ಮಡಿಕೇರಿ, ಅ. ೧೮: ಮಡಿಕೇರಿ ನಗರ ದಸರಾ ಕ್ರೀಡಾ ಸಮಿತಿ ವತಿ ಯಿಂದ ನಗರದ ರಾಜದರ್ಶನ್ ಹೊಟೇಲ್ ಸಭಾಂಗಣ ದಲ್ಲಿ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಾರ್ವಜನಿಕ ಕೇರಂ ಸ್ಪರ್ಧೆಯಲ್ಲಿ ಜಿಲ್ಲೆಯ ವಿವಿಧೆಡೆಯಿಂದ ಸ್ಪರ್ಧಾರ್ಥಿಗಳು ಭಾಗವಹಿಸಿದ್ದರು. ಸಾರ್ವಜನಿಕ ಡಬಲ್ಸ್ ವಿಭಾಗದಲ್ಲಿ ಪ್ರಥಮ ಸ್ಥಾನವನ್ನು ಸೋಮವಾರಪೇಟೆಯ ಅಜರ್ ಹಾಗೂ ರಿಯಾಜ್ ಜೋಡಿ ಪಡೆದುಕೊಂಡರೆ, ದ್ವಿತೀಯ ಬಹುಮಾನವನ್ನು ಮಡಿಕೇರಿಯ ಗಗನ್ ಹಾಗೂ ಲಿನೇಶ್ ಪಡೆದುಕೊಂಡರು.