ಸುಂಟಿಕೊಪ್ಪ, ಅ. ೧೭: ಕಾರು ಅವಘಡದಲ್ಲಿ ಇಬ್ಬರು ಮೃತಪಟ್ಟ ಘಟನೆ ನಡೆದಿದೆ, ಸುಂಟಿಕೊಪ್ಪ ಕುಶಾಲನಗರ ