ಕೋವರ್‌ಕೊಲ್ಲಿ ಇಂದ್ರೇಶ್

ಸೋಮವಾರಪೇಟೆ, ಅ. ೧೮: ಕೆಲ ತಿಂಗಳಿನಿAದ ಸ್ಥಗಿತಗೊಂಡಿದ್ದ ಚಾರಣಿಗರ ನೆಚ್ಚಿನ ತಾಣವಾದ ಕುಮಾರಪರ್ವತ ಚಾರಣಕ್ಕೆ ಅರಣ್ಯ ಇಲಾಖೆ ತಾ. ೧೮ರಿಂದ ಮತ್ತೆ ಅವಕಾಶ ಕಲ್ಪಿಸಿದೆ. ಕೊಡಗು- ಹಾಸನ ಮತ್ತು ದಕ್ಷಿಣ ಕನ್ನಡ ಜಿಲ್ಲೆಗಳ ಗಡಿಭಾಗದಲ್ಲಿರುವ ಈ ಜನಪ್ರಿಯ ತಾಣಕ್ಕೆ ಪ್ರಸ್ತುತ ಕುಮಾರಳ್ಳಿ, ಬೀದಳ್ಳಿ ಮಾರ್ಗದಲ್ಲಿ ಮಾತ್ರ ಸಧ್ಯಕ್ಕೆ ಚಾರಣಕ್ಕೆ ಅನುಮತಿ ನೀಡಲಾಗಿದೆ ಎಂದು ಅರಣ್ಯ ಅಧಿಕಾರಿಗಳು ತಿಳಿಸಿದ್ದಾರೆ.

೨೦೨೬ ರಲ್ಲಿ ಮಲೆ ಮಹದೇಶ್ವರ ಬೆಟ್ಟದಲ್ಲಿ ಯುವಕನ ಮೇಲೆ ಮಾರಣಾಂತಿಕ ಚಿರತೆ ದಾಳಿ, ದಕ್ಷಿಣ ಕೊಡಗಿನ ತಡಿಯಂಡಮೋಳ್ ನಲ್ಲಿ ಕಾಣೆಯಾದ ಚಾರಣಿಗರಿಗಾಗಿ ಪ್ರಮುಖ ಶೋಧ ಕಾರ್ಯಾಚರಣೆ ಮತ್ತು ಚಿಕ್ಕಮಗಳೂರಿನ ಬಂಡಾಜೆ ಜಲಪಾತದಲ್ಲಿಯೂ ಪ್ರವಾಸಿಗರ ನಾಪತ್ತೆ ಪ್ರಕರಣ ಅಲ್ಲದೆ ಕಳೆದ ಏಪ್ರಿಲ್‌ನಲ್ಲಿ ಚಿಕ್ಕಮಗಳೂರಿನ ಚಂದ್ರದ್ರೋಣ ಪರ್ವತದಲ್ಲಿ ಕೇರಳದ ೧೫ ವರ್ಷದ ಬಾಲಕಿಯೊಬ್ಬಳು ಬಿದ್ದು ಮೃತಪಟ್ಟ ಘಟನೆಯ ನಂತರ ರಾಜ್ಯ ಸರ್ಕಾರ ಚಾರಣ ಹಾಗೂ ಗಿರಿ ತಾಣಗಳಿಗೆ ಸಾರ್ವಜನಿಕರಿಗೆ ನಿಷೇದವನ್ನು ಹೇರಿತ್ತು.

ನಂತರ ಹಿರಿಯ ಅರಣ್ಯಾಧಿಕಾರಿಗಳ ತಂಡವನ್ನು ರಚಿಸಿ ಪ್ರವಾಸಿಗರ ಸುರಕ್ಷತೆಗಾಗಿ ಪ್ರಾಮಾಣಿತ ಕಾರ್ಯ ವಿಧಾನ (Sಣಚಿಟಿಜಚಿಡಿಜ oಠಿeಡಿಚಿಣiಟಿg ಠಿಡಿoಛಿeಜuಡಿe) ವನ್ನು ರೂಪಿಸಲು ಆದೇಶಿಸಲಾಗಿತ್ತು. ಅಧಿಕಾರಿಗಳ ತಂಡ ನೀಡಿರುವ ಮಾರ್ಗದರ್ಶಿ ಸೂತ್ರಗಳ ಅನುಷ್ಠಾನ ಹಾಗೂ ಮೂಲ ಸೌಕರ್ಯಗಳನ್ನು ನಿರ್ಮಿಸಿದ ನಂತರ ರಾಜ್ಯದ ಬಹುತೇಕ (ಒಟ್ಟು ೩೯ ಚಾರಣ ಪಥಗಳಿವೆ) ಚಾರಣ ಪಥಗಳಲ್ಲಿ ಚಾರಣಿಗರಿಗೆ ಅವಕಾಶ ನೀಡಲಾಯಿತು. ಆದರೆ ಕುಮಾರಪರ್ವತ ಚಾರಣಕ್ಕೆ ಅವಕಾಶ ನೀಡಿರಲಿಲ್ಲ. ಸ್ಥಳೀಯ ಅರಣ್ಯಾಧಿಕಾರಿಗಳ ಶಿಫಾರಸ್ಸಿನ ಮೇರೆಗೆ ಬೀದಳ್ಳಿ ಕಡೆಯಿಂದ ಕುಮಾರಪರ್ವತದ ನೆತ್ತಿಯವರೆಗೆ ೭ ಕಿಲೋಮೀಟರ್ ಚಾರಣಕ್ಕೆ ಅವಕಾಶ ಕಲ್ಪಿಸಲಾಗಿದೆ ಎಂದು ಪುಷ್ಪಗಿರಿ ವನ್ಯಜೀವಿ ವಲಯದ ಅರಣ್ಯಾಧಿಕಾರಿ ಕೆ. ದಿನೇಶ್ ತಿಳಿಸಿದ್ದಾರೆ. ಬೀದಳ್ಳಿ ಗೆ ಪುನಃ ಹಿಂತಿರುಗಿದರೆ ೧೪ ಕಿಮೀ ಚಾರಣ ಆಗುತ್ತದೆ. ಸುಬ್ರಮಣ್ಯ ಮಾರ್ಗದ ಚಾರಣಪಥದಲ್ಲಿ ೨೪ ಕಿಮೀ ಚಾರಣ ಆಗುತ್ತದೆ. ೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ಕುಮಾರಪರ್ವತ ಚಾರಣಕ್ಕೆ ಕುಕ್ಕೆ ಸುಬ್ರಮಣ್ಯ ಕಡೆಯಿಂದ ಭಾರೀ ಬೇಡಿಕೆ ಇದ್ದು, ಮುಂದಿನ ದಿನಗಳಲ್ಲಿ ಆ ಮಾರ್ಗವನ್ನೂ ತೆರೆಯುವುದಾಗಿ ಅವರು ತಿಳಿಸಿದರು. ಚಾರಣಕ್ಕೆ ಬರುವ ಬಹುತೇಕ ಚಾರಣಿಗರು ಬೆಂಗಳೂರಿನಿAದ ರೈಲಿನಲ್ಲಿ ಬರುತ್ತಿದ್ದು ಕುಕ್ಕೆ ಕಡೆಯಿಂದ ೧೨ ಕಿ.ಮೀ ಚಾರಣ ಮಾಡಿ ಕುಮಾರ ಪರ್ವತ ತಲುಪುತ್ತಾರೆ ನಂತರ ಅಲ್ಲಿಂದ ವಾಪಾಸ್ ಹಿಂತಿರುಗುತ್ತಾರೆ. ಬೀದಳ್ಳಿ ಭಾಗದ ಅರಣ್ಯ ಇಲಾಖೆಯ ಬೇಸ್ ಕ್ಯಾಂಪಿನಿAದ ಕುಕ್ಕೆ ಸುಬ್ರಮಣ್ಯ ಕಡೆಗೆ ಚಾರಣ ಮಾಡುವುದಾದರೆ ಒಟ್ಟು ೧೯ ಕಿಲೋಮೀಟರ್ ಕ್ರಮಿಸಬೇಕಾಗುತ್ತದೆ. ಇದೀಗ ಚಾರಣಕ್ಕೆ ಒಂದು ಮಾರ್ಗದಲ್ಲಿ ಅವಕಾಶ ನೀಡಿದ್ದರೂ ಬೀದಳ್ಳಿ ತಲುಪಲು ಸಂಪರ್ಕ ವ್ಯವಸ್ಥೆ ಸಮರ್ಪಕವಾಗಿಲ್ಲ. ಉಳಿದುಕೊಳ್ಳಲು ವ್ಯವಸ್ಥೆ ಇಲ್ಲ. ಕುಕ್ಕೆಗೆ ಎಲ್ಲಾ ಕಡೆಗಳಿಂದ ಬಸ್ ಹಾಗೂ ರೈಲು ಸಂಪರ್ಕ ಹಾಗೂ ತಂಗುವ ವ್ಯವಸ್ಥೆ ಚೆನ್ನಾಗಿದೆ. ಕೂಡಲೇ ಈ ಮಾರ್ಗವನ್ನು ಚಾರಣಕ್ಕೆ ತೆರಯುವಂತೆ ಚಾರಣಿಗರು ಒತ್ತಾಯಿಸಿದ್ದಾರೆ.

ಈ ಕುರಿತು ಪ್ರತಿಕ್ರಿಯಿಸಿದ ವಲಯ ಅರಣ್ಯಾಧಿಕಾರಿ ದಿನೇಶ್ ನಾವು ಇಲಾಖೆ ವತಿಯಿಂದ ಈಗಾಗಲೇ ೯೦ ಜನ ಗೈಡ್‌ಗಳಿಗೆ ತರಬೇತಿ ನೀಡಿದ್ದು ೩೦ ಜನರು ಬೀದಳ್ಳಿ ಮಾರ್ಗವಾಗಿ ಸೇವೆಗೆ ಲಭ್ಯವಿದ್ದಾರೆ ಎಂದು ತಿಳಿಸಿದರು. ಇಲಾಖೆಯ ಮಾರ್ಗಸೂಚಿಯಂತೆ ಪ್ರವಾಸಿಗರ ಸುರಕ್ಷತೆಗೆ ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಚಾರಣ ಪಥದಲ್ಲಿ ಕಾಡು ಸ್ವಚ್ಚ ಮಾಡಲಾಗಿದೆ. ಪ್ರತಿನಿತ್ಯ ೩೦೦ ಜನ ಚಾರಣಿಗರಿಗೆ ಆನ್‌ಲೈನ್ ಮೂಲಕ ಅವಕಾಶ ನೀಡಲಾಗುತ್ತಿದೆ. ಒಬ್ಬರಿಗೆ ರೂ. ೩೫೦ ಶುಲ್ಕ ವಿಧಿಸಲಾಗುತಿದ್ದು, ೧೦ ಜನರ ತಂಡ ಮಾಡಿ ಗೈಡ್ ಜತೆ ಕಳಿಸಲಾಗುತ್ತಿದೆ. ಗೈಡ್‌ಗೆ ಪ್ರತ್ಯೇಕ ಶುಲ್ಕ ನೀಡಬೇಕಿದೆ. ಒಬ್ಬರು, ಮೂವರ ತಂಡಕ್ಕೆ ಮತ್ತು ಯಾವುದೇ ಕಾರಣಕ್ಕೂ ಗೈಡ್ ಇಲ್ಲದೆ ಕಾಡಿನೊಳಕ್ಕೆ ಚಾರಣಕ್ಕೆ ಅವಕಾಶ ನೀಡಲಾಗುವುದಿಲ್ಲ.

ಗೈಡ್‌ಗಳಿಗೆ ೨ ಕಿಮಿ ವ್ಯಾಪ್ತಿಯ ಶಾರ್ಟ್ ರೇಂಜ್ ವಾಕಿ ಟಾಕಿ ಜತೆಗೆ ಅವರಿಗೆ ರೇಡಿಯಂ ಲೇಪಿತ ಜಾಕೆಟ್‌ಗಳನ್ನೂ ಒದಗಿಸಲಾಗಿದೆ. ದಾರಿ ತಪ್ಪದಂತೆ ಅಲ್ಲಲ್ಲಿ ನಾಮಫಲಕಗಳನ್ನೂ ಅಳವಡಿಸಲಾಗಿದೆ. ಬಹು ಮುಖ್ಯವಾಗಿ ೪-೫ ಕಡೆಗಳಲ್ಲಿ ದಟ್ಟಾರಣ್ಯದಲ್ಲಿ ಮೊಬೈಲ್ ನೆಟ್‌ವರ್ಕ್ ಸಿಗುವ ಸ್ಥಳಗಳಲ್ಲಿ ಬೋರ್ಡ್ ಅಳವಡಿಸಲಾಗಿದೆ. ಜಿಪಿಎಸ್ ಟ್ರಾö್ಯಕಿಂಗ್ ವ್ಯವಸ್ಥೆಯೂ ಇದೆ. ಚಾರಣಿಗರು ಗೈಡ್ ಜತೆಯಲ್ಲೇ ಇದ್ದರೆ ದಾರಿ ತಪ್ಪುವ ಅವಕಾಶವೇ ಇಲ್ಲ ಎಂದು ದಿನೇಶ್ ತಿಳಿಸಿದರು.

ಮಾರ್ಗದರ್ಶಿ ಸೂತ್ರದ ಪ್ರಕಾರ ತುರ್ತು ಸಂದರ್ಭ ಅರಣ್ಯ ಸಿಬ್ಬಂದಿ, ಪೊಲೀಸರು, ಎಸ್‌ಡಿಆರ್‌ಎಫ್, ಡ್ರೋನ್‌ಗಳು ಮತ್ತು ಸ್ಥಳೀಯ ಸಮುದಾಯಗಳನ್ನು ಒಳಗೊಂಡ ಸಂಘಟಿತ ರಕ್ಷಣಾ ಕಾರ್ಯಾಚರಣೆಗಳನ್ನು ಸಹ ಒದಗಿಸಲಾಗುತ್ತದೆ, ಜೊತೆಗೆ ಉಲ್ಲಂಘಿಸುವವರ ಮೇಲೆ ಕ್ರಮ ಮತ್ತು ಕಪ್ಪುಪಟ್ಟಿಗೆ ಸೇರಿಸಲಾಗುತ್ತದೆ ಎಂದು ಅವರು ತಿಳಿಸಿದರು. ಸುಬ್ರಮಣ್ಯ ಕಡೆಯಿಂದ ಚಾರಣಕ್ಕೆ ಅನುಮತಿ ನೀಡುವಂತೆ ಶೀಘ್ರದಲ್ಲಿ ಶಿಫಾರಸು ಮಾಡಲಾಗುತ್ತಿದ್ದು, ಈ ತಿಂಗಳ ಅಂತ್ಯದೊಳಗೆ ಅನುಮತಿ ನೀಡುವ ಸಾಧ್ಯತೆ ಇದೆ ಎಂದು ದಿನೇಶ್ ಹೇಳಿದರು.

ಮಳೆಗಾಲ ಹಾಗೂ ಜನವರಿ - ಮಾರ್ಚ್ ಬೇಸಿಗೆ ಕಾಲದಲ್ಲಿ ಚಾರಣಿಗರು ಅಪಾಯಕ್ಕೀಡಾಗುವ ಸಾಧ್ಯತೆ ಹಾಗೂ ಅರಣ್ಯಕ್ಕೆ ಬೆಂಕಿ ತಗುಲುವ ಸಾಧ್ಯತೆ ಹಿನ್ನೆಲೆಯಲ್ಲಿ ಚಾರಣಕ್ಕೆ ಅವಕಾಶ ನೀಡುವುದಿಲ್ಲ. ಚಾರಣಿಗರು ಪ್ಲಾಸ್ಟಿಕ್ ವಸ್ತುಗಳನ್ನು ಅರಣ್ಯದೊಳಗೆ ಬಿಸಾಡಲು ಅವಕಾಶವಿಲ್ಲದೆ ಕಟ್ಟುನಿಟ್ಟಿನ ನಿಯಮಾವಳಿಗಳ ಅನ್ವಯ ಇಲಾಖೆ ಚಾರಣಕ್ಕೆ ಅನುಮತಿ ನೀಡಿದೆ.