ಮಡಿಕೇರಿ, ಅ. ೧೮: ಮಡಿಕೇರಿಯ ನಿಸರ್ಗ ಬಡಾವಣೆಯ ನಿವಾಸಿಗಳ ವತಿಯಿಂದ ಇಂದು ಸ್ವಚ್ಛತಾ ಅಭಿಯಾನವನ್ನು ಹಮ್ಮಿಕೊಳ್ಳಲಾಯಿತು. ಎಸ್.ಪಿ ಕಚೇರಿ ಮುಂಭಾಗದಿAದ ಅಗ್ನಿಶಾಮಕ ಠಾಣೆಯವರೆಗಿನ ರಸ್ತೆ ಬದಿಯಲ್ಲಿ ಸ್ವಚ್ಛತಾ ಕಾರ್ಯವನ್ನು ಕೈಗೊಳ್ಳಲಾಯಿತು.

ಈ ಕಾರ್ಯಕ್ರಮದಲ್ಲಿ ಬಡಾವಣೆಯ ನಿವಾಸಿಗಳು ಉತ್ಸಾಹದಿಂದ ಭಾಗವಹಿಸಿ, ರಸ್ತೆ ಬದಿಯ ಕಸವನ್ನು ತೆರವುಗೊಳಿಸಿ ಪರಿಸರ ಸ್ವಚ್ಛತೆಗೆ ಕೈಜೋಡಿಸಿದರು. ನಮ್ಮ ಮನೆ ಮಾತ್ರವಲ್ಲದೆ, “ಸ್ವಚ್ಛ ಪರಿಸರ ನಮ್ಮೆಲ್ಲರ ಜವಾಬ್ದಾರಿ. ಸ್ವಚ್ಛತೆ ಕೇವಲ ಒಂದು ದಿನದ ಕಾರ್ಯಕ್ರಮವಾಗದೆ, ಪ್ರತಿಯೊಬ್ಬರ ಜೀವನದ ಭಾಗವಾಗಬೇಕು” ಎಂಬ ಸಂದೇಶವನ್ನು ಈ ಮೂಲಕ ಸಾರಲಾಯಿತು.

ಬಡಾವಣೆಯ ಸ್ವಚ್ಛತೆ, ಆರೋಗ್ಯಕರ ಪರಿಸರ ಮತ್ತು ಸಾರ್ವಜನಿಕರಲ್ಲಿ ಸ್ವಚ್ಛತೆಯ ಅರಿವು ಮೂಡಿಸುವ ನಿಟ್ಟಿನಲ್ಲಿ ನಿವಾಸಿಗಳ ಈ ಪ್ರಯತ್ನ ಶ್ಲಾಘನೀಯವಾಗಿದೆ. ಮುಂದಿನ ದಿನಗಳಲ್ಲಿಯೂ ಇಂತಹ ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ನಮ್ಮ ಬಡಾವಣೆಯನ್ನು ಸ್ವಚ್ಛ ಹಾಗೂ ಸುಂದರವಾಗಿಡಲು ಎಲ್ಲರೂ ಸಹಕರಿಸಬೇಕೆಂದು ಮನವಿ ಮಾಡಲಾಯಿತು.

ಸ್ವಚ್ಛತಾ ಕಾರ್ಯದಲ್ಲಿ ಎಫ್.ಎಂ.ಸಿ ಕಾಲೇಜು ಪ್ರಾಂಶುಪಾಲ ಮೇಜರ್ ಡಾಕ್ಟರ್ ರಾಘವ ಬಿ, ನಗರ ಸಭೆ ನಾಮನಿರ್ದೇಶನ ಸದಸ್ಯ ಮಂಡಿರ ಸದಾ ಮುದ್ದಪ್ಪ, ಮೆಟ್ರೋ ಸುಗು, ಸೂರ್ತಲೆ ಸೋಮಣ್ಣ, ಎಂ. ಸಂಜೀವ, ಎ.ಎ. ಹರಿಶ್ಚಂದ್ರ, ಸೋಮಶೇಖರ್ ಪತ್ತಾರ್, ಎ. ಭಾಸ್ಕರ್, ಮುಖ್ತಾರ್ ಹೋಂಸ್ಟೇ ಮಾಲೀಕರು ಹಾಜರಿದ್ದರು.