ಮಡಿಕೇರಿ,ಅ.೧೮: ವೈವಿಧ್ಯಮಯ ಕಾರ್ಯಕ್ರಮಗಳ ಮೂಲಕ ಸಂಭ್ರಮದಿAದ ನಡೆಯುತ್ತಿರುವ ಮಡಿಕೇರಿ ದಸರಾದಲ್ಲಿ ಆಯೋಜನೆಗೊಂಡಿದ್ದ ಜಾನಪದ ದಸರಾ ಉತ್ಸವವು, ಮಣ್ಣಿನ ಸೊಗಡಿನ ಜಾನಪದೀಯ ಕಲಾ ಪ್ರಾಕಾರಗಳ ಪ್ರದರ್ಶನದೊಂದಿಗೆ ನಾಡಹಬ್ಬಕ್ಕೆ ರಂಗು ತುಂಬಿತು.
ಕೊಡಗು ಜಾನಪದ ಪರಿಷತ್ ನೇತೃತ್ವದಲ್ಲಿ, ಮಡಿಕೇರಿ ನಗರ ದಸರಾ ಸಮಿತಿ, ಸಾಂಸ್ಕೃತಿಕ ಸಮಿತಿಯ ಸಹಯೋಗದೊಂದಿಗೆ ಆಯೋಜಿಸಿದ್ದ ಜಾನಪದ ದಸರಾ ಉತ್ಸವದಲ್ಲಿ ಜಾನಪದ ಸಂಸ್ಕೃತಿ, ಸಾಹಿತ್ಯ, ಕಲೆ, ಆಚಾರ ವಿಚಾರಗಳ ಸಮ್ಮಿಲನವಾಯಿತು.
ಯುವ ಜನಾಂಗದಲ್ಲಿ ಜಾನಪದ ಸಂಸ್ಕೃತಿಯ ಬಗ್ಗೆ ಜಾಗೃತಿ, ಆಸಕ್ತಿ, ಜಾನಪದ ಕಲೆಗಳ ಪರಿಚಯ, ಕಲಾವಿದರಿಗೆ ಪ್ರೋತ್ಸಾಹ ನೀಡುವ ನಿಟ್ಟಿನಲ್ಲಿ ಕಾರ್ಯಾಚರಿಸುತ್ತಿರುವ ಜಿಲ್ಲಾ ಜಾನಪದ ಪರಿಷತ್, ದಸರಾಕ್ಕೂ ಜಾನಪದ ಮೆರುಗು ನೀಡುವ ಮೂಲಕ ಸಂಭ್ರಮವನ್ನು ಇಮ್ಮಡಿಗೊಳಿಸಿತು.
ಬೆಳಿಗ್ಗೆ ನಗರದ ಹಳೆ ಖಾಸಗಿ ಬಸ್ ನಿಲ್ದಾಣದಿಂದ ಆರಂಭಗೊAಡ ವಿವಿಧ ಜಾನಪದ ಕಲಾ ತಂಡಗಳ ಮೆರವಣಿಗೆಯು ಜಾನಪದ ಸಂಸ್ಕೃತಿಯ ವೈಭವವನ್ನು ಕಣ್ಣಿಗೆ ಕಟ್ಟಿಕೊಟ್ಟಿತು. ಕಲಾ ಜಾಥಾವನ್ನು ಮಡಿಕೇರಿ ನಗರ ಸಭೆಯ ಅಧ್ಯಕ್ಷೆ ಹಾಗೂ ದಸರಾ ಸಮಿತಿಯ ಅಧ್ಯಕ್ಷರೂ ಆಗಿರುವ ಪಿ.ಕಲಾವತಿ ಸೇರಿದಂತೆ ಪ್ರಮುಖರು ಡೊಳ್ಳು ಬಾರಿಸುವ ಮೂಲಕ ಉದ್ಘಾಟಿಸಿದರು.
