ವೀರಾಜಪೇಟೆ, ಅ. ೧೯: ಕೊಡಗು ಜಿಲ್ಲೆಯ ಮಾಜಿ ಅಂತರರಾಷ್ಟಿçÃಯ ರಗ್ಬಿ ಆಟಗಾರ ತಿಮ್ಮಯ್ಯ ಮಾದಂಡ ಅವರು ರಗ್ಬಿ ಇಂಡಿಯಾದ Sಔಒ (Sಠಿoಡಿಣsಠಿeಡಿsoಟಿ oಜಿ ouಣsಣಚಿಟಿಜiಟಿg ಒeಡಿiಣ) ಚುನಾವಣೆಯಲ್ಲಿ ಗೆಲುವು ಸಾಧಿಸಿ, ಭಾರತೀಯ ರಗ್ಬಿ ಸಂಸ್ಥೆಯ ಮಂಡಳಿಗೆ ಆಯ್ಕೆಯಾಗಿದ್ದಾರೆ.
ತೀವ್ರ ಪೈಪೋಟಿಯಿಂದ ಕೂಡಿದ್ದ ಚುನಾವಣೆಯಲ್ಲಿ ಮಹಾರಾಷ್ಟçದ ಚೈತನ್ಯ ಸಿಂಗ್ ಅವರನ್ನು ಸೋಲಿಸಿ ತಿಮ್ಮಯ್ಯ ಅವರು ಈ ಸಾಧನೆ ಮಾಡಿದ್ದಾರೆ. ಅಂತರರಾಷ್ಟ್ರೀಯ ಕ್ರೀಡಾಪಟುವಾಗಿ ತಮ್ಮ ವೃತ್ತಿಜೀವನದಲ್ಲಿ ಸಾಧನೆ ಮಾಡಿರುವ ಅವರು, ಇದೀಗ ಕ್ರೀಡಾ ಆಡಳಿತದ ಕ್ಷೇತ್ರದಲ್ಲಿಯೂ ಮಹತ್ವದ ಜವಾಬ್ದಾರಿ ನಿರ್ವಹಿಸಲಿದ್ದಾರೆ.
೨೦೧೦ರ ಕಾಮನ್ವೆಲ್ತ್ ಕ್ರೀಡಾಕೂಟ ಹಾಗೂ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತವನ್ನು ಪ್ರತಿನಿಧಿಸಿದ್ದಾರೆ. ೨೦೦೬ರಿಂದ ೨೦೧೦ರವರೆಗೆ ಭಾರತ ತಂಡದ ಪರವಾಗಿ ೪೨ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ ಆಡಿದ ಅನುಭವ ಹೊಂದಿದ್ದಾರೆ, ಬೆಂಗಳೂರಿನ ರಗ್ಬಿ ತಂಡವನ್ನೂ ಪ್ರತಿನಿಧಿಸಿದ್ದಾರೆ.
ಕ್ರೀಡಾಪಟುವಾಗಿ ಸಾಧನೆ ಮಾಡಿರುವುದರ ಜೊತೆಗೆ, ತಿಮ್ಮಯ್ಯ ಅವರು ಕ್ರೀಡಾ ಆಡಳಿತ ಕ್ಷೇತ್ರದಲ್ಲಿಯೂ ಅನುಭವ ಹೊಂದಿದ್ದಾರೆ. ೨೦೧೧ರಿಂದ ೨೦೨೩ರವರೆಗೆ ಬಾಸ್ಕೆಟ್ಬಾಲ್, ಕ್ರಿಕೆಟ್, ವಾಲಿಬಾಲ್ ಹಾಗೂ ಬ್ಯಾಡ್ಮಿಂಟನ್ ಸೇರಿದಂತೆ ವಿವಿಧ ಕ್ರೀಡಾ ಲೀಗ್ಗಳ ಆಡಳಿತ ಮತ್ತು ನಿರ್ವಹಣೆಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅಲ್ಲದೆ, ರಿಲಯನ್ಸ್ ಫೌಂಡೇಶನ್, ಎಚ್ಸಿಎಲ್ ಫೌಂಡೇಶನ್ಗಳೊAದಿಗೆ ಕ್ರೀಡಾ ಅಭಿವೃದ್ಧಿ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದ್ದಾರೆ. ಪ್ರಸ್ತುತ ಅವರು ವಿವಿಧ ಕ್ರೀಡಾ ಲೀಗ್ಗಳೊಂದಿಗೆ ಸ್ವತಂತ್ರವಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಮ್ಮ ಗೆಲುವಿನ ಕುರಿತು ಪ್ರತಿಕ್ರಿಯಿಸಿದ ತಿಮ್ಮಯ್ಯ ಅವರು, ಈ ಗೆಲುವನ್ನು ನಾನು ಕೇವಲ ವೈಯಕ್ತಿಕ ಸಾಧನೆಯಾಗಿ ನೋಡದೆ, ಭಾರತೀಯ ರಗ್ಬಿ ಕ್ರೀಡೆಯ ಅಭಿವೃದ್ಧಿಗಾಗಿ ಕಾರ್ಯನಿರ್ವಹಿಸುವ ಜವಾಬ್ದಾರಿಯಾಗಿ ಸ್ವೀಕರಿಸುತ್ತೇನೆ. ಮಂಡಳಿಯ ಇತರ ಸದಸ್ಯರು ಹಾಗೂ ಕ್ರೀಡಾ ಸಮುದಾಯದೊಂದಿಗೆ ಒಗ್ಗಟ್ಟಿನಿಂದ ಕಾರ್ಯನಿರ್ವಹಿಸಿ, ಆಟಗಾರರಿಗೆ ಹೆಚ್ಚಿನ ಅವಕಾಶಗಳನ್ನು ಕಲ್ಪಿಸಲು ಮತ್ತು ಭಾರತೀಯ ರಗ್ಬಿಯನ್ನು ಮತ್ತಷ್ಟು ಎತ್ತರಕ್ಕೆ ಕೊಂಡೊಯ್ಯಲು ಶ್ರಮಿಸುತ್ತೇನೆ,” ಎಂದು ತಿಳಿಸಿದ್ದಾರೆ.