಸ್ ಆಸ್ಪತ್ರೆ, ಸಂಜೀವಿನಿ ಆಸ್ಪತ್ರೆ ಅಥವಾ ಜಿಲ್ಲಾಸ್ಪತ್ರೆಗೆ ಗಾಯಾಳುಗಳನ್ನು ರವಾನಿಸಲು ಕ್ರಮ ಕೈಗೊಳ್ಳಲಾಗಿದೆ. ಗೋಣಿಕೊಪ್ಪದಲ್ಲಿ ಬಸ್ ನಿಲ್ದಾಣದಿಂದ ಗೋಣಿಕೊಪ್ಪ ಆಸ್ಪತ್ರೆಗೆ ತಲುಪುವಂತೆ ಆಂಬ್ಯುಲೆನ್ಸ್ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಅವರು ಹೇಳಿದರು.

ಟ್ರಾಫಿಕ್ ವ್ಯವಸ್ಥೆ - ಗೂಗಲ್ ಮ್ಯಾಪ್ ಸಹಕಾರಿ

ಟ್ರಾಫಿಕ್ ವ್ಯವಸ್ಥೆ ಹಾಗೂ ಪಾರ್ಕಿಂಗ್ ವ್ಯವಸ್ಥೆ ಸಂಬAಧ ಈ ಹಿಂದೆಯೇ ಜಿಲ್ಲಾಧಿಕಾರಿಗಳು ಆದೇಶ ಮಾಡಿದ್ದರು. ಈ ಆದೇಶದನ್ವಯ ಮಡಿಕೇರಿಯಿಂದ ಹಾಗೂ ಗೋಣಿಕೊಪ್ಪದಿಂದ ಇತರ ಊರುಗಳಿಗೆ ತೆರಳುವ ಸಾರ್ವಜನಿಕರಿಗೆ ಗೂಗಲ್ ಮ್ಯಾಪ್ ಮೂಲಕ ದಸರಾ ದಿನದಂದು ಬದಲಾದ ಮಾರ್ಗವನ್ನೇ ತೋರಿಸುವಂತೆ ಅನುಕೂಲ ಕಲ್ಪಿಸಲಾಗಿದೆ ಎಂದು ಎಸ್.ಪಿ ಮಾಹಿತಿ ನೀಡಿದರು.

ದಶಮಂಟಪಗಳ ಶೋಭಾಯಾತ್ರೆ ವೀಕ್ಷಿಸಲು ಆಗಮಿಸುವ ಸಾರ್ವಜನಿಕರ ಸುರಕ್ಷತೆಗಾಗಿ ವಿಧ್ವಂಸಕÀ ಕೃತ್ಯ ಪತ್ತೆ ತಂಡ ಹಾಗೂ ಶ್ವಾನ ದಳದಿಂದ ವಿಧ್ವಂಸಕÀ ಕೃತ್ಯಗಳ ಚಟುವಟಿಕೆಗಳ ಪರಿಶೀಲನೆಯನ್ನು ನಡೆ¸ಲಾಗುವುದು. ನUರÀದ ಆಯಕಟ್ಟಿನ ಸ್ಥಳಗಳಲ್ಲಿ ಸ್ಕೆöÊ ಸೆಂಟ್ರಿ ಕರ್ತವ್ಯಕ್ಕೆ ಸಿಬ್ಬಂದಿಗಳನ್ನು ನಿಯೋಜಿಸಿ, ಅಕ್ರಮ ಚಟುವಟಿಕೆಗಳ ಬಗ್ಗೆ ನಿಗಾ ಇಡಲಾಗುವುದು. ಇದಕ್ಕಾಗಿ ನೈಟ್ ವಿಜನ್ ಬೈನಾಕ್ಯುಲರ್‌ಗಳನ್ನು ಹಾಗೂ ಸಾಕಷ್ಟು ಸಂಖ್ಯೆಯ ವೀಡಿಯೋ ಕ್ಯಾಮರಗಳನ್ನು ಬಳಸಲಾಗುವುದು. ನಿರ್ಜನ ಪ್ರದೇಶಗಳಲ್ಲಿ ಅಪರಾಧ ಚಟುವಟಿಕೆಗಳನ್ನು ತಡೆಗಟ್ಟಲು ಪೊಲೀಸ್ ಗಸ್ತನ್ನು ಏರ್ಪಾಡು ಮಾಡಿದ್ದು, ಇದಕ್ಕಾಗಿ ಇಲಾಖಾ ಜೀಪ್ ಹಾಗೂ ೧೦ ಚೀತಾ ಬೈಕ್‌ಗಳನ್ನು ಬಳಸಲಾಗುವುದು. £ಗÀರದಲ್ಲಿ ನಡೆಯುವ Zಟುವಟಿಕೆಗಳ ಬಗ್ಗೆ ಡ್ರೋನ್ ಕ್ಯಾಮರಾ ಬಳಸಿ ನಿಗಾ ಇಡಲಾಗುವುದು ಎಂದರು.

ಶೋಭಾಯಾತ್ರೆಗೆ ಆಗಮಿಸುವ ಸಾರ್ವಜನಿಕರು ಶೋಭಾಯಾತ್ರೆಯನ್ನು ವೀಕ್ಷಿಸಲು ಮರಗಳು ಹಾಗೂ ಹಳೆಯ ಸುರಕ್ಷಿತವಲ್ಲದ ಕಟ್ಟಡಗಳನ್ನು ಏರÀದಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ ಎಸ್.ಪಿ, ಈ ಬಗ್ಗೆ ಕಟ್ಟಡಗಳ ಮಾಲೀಕರು ಗಮನ ಹರಿಸುವಂತೆ ಎಸ್.ಪಿ ಮನವಿ ಮಾಡಿದರು.