ಸಿದ್ದಾಪುರ, ಅ. ೧೮: ಮಂಗಳವಾರದAದು ಕರಡಿಗೋಡು ಗ್ರಾಮದ ಷಣ್ಮುಗಂ ಎಂಬವರ ಮನೆಗೆ ರಾತ್ರಿ ಶಾಟ್ ಸರ್ಕ್ಯೂಟ್ ನಿಂದಾಗಿ ವ್ಯಾಪಿಸಿದ ಬೆಂಕಿ ಯಿಂದ ಮನೆ ಹಾಗೂ ಮನೆ ಯಲ್ಲಿದ್ದ ಬೆಳೆಬಾಳುವ ವಸ್ತು ಗಳು ನಗದು ಚಿನ್ನಾಭರಣ ಗಳು, ಪಿಠೋಪಕರಣಗಳು, ಬೆಂಕಿಗೆ ಆಹುತಿ ಆಗಿದ್ದ ಹಿನ್ನಲೆಯಲ್ಲಿ ವೀರಾಜಪೇಟೆ ತಾಲೂಕು ತಹಶೀಲ್ದಾರ್ ಪ್ರವೀಣ್ ಕುಮಾರ್ ಅವರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಮನೆಯ ಮಾಲೀಕ ಷಣ್ಮುಗಂ ಅವರು ಘಟನೆಯ ಬಗ್ಗೆ ವಿವರಿಸಿ ಲಕ್ಷಾಂತರ ರೂಪಾಯಿ ನಷ್ಟ ಸಂಭವಿಸಿದ್ದು ಜೀವನ ಮಾಡಲು ಯಾವುದೇ ಮಾರ್ಗವಿಲ್ಲ ಎಂದು ಅಳಲು ತೋಡಿಕೊಂಡರು. ತಹಶೀಲ್ದಾರ್ ಪ್ರವೀಣ್ ಕುಮಾರ್ ಅವರು ತುರ್ತಾಗಿ ಕುಟುಂಬಕ್ಕೆ ಅಗತ್ಯ ವಸ್ತುಗಳ ಕಿಟ್‌ಗಳನ್ನು ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ಅಮ್ಮತ್ತಿ ಹೋಬಳಿ ಕಂದಾಯ ಪರಿವೀಕ್ಷಕ ಅನಿಲ್ ಕುಮಾರ್ ಸಿದ್ದಾಪುರ ಗ್ರಾಮ ಆಡಳಿತ ಅಧಿಕಾರಿ ಸಚಿನ್ ಕುಲಕರ್ಣಿ ಹಾಜರಿದ್ದರು.