ನಾಪೋಕ್ಲು, ಅ. ೧೮: ಭಜರಂಗಿ ಯೂತ್ ಕ್ಲಬ್ ಬಲ್ಲಮಾವಟಿ ವತಿಯಿಂದ ೪ನೇ ವರ್ಷದ ಗ್ರಾಮ ಪಂಚಾಯಿತಿ ಮಟ್ಟದ ಕ್ರಿಕೆಟ್ ಪಂದ್ಯಾವಳಿ - ೨೦೨೬ ಅನ್ನು ಆಯೋಜಿಸಲಾಗಿದೆ.

ಈ ಪಂದ್ಯಾವಳಿ ತಾ. ೨೭, ೨೮ ಮತ್ತು ೨೯ ರಂದು ಬಲ್ಲಮಾವಟಿಯ ನೇತಾಜಿ ಪ್ರೌಢಶಾಲಾ ಮೈದಾನದಲ್ಲಿ ನಡೆಯಲಿದೆ.

ಪ್ರಥಮ ಬಹುಮಾನ ರೂ. ೩೩,೩೩೩ ಹಾಗೂ ಟ್ರೋಫಿ, ದ್ವಿತೀಯ ಬಹುಮಾನ ರೂ. ೨೨,೨೨೨ ಹಾಗೂ ಟ್ರೋಫಿ, ಮೂರನೇ ಹಾಗೂ ನಾಲ್ಕನೇ ಬಹುಮಾನ ಟ್ರೋಫಿಗಳು, ವಿಶೇಷ ಪ್ರಶಸ್ತಿಗಳು, ಪಂದ್ಯ ಪುರುಷೋತ್ತಮ, ಸರಣಿ ಪುರುಷೋತ್ತಮ, ಉತ್ತಮ ದಾಂಡಿಗ ಹಾಗೂ ಉತ್ತಮ ಎಸೆತಗಾರ ಪ್ರಶಸ್ತಿಗಳನ್ನು ನೀಡಲಾಗುವುದು.