ನಾಪೋಕ್ಲು, ಅ. ೧೭: ಕಾವೇರಿ ತೀರದ ಪವಿತ್ರ ಯಾತ್ರಾ ಸ್ಥಳವಾದ ಬಲಮುರಿಯಲ್ಲಿ ವಾರ್ಷಿಕ ಕಾವೇರಿ ಸಂಕ್ರಮಣ ಜಾತ್ರಾ ಮಹೋತ್ಸವ ತಾ.೧೮ ರಂದು (ಇಂದು) ಜರುಗಲಿದ್ದು, ಭಕ್ತರಿಗಾಗಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಲಾಗಿದೆ.

ತುಲಾ ಸಂಕ್ರಮಣದ ಸಂದರ್ಭದಲ್ಲಿ ಕಾವೇರಿಯ ಉಗಮ ಸ್ಥಾನವಾದ ತಲಕಾವೇರಿಗೆ ತೆರಳಲು ಸಾಧ್ಯವಾಗದ ಅಸಂಖ್ಯಾತ ಭಕ್ತರು ಬಲಮುರಿಗೆ ಆಗಮಿಸಿ, ಕಾವೇರಿ ತೀರ್ಥಸ್ನಾನ ಮಾಡಿ ಪುನೀತರಾಗಲಿದ್ದಾರೆ. ಪ್ರತಿವರ್ಷ ಕಾವೇರಿ ತೀರ್ಥೋದ್ಭವದ ಮರು ದಿನ ಇಲ್ಲಿ ಜಾತ್ರೆ ನಡೆಯುವುದು ವಾಡಿಕೆಯಾಗಿದೆ. ಜಾತ್ರೆಯ ಅಂಗವಾಗಿ ಬೆಳಗ್ಗಿನಿಂದಲೇ ಬಲಮುರಿಯ ಪ್ರಸಿದ್ಧ ಅಗಸ್ತ್ಯೇಶ್ವರ (ಮಾಧುರಪ್ಪ) ದೇವಾಲಯ ಹಾಗೂ ಕಣ್ವ ಮುನೀಶ್ವರ ದೇವಾಲಯಗಳಲ್ಲಿ ವಿಶೇಷ ಪೂಜೆ ಹಾಗೂ ಧಾರ್ಮಿಕ ಕೈಂಕರ್ಯಗಳು ಜರುಗಲಿವೆ.

ಪ್ರಾತಃಕಾಲ ತೀರ್ಥಸ್ನಾನ, ವಿವಿಧ ಧಾರ್ಮಿಕ ಕಾರ್ಯ, ಅಗಸ್ತೆö್ಯÃಶ್ವರನಿಗೆ ಹಣ್ಣು ಕಾಯಿ ಪೂಜೆ ಹಾಗೂ ತೀರ್ಥಪ್ರಸಾದ, ೧೧.೩೦ ಗಂಟೆಗೆ ಕಾವೇರಿ ಪುರಾಣ ಬಾಳೊಪಾಟ್, ಮಧ್ಯಾಹ್ನ ೧೨ ಗಂಟೆಗೆ ಕಾವೇರಿ ಮಹಾ ಆರತಿ, ೧೨.೩೦ ಗಂಟೆಗೆ ಅಗಸ್ತೆö್ಯÃಶ್ವ (ಮಾಧುರಪ್ಪ) ನಿಗೆ ಮಹಾಪೂಜೆ. ಮಧ್ಯಾಹ್ನ ೧ ಗಂಟೆಗೆ ಅನ್ನ ಸಂತರ್ಪಣೆ ಜರುಗಲಿದೆ.

- ದುಗ್ಗಳ