ಕುಶಾಲನಗರ/ಕಣಿವೆ ಅ. ೧೯: ನಾಡಹಬ್ಬ ದಸರಾ ಮಹೋತ್ಸವದಲ್ಲಿ ಈ ಬಾರಿ ದುಬಾರೆ ಸಾಕಾನೆ ಶಿಬಿರದ ಆನೆಗಳು ವಿಶೇಷ ಗಮನ ಸೆಳೆಯುತ್ತಿವೆ. ಮೈಸೂರಿನ ವಿಶ್ವವಿಖ್ಯಾತ ದಸರಾದಲ್ಲಿ ಚಿನ್ನದ ಅಂಬಾರಿ ಹೊರಲು ದುಬಾರೆಯ ಪ್ರಶಾಂತ್ ಆಯ್ಕೆಯಾಗಿದ್ದರೆ, ಶ್ರೀರಂಗಪಟ್ಟಣದ ದಸರಾ ಜಂಬೂಸವಾರಿಯ ಉಸ್ತುವಾರಿ ಧನಂಜಯನಿಗೆ ಹಾಗೂ ತುಮಕೂರಿನ ಜಂಬೂಸವಾರಿಯ ನೇತೃತ್ವ ಲಕ್ಷö್ಮಣನಿಗೆ ಲಭಿಸಿದೆ.
ಹೀಗೆ ರಾಜ್ಯದ ಮೂರು ಕಡೆ ನಡೆಯುತ್ತಿರುವ ದಸರಾ ಮಹೋತ್ಸವಗಳಲ್ಲಿ ದುಬಾರೆ ಶಿಬಿರದ ಆನೆಗಳು ಪ್ರಮುಖ ಪಾತ್ರ ವಹಿಸುತ್ತಿವೆ.
ಈ ಬಾರಿ ದುಬಾರೆ ಆನೆ ಶಿಬಿರದಿಂದ ಒಟ್ಟು ಆರು ಆನೆಗಳು ವಿವಿಧ ದಸರಾ ಮಹೋತ್ಸವಗಳಲ್ಲಿ ಪಾಲ್ಗೊಳ್ಳುತ್ತಿವೆ. ಈ ಬೆಳವಣಿಗೆ ಶಿಬಿರದ ಸಿಬ್ಬಂದಿ ಹಾಗೂ ಅರಣ್ಯ ಇಲಾಖೆಯ ೪ಮೂರನೇ ಪುಟಕ್ಕೆ
(ಮೊದಲ ಪುಟದಿಂದ) ಅಧಿಕಾರಿಗಳಲ್ಲಿ ಸಂತಸ ಮೂಡಿಸಿದೆ.
ಪ್ರಶಾಂತ್ಗೆ ಚಿನ್ನದ ಅಂಬಾರಿಯ ಹೊಣೆ
ಮೈಸೂರಿನ ದಸರಾ ಮಹೋತ್ಸವದ ಪ್ರಮುಖ ಆಕರ್ಷಣೆಯಾದ ಸುಮಾರು ೭೫೦ ಕೆ.ಜಿ. ತೂಕದ ಚಿನ್ನದ ಅಂಬಾರಿ ಹೊರುವ ಜವಾಬ್ದಾರಿ ಈ ಬಾರಿ ಕೊಡಗಿನ ದುಬಾರೆ ಸಾಕಾನೆ ಶಿಬಿರದ ಪ್ರಶಾಂತ್ಗೆ ಲಭಿಸಿದೆ. ದುಬಾರೆ ಶಿಬಿರದ ಆನೆಯೊಂದಕ್ಕೆ ಈ ಅವಕಾಶ ದೊರೆತಿರುವುದು ಅರಣ್ಯ ಇಲಾಖೆಗೆ ಹೆಮ್ಮೆಯ ಸಂಗತಿಯಾಗಿದೆ. ಈ ಹಿನ್ನೆಲೆಯಲ್ಲಿ ಕುಶಾಲನಗರ ವಲಯ ಅರಣ್ಯಾಧಿಕಾರಿ ರಕ್ಷಿತ್, ದುಬಾರೆ ಶಿಬಿರದ ಉಪ ವಲಯ ಅರಣ್ಯಾಧಿಕಾರಿ ರಂಜನ್ ಸೇರಿದಂತೆ ಇತರ ಸಿಬ್ಬಂದಿ ಮೈಸೂರಿನ ಅರಮನೆ ಆವರಣಕ್ಕೆ ತೆರಳಿ ಪ್ರಶಾಂತ್ನನ್ನು ಉಪಚರಿಸಿ ಸಂತಸ ಹಂಚಿಕೊAಡರು.