ಮಡಿಕೇರಿ, ಅ. ೧೯: ಮಡಿಕೇರಿ ದಸರಾ ಜನೋತ್ಸವ ಪ್ರಯುಕ್ತ ಇಂದು ನಡೆದ ಮಹಿಳಾ ದಸರಾ ಕಾರ್ಯಕ್ರಮದಲ್ಲಿ ಮಹಿಳೆಯರು ಪಾಲ್ಗೊಂಡು ಸಂಭ್ರಮಿಸಿದರು. ಬೆಳಗ್ಗಿನಿಂದಲೇ ನಗರದ ಗಾಂಧಿ ಮೈದಾನದತ್ತ ಆಗಮಿಸಿದ ಮಹಿಳಾ ಮಣಿಗಳು ವಿವಿಧ ಸ್ಪರ್ಧೆ ಹಾಗೂ ಮನರಂಜನಾ ಕಾರ್ಯಕ್ರಮಗಳಲ್ಲಿ ಭಾಗವಹಿಸಿ ಸಂತಸಪಟ್ಟರು.ಮನೆ, ಕುಟುಂಬ ನಿರ್ವಹಣೆ ಸೇರಿದಂತೆ ಪ್ರತಿ ನಿತ್ಯ ಒಂದಲ್ಲ ಒಂದು ಕೆಲಸ ಕಾರ್ಯಗಳ ಜಂಜಾಟದೊAದಿಗೆ ಒತ್ತಡದಲ್ಲೇ ದಿನ ಕಳೆಯುವ ಮಹಿಳೆಯರು ಅವರಿಗಾಗಿಯೆ ದಸರಾ ಸಮಿತಿ ಹಾಗೂ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ಆಯೋಜಿಸಲಾಗಿದ್ದ ಮಹಿಳಾ ದಸರಾ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಒತ್ತಡ ಜಂಜಾಟಗಳನ್ನು ಮರೆತು ಹರುಷದಿಂದ ಮಿಂದೆದ್ದರು.

ಮಹಿಳಾ ದಸರಾ ಪ್ರಯುಕ್ತ ಗಾಂಧಿ ಮೈದಾನದಲ್ಲಿ ಮಹಿಳೆಯರ ವಿವಿಧ ಮಳಿಗೆಗಳನ್ನು ತೆರೆಯಲಾಗಿತ್ತು. ವೈನ್ ಮಾರಾಟ ಮಳಿಗೆ, ಉಪ್ಪಿನಕಾಯಿ, ಫಿನಾಯಿಲ್, ಹೂಗಿಡಗಳ ಮಾರಾಟ ಮಳಿಗೆ, ತಿಂಡಿ, ಮಸಾಲೆ ಪದಾರ್ಥಗಳ ಮಾರಾಟ ಮಳಿಗೆ, ಮಹಿಳೆಯರ ಬಟ್ಟೆ, ಅಲಂಕಾರಿಕಾ ಸಾಮಗ್ರಿಗಳ ಮಾರಾಟ ಮಳಿಗೆ, ಶ್ಯಾಂಪು, ಹೇರ್ ಆಯಿಲ್, ಮೆಹೆಂದಿ, ಪುಸ್ತಕಗಳು ಸೇರಿದಂತೆ ಹತ್ತು ಹಲವಾರು ಮಾರಾಟ ಮಳಿಗೆಗಳು ಮಹಿಳೆಯರಿಂದ, ಮಹಿಳಾ ಸಂಘಟನೆಗಳಿAದ ತೆರಯಲ್ಪಟ್ಟಿದ್ದವು. ಮಹಿಳೆಯರಿಂದ ವ್ಯಾಪಾರ ವಹಿವಾಟು ಭರ್ಜರಿಯಾಗಿ ನಡೆಯಿತು. ಮಹಿಳೆಯರಿಗಾಗಿ ವಿವಿಧ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ಬಟ್ಟೆ ಹಿಂಡಿ ನೀರನ್ನು ಬಾಟಲಿಗೆ ತುಂಬುವುದು, ಒಂಟಿ ಕಾಲಿನಲ್ಲಿ ನೀರಿನ ಕಪ್‌ನೊಂದಿಗೆ ಬ್ಯಾಲೆನ್ಸ್ ಮಾಡುವುದು, ಕಣ್ಣಿಗೆ ಬಟ್ಟೆ ಕಟ್ಟಿ ಸರ್ಕಲ್ ಗೆ ಬಟ್ಟೆ ಹಾಕುವುದು, ಕೆರೆ ದಡ ಬಲೂನ್ ಗೇಂ, ಬಾಂಬ್ ಇನ್ ದ ಸಿಟಿ, ಬಲೂನ್ ಬೆನ್ನ ಹಿಂದೆ ಇರಿಸಿಕೊಂಡು ಸೇಫ್ ಮಾಡಿಕೊಳ್ಳುವುದು, ಬಿಸ್ಕೆಟ್ ಹಣೆಯಲ್ಲಿಟ್ಟು ಜಾರಿಸುತ್ತಾ ತಿನ್ನುವುದು, ಮೆಹಂದಿ, ಕಣ್ಣಿಗೆ ಬಟ್ಟೆ ಕಟ್ಟಿ ಮೇಕಪ್, ಕೇಶ ವಿನ್ಯಾಸ, ಜಾನಪದ ಗುಂಪು ನೃತ್ಯ, ಭಾರತೀಯ ಸಾಂಪ್ರದಾಯಿಕ ಉಡುಗೆಯಲ್ಲಿ ಅಮ್ಮ- ಮಗಳ ಫ್ಯಾಶನ್ ಶೋ, ವಿಷದ ಚೆಂಡು, ಸೀರೆಗೆ ನಿಖರ ಬೆಲೆ ಹೇಳುವುದು ಸೇರಿದಂತೆ ಹಲವಾರು ಸ್ಪರ್ಧೆಗಳು ನಡೆದವು.

ಮಹಿಳೆ ಇದ್ದೆಡೆ ಸಮೃದ್ಧಿ

ಮಹಿಳಾ ದಸರಾವನ್ನು ಉದ್ಘಾಟಿಸಿದ ನಟಿ ನಿರ್ಮಾಪಕಿ ನಿರ್ದೇಶಕಿ ವಿಜಯಲಕ್ಷಿö್ಮ ಸಿಂಗ್ ಮಾತನಾಡಿ ಮಹಿಳೆ ಎಲ್ಲಿರುತ್ತಾಳೊ ಅಲ್ಲಿ ಸಮೃದ್ಧಿ ನೆಲೆಸುತ್ತದೆ ಎಂದರು. ಮಹಿಳೆಯರು ಶಿಕ್ಷಣಕ್ಕೆ ಒತ್ತು ನೀಡಬೇಕು. ಯಾವುದೇ ಒತ್ತಡಗಳಿಗೆ ಒಳಗಾಗದೆ ಮಹಿಳೆಯರು ತಾಳ್ಮೆಯಿಂದ ಬದುಕನ್ನು ರೂಪಿಸಿಕೊಳ್ಳಬೇಕೆಂದು ವಿಜಯಲಕ್ಷಿö್ಮ ಸಿಂಗ್ ಕಿವಿ ಮಾತು ಹೇಳಿದರು. ಸ್ಪರ್ಧಾ ಕಾರ್ಯಕ್ರಮ ಉದ್ಘಾಟಿಸಿದ ಸಮಾಜ ಸೇವಕ ಎಡಿಕೇರಿ ಪ್ರಸನ್ನ ಮಾತನಾಡಿ ವಿವಿಧ ಕ್ಷೇತ್ರಗಳಲ್ಲಿ ಮಹಿಳೆಯರು ಛಾಪು ಮೂಡಿಸಿದ್ದು, ಮಹಿಳೆಯರು ಶಿಕ್ಷಿತರಾಗಿ ಸ್ವಾವಲಂಬಿಗಳಾಗಿ ಬದುಕಬೇಕು ಎಂದರು.

ಮುಖ್ಯ ಅತಿಥಿಯಾಗಿದ್ದ ಕೂಡಿಗೆ ಕ್ರೀಡಾ ಶಾಲೆಯ ನಿವೃತ್ತ ಪ್ರಾಂಶುಪಾಲೆ ಕುಂತಿ ಬೋಪಯ್ಯ ಮಾತನಾಡಿ ಮಹಿಳೆಯರಿಗೆ ಸಮಾಜದಲ್ಲಿ ಸೂಕ್ತವಾದ ಸ್ಥಾನಮಾನ ಗೌರವ ನೀಡಿದರೆ ಮಹಿಳೆಯರು ಸಮಾಜದ ಮುಖ್ಯವಾಹಿನಿಗೆ ಬರಲು ಸಾಧ್ಯವಾಗುತ್ತದೆ. ಜನೋತ್ಸವ ಎಲ್ಲರೂ ಒಗ್ಗಟ್ಟಾಗಿ ಸಂಭ್ರಮಿಸುವ ಹಬ್ಬವಾಗಿದೆ ಎಂದು ಹೇಳಿದರು.

೪ನಾಲ್ಕನೇ ಪುಟಕ್ಕೆ

(ಮೊದಲ ಪುಟದಿಂದ) ಸಾಧನಾ ಮಹಿಳಾ ಸಹಕಾರ ಸಂಘದ ನಿರ್ದೇಶಕಿ ಪುಷ್ಪಾವತಿ ಮಾತನಾಡಿ ಮಹಿಳಾ ದಸರಾ ಮತ್ತಷ್ಟು ವಿಜ್ರಂಭಣೆಯಿAದ ನಡೆಯಬೇಕು, ಮಹಿಳೆಯರ ಸರ್ವತೋಮುಖ ಅಭಿವೃದ್ಧಿ ಆಗಬೇಕು ಎಂದು ಆಶಿಸಿದರು.

ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮಹೇಶ್ ಮಾತನಾಡಿ ಮಹಿಳೆ ಸಮಾಜದ ಶಕ್ತಿ ಹಾಗೂ ಮನೆಯ ಬೆಳಕಾಗಿದ್ದು, ಮಹಿಳೆಯರನ್ನು ಮುಖ್ಯವಾಹಿನಿಗೆ ತರುವ ಕೆಲಸವಾಗಬೇಕೆಂದರು. ಪ್ರಭಾರ ಸಹಾಯಕ ಶಿಶು ಅಭಿವೃದ್ಧಿ ಯೋಜನಾಧಿಕಾರಿ ಮೇಪಾಡಂಡ ಸವಿತಾ ಕೀರ್ತನ್ ಮಾತನಾಡಿ ಮಹಿಳೆಯರು ಸ್ವಾಭಿಮಾನ, ಸ್ವಯಂ ನಂಬಿಕೆ ಹಾಗೂ ಶ್ರಮದಿಂದ ಸಮಾಜದಲ್ಲಿ ಮುಂದೆ ಬರಬೇಕೆಂದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ದಸರಾ ಸಮಿತಿ ಅಧ್ಯಕ್ಷೆ ಪಿ.ಕಲಾವತಿ ಮಾತನಾಡಿ ಮಹಿಳೆಯರು ಮಕ್ಕಳಿಗೆ ಶಿಕ್ಷಣ ಕೊಡಿಸುವತ್ತ ಗಮನ ಹರಿಸಬೇಕೆಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ನಗರಸಭೆ ಸದಸ್ಯರಾದ ಸವಿತಾ ರಾಕೇಶ್, ಚಿತ್ರಾವತಿ, ಕೆ. ಉಷಾ, ಅನಿತಾ ಪೂವಯ್ಯ, ನಾಮನಿರ್ದೇಶಿತ ಸದಸ್ಯೆ ಜುಲೇಕಾಬಿ, ಮಡಿಕೇರಿ ದಸರಾ ಸಮಿತಿ ಖಜಾಂಚಿ ಸಬಿತಾ ವಿಜಯ್ ಹಾಗೂ ಓಡಿಪಿ ಸಂಸ್ಥೆಯ ಮುಖ್ಯಸ್ಥೆ ಜಾಯ್ಸ್ ಮೆನೆಜಸ್, ಮುಡಾ ಸದಸ್ಯೆ ಮಿನಾಜ್ ಪ್ರವೀಣ್ ಶೀಲಾ ಅಶೋಕ್, ಪುಷ್ಪ, ರಜನಿ ಮತ್ತಿತರಿದ್ದರು.

ಸನ್ಮಾನದ ಗೌರವ

ಮಹಿಳಾ ದಸರಾ ಪ್ರಯುಕ್ತ ಹದಿನಾರು ಮಂದಿಯನ್ನು ಕಾರ್ಯಕ್ರಮದಲ್ಲಿ ಸನ್ಮಾನಿಸಿ ಗೌರವಿಸಲಾಯಿತು. ಅಂಗನವಾಡಿ ಕಾರ್ಯಕರ್ತೆಯರಾದ ಬಿ.ಉಮಾವತಿ, ಬಿ.ಕುಸುಮ, ಪುಷ್ಪಾವತಿ, ಡಿ.ಜಯಲಕ್ಷಿö್ಮ, ಅಂಗನವಾಡಿ ಸಹಾಯಕಿಯರಾದ ಅಮೀನ, ನೀಲಮ್ಮ, ಜಯಂತಿ, ವಸಂತಿ, ಆಶಾ ಕಾರ್ಯಕರ್ತೆಯರಾದ ದಿವ್ಯ, ಸುಶೀಲ, ರೋಹಿಣಿ, ಪ್ರೇಮ, ಪೌರ ಕಾರ್ಮಿಕರಾದ ರಂಗಮ್ಮ, ಲಕ್ಷಿö್ಮ, ಕೆಂಗಪ್ಪಗಾರಿ ಲಕ್ಷö್ಮಮ್ಮ, ಮರಡಿ ಹನುಮಕ್ಕ ಇವರುಗಳನ್ನು ಗಣ್ಯರು ಸನ್ಮಾನಿಸಿ ಗೌರವಿಸಿದರು.

ಮಹಿಳಾ ದಸರಾ ಸಂದರ್ಭ ರೋಟರಿ ಮಡಿಕೇರಿ ವತಿಯಿಂದ ರವಿ ಆರ್ಥೋಪೆಡಿಕ್ ಸೆಂಟರ್ ಸಹಯೋಗದಲ್ಲಿ ಉಚಿತ ಮೂಳೆ ಹಾಗೂ ನರ ರೋಗ ತಪಾಸಣಾ ಶಿಬಿರ ಏರ್ಪಡಿಸಲಾಗಿತ್ತು. ಪ್ರಗತಿ ಕೇಡನ ಪ್ರಾರ್ಥಿಸಿ, ಸಾಂಸ್ಕೃತಿಕ ಸಮಿತಿ ಅಧ್ಯಕ್ಷ ಕುಡೆಕಲ್ ಸಂತೋಷ್ ಸ್ವಾಗತಿಸಿ, ಅನಿತಾ ದೇವಯ್ಯ ನಿರೂಪಿಸಿ, ದಿವ್ಯಾ ಮಂದಪ್ಪ ವಂದಿಸಿದರು.