ನಂತರ ನಗರದ ಪ್ರಮುಖ ರಸ್ತೆಯ ಮೂಲಕ ಸಾಗಿದ ಜಾನಪದ ಕಲಾ ತಂಡಗಳ ಜಾಥಾ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ಸಮಾಪನಗೊಂಡಿತು. ಮಂಡ್ಯ ಜಿಲ್ಲೆಯ ಡೊಳ್ಳು ಕುಣಿತ, ರಾಮನಗರ ಜಿಲ್ಲೆಯ ಪೂಜಾ ಕುಣಿತ, ವೀರಗಾಸೆ, ಬಾಗಲಕೋಟೆಯ ಕರಡಿ ಮಜಲು, ಹೊಳೆನರಸೀಪುರದ ರಂಗ ಕುಣಿತ, ಕುಶಾಲನಗರದ ರಾಜು ಮತ್ತು ತಂಡದಿAದ ಮೂಡಿಬಂದ ಜಾನಪದ ಜಾಗೃತಿ ನಾಟಕಗಳು ಜಾನಪದ ಜಾತ್ರೆಗೆ ಮೆರುಗು ನೀಡಿದವು.
ಮೆರವಣಿಗೆಯಲ್ಲಿ ಮಾತ್ರವಲ್ಲದೇ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲೂ ಎಲ್ಲಾ ಕಲಾ ತಂಡಗಳ ಪ್ರದರ್ಶನ ನಡೆಯಿತು. ಜಿಲ್ಲೆ ಮಾತ್ರವಲ್ಲದೆ ಹೊರ ಜಿಲ್ಲೆಗಳ ಜಾನಪದ ಕಲೆಗಳನ್ನು ಜಾನಪದೀಯ ಮನಸುಗಳು ಕಣ್ತುಂಬಿಕೊAಡವು.
ವೇದಿಕೆಯ ಮುಂಭಾಗ ಮಡಿಕೇರಿಯ ಪೊನ್ನಚ್ಚನ ಮಧುಸೂದನ್ ಹಾಗೂ ಪ್ರೀತು ದಂಪತಿ ಮತ್ತು ಕಿಗ್ಗಾಲು ಹರೀಶ್ ಸಂಗ್ರಹದ ಜಾನಪದ ವಸ್ತು ಪ್ರದರ್ಶನವನ್ನು ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳು ಹಾಗೂ ವೀರಾಜಪೇಟೆ ಕ್ಷೇತ್ರದ ಶಾಸಕ ಎ.ಎಸ್. ಪೊನ್ನಣ್ಣ ಉದ್ಘಾಟಿಸಿದರು.
ನಂತರ ಜಾನಪದ ದಸರಾ ಸಭಾ ಕಾರ್ಯಕ್ರಮವನ್ನು ದೀಪ ಬೆಳಿಗಿಸುವ ಮೂಲಕ ಎ.ಎಸ್. ಪೊನ್ನಣ್ಣ ಉದ್ಘಾಟಿಸಿದರು. ಜೊತೆಗೆ ಗೆಜ್ಜೆ, ತಾಳ, ಬೀಸುವ ಕಲ್ಲುಗಳನ್ನು ಬಳಸುವ ಮೂಲಕ, ಕಡ್ಲೇರ ತುಳಸಿ ಮೋಹನ್ ತಂಡದ ಹಿನ್ನೆಲೆ ಗಾಯನದೊಂದಿಗೆ ವಿಭಿನ್ನವಾಗಿ ಕಾರ್ಯಕ್ರಮ ಉದ್ಘಾಟನೆಗೊಂಡಿತು. ಕಿತ್ತೂರು ರಾಣಿ ಚೆನ್ನಮ್ಮ, ಒನಕೆ ಓಬವ್ವ, ಕೊಡವತಿಯ ವೇಷ ಧರಿಸಿದ್ದ ಪುಟಾಣಿ ಮಕ್ಕಳು ವಿಶೇಷ ಆಕರ್ಷಣೆಯಾಗಿದ್ದರು.ನಂತರ ಮಾತನಾಡಿದ ಪೊನ್ನಣ್ಣ, ಜಾನಪದವನ್ನು ಉಳಿಸುವ ಜವಾಬ್ದಾರಿ ೪ಐದನೇ ಪುಟಕ್ಕೆ
(ಮೊದಲ ಪುಟದಿಂದ) ನಮ್ಮೆಲ್ಲರ ಮೇಲಿದೆ. ಸಂಪ್ರದಾಯ-ಪರAಪರೆಗಳು ಉಳಿಯಬೇಕು. ಆಧುನಿಕ ಯುಗದಲ್ಲಿ ತಂತ್ರಜ್ಞಾನ, ಯಂತ್ರಜ್ಞಾನದ ಸಂದರ್ಭದಲ್ಲಿ ಜಾನಪದವನ್ನು ಉಳಿಸಲು ವಿಶೇಷ ಕಾಳಜಿ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಕಳೆದ ೬ ವರ್ಷಗಳಿಂದ ಕಾರ್ಯಕ್ರಮ ಆಯೋಜಿಸುತ್ತಿರುವ ಜಾನಪದ ಪರಿಷತ್ನ ಕೆಲಸ ಶ್ಲಾಘನೀಯ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಜಾನಪದದ ಉಳಿವಿಗೆ ಶತಮಾನಗಳಿಂದ ಪೂರ್ವಜರು ಪಟ್ಟ ಶ್ರಮವನ್ನು ನೆನಪಿಸಿಕೊಳ್ಳಬೇಕು. ಜಾನಪದ ಅರಿತರೆ ಪೂರ್ವಜರ ಶ್ರಮ ಅರಿವಾಗುತ್ತದೆ. ಕನ್ನಡ ಜಾನಪದ, ಸಾಹಿತ್ಯ, ಪರಂಪರೆ ಉಳಿಯುವುದು ಚಳುವಳಿಗಳಿಂದ ಅಲ್ಲ; ಅವುಗಳನ್ನು ಬಳಸುವ ಮೂಲಕ ಉಳಿಸಬೇಕು ಎಂದು ಅಭಿಪ್ರಾಯಿಸಿದ ಅವರು, ಜಾನಪದ ಪರಿಷತ್ ಕೆಲಸಗಳಿಗೆ ಸರ್ವ ರೀತಿಯ ಸಹಕಾರ ನೀಡಲಾಗುವುದು ಎಂದರು.
ಅಧ್ಯಕ್ಷತೆ ವಹಿಸಿದ್ದ ಕೊಡಗು ಜಾನಪದ ಪರಿಷತ್ ಅಧ್ಯಕ್ಷ ಬಿ.ಜಿ. ಅನಂತಶಯನ ಮಾತನಾಡಿ, ಜಾನಪದ ಸಾಹಿತ್ಯವು ಆಯಾ ಸಂದರ್ಭಕ್ಕೆ ತಕ್ಕಂತೆ ಹೃದಯದಿಂದ ಬರುತ್ತದೆ. ಜಾನಪದಕ್ಕೆ ಮಾತುಗಳೇ ಸಂಗೀತ; ಹೃದಯ ಬಡಿತವೇ ತಾಳ. ಜಾನಪದೀಯರಿಗೆ ಹೃದಯದ ಭಾಷೆ ಮುಖ್ಯ, ಅಳಿಯುತ್ತಿರುವ ಇಂತಹ ಹೃದಯದ ಭಾಷೆಗೆ ಮತ್ತೆ ಜೀವ ತುಂಬಬೇಕು ಎಂಬುದೇ ಪರಿಷತ್ನ ಉದ್ದೇಶವಾಗಿದೆ ಎಂದರು.
ಎಲೆಮರೆಯ ಕಾಯಿಗಳಂತಿರುವ ಜಾನಪದೀಯರನ್ನು ಗುರುತಿಸುವ ಕೆಲಸ ಪರಿಷತ್ನಿಂದ ಆಗುತ್ತಿದೆ ಎಂದ ಅವರು, ಒಲವಿನ ಮಳೆ ಹರಿಸಿ ನಾಡು ತಂಪಾಗಿಸುವುದೇ ಜಾನಪದೀಯರ ಆಶಯವಾಗಿದೆ ಎಂದು ಅಭಿಪ್ರಾಯಿಸಿದರು. ಮುಖ್ಯ ಅತಿಥಿಯಾಗಿದ್ದ ಕೊಡವ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಅಜ್ಜಿನಿಕಂಡ ಮಹೇಶ್ ನಾಚಯ್ಯ ಮಾತನಾಡಿ, ಜಾನಪದ ಕಲೆಗಳ ಉಳಿವಿಗೆ ಎಲ್ಲರೂ ಕೈಜೋಡಿಸಬೇಕು ಎಂದರು.
ಉದ್ಯಮಿ ಜಯಾ ಚಿಣ್ಣಪ್ಪ ಮಾತನಾಡಿ, ದಸರಾ ಕೇವಲ ಹಬ್ಬವಲ್ಲ. ನಾಡಿನ ಸಂಸ್ಕೃತಿ- ಸಂಪ್ರದಾಯದ ಅನಾವರಣಕ್ಕೆ ವೇದಿಕೆಯಾಗಿದೆ. ಆಧುನಿಕ ಜೀವನದ ನಡುವೆ ನಮ್ಮ ಬೇರುಗಳನ್ನು ಮರೆಯಬಾರದು ಎಂದರು. ಕುಶಾಲನಗರದ ಉದ್ಯಮಿ ಪೊನ್ನಚ್ಚನ ಮೋಹನ್ ಮಾತನಾಡಿ, ಜಾನಪದ ಈ ನಾಡಿನ ಬೇರು. ಜೀವನ ಪದ್ದತಿಯೊಂದಿಗೆ ಜಾನಪದ ಬೆಸೆದುಕೊಂಡಿದೆ ಎಂದರು. ಉದ್ಯಮಿ ಜಯಂತಿ ಶೆಟ್ಟಿ ಮಾತನಾಡಿ, ಜಾನಪದ ಕಲೆಯನ್ನು ವಿಸ್ತರಿಸುವ ಕೆಲಸ ಆಗಬೇಕು ಎಂದರು.
ಪರಿಷತ್ ಪ್ರಧಾನ ಕಾರ್ಯದರ್ಶಿ ಮುನೀರ್ ಅಹ್ಮದ್ ಪ್ರಾಸ್ತಾವಿಕವಾಗಿ ಮಾತನಾಡಿ, ಕೊಡಗು ಜಿಲ್ಲಾ ಜಾನಪದ ಪರಿಷತ್ ಕಳೆದ ೭ ವರ್ಷಗಳಿಂದ ಜಿಲ್ಲೆಯಲ್ಲಿ ಜಾನಪದದ ಉಳಿವು, ಜಾಗೃತಿಗೆ ಶ್ರಮಿಸುತ್ತಿದೆ. ಪರಿಷತ್ಗೆ ಸ್ವಂತ ನಿವೇಶನ ಪಡೆಯುವ ನಿಟ್ಟಿನಲ್ಲಿ ಪ್ರಯತ್ನ ಸಾಗಿದ್ದು, ಈ ಬಗ್ಗೆ ಶಾಸಕರುಗಳು ಗಮನ ಹರಿಸಬೇಕೆಂದು ಮನವಿ ಮಾಡಿದರು.
ವೇದಿಕೆಯಲ್ಲಿ ನಗರ ಸಭೆ ಅಧ್ಯಕ್ಷೆ ದಸರಾ ಸಮಿತಿ ಅಧ್ಯಕ್ಷೆ ಪಿ. ಕಲಾವತಿ, ಜಿಲ್ಲಾಧಿಕಾರಿಗಳ ಕಾನೂನು ಸಲಹೆಗಾರ ಲೋಕೇಶ್ ಕುಮಾರ್, ಉದ್ಯಮಿ ಮೋಹನ್, ಪದ್ಮಶ್ರೀ ರಾಣಿ ಮಾಚಯ್ಯ, ಉದ್ಯಮಿ ಶರಣ್ ಪೂಣಚ್ಚ, ನಗರ ಸಭೆ ಉಪಾಧ್ಯಕ್ಷ ಮಹೇಶ್ ಜೈನಿ, ದಸರಾ ಸಮಿತಿ ಪ್ರಧಾನ ಕಾರ್ಯದರ್ಶಿ ಅರುಣ್ ಶೆಟ್ಟಿ, ಕಾರ್ಯಾಧ್ಯಕ್ಷ ಅರುಣ್ಕುಮಾರ್, ಖಜಾಂಚಿ ಸಬಿತಾ, ಸಮಾಜ ಸೇವಕ ಎಡಿಕೇರಿ ಪ್ರಸನ್ನ, ಪರಿಷತ್ನ ಜಿಲ್ಲಾ ಕಾರ್ಯದರ್ಶಿ ಉಜ್ವಲ್ ರಂಜಿತ್, ಕುಶಾಲನಗರ ತಾಲೂಕು ಘಟಕದ ಅಧ್ಯಕ್ಷ ಎಂ.ಎನ್. ಚಂದ್ರಮೋಹನ್, ಶನಿವಾರಸಂತೆ ಹೋಬಳಿ ಅಧ್ಯಕ್ಷೆ ಸುಜಲಾದೇವಿ, ಮೂರ್ನಾಡು ಘಟಕದ ಅಧ್ಯಕ್ಷ ಎಸ್.ಡಿ. ಪ್ರಶಾಂತ್, ಸೋಮವಾರಪೇಟೆ ತಾಲೂಕು ಅಧ್ಯಕ್ಷ ಕೆ.ಎ. ಪ್ರಕಾಶ್, ವೀರಾಜಪೇಟೆ ಘಟಕದ ಅಧ್ಯಕ್ಷ ಟೋಮಿ ಥಾಮಸ್, ಪರಿಷತ್ನ ಜಿಲ್ಲಾ ಉಪಾಧ್ಯಕ್ಷ ಅಂಬೇಕಲ್ ಕುಶಾಲಪ್ಪ ಸೇರಿದಂತೆ ಇತರರು ಉಪಸ್ಥಿತರಿದ್ದರು.
ಪ್ರೇಮಾ ರಾಘವಯ್ಯ ತಂಡದಿAದ ನಾಡ ಗೀತೆ, ಕೊಡಗು ಗೌಡ ಮಹಿಳಾ ಒಕ್ಕೂಟದ ಸದಸ್ಯರಿಂದ ಪ್ರಾರ್ಥನಾ ಗೀತೆ ಮೂಡಿಬಂತು. ಜಾನಪದ ದಸರಾ ಸಂಚಾಲಕ ಹೆಚ್.ಟಿ.ಅನಿಲ್ ಸ್ವಾಗತಿಸಿ, ಜಾನಪದ ಪರಿಷತ್ ಖಜಾಂಚಿ ಸಂಪತ್ ಕುಮಾರ್ ವಂದಿಸಿದರು. ಪರಿಷತ್ನ ಸದಸ್ಯರಾದ ಜಯಲಕ್ಷಿö್ಮÃ, ರಂಜಿತ್ ಕವಲಪಾರ ಕಾರ್ಯಕ್ರಮ ನಿರೂಪಿಸಿದರು.
- ವಿಜಯ್ ಹಾನಗಲ್, ಚಿತ್ರ: ಲಕ್ಷಿö್ಮÃಶ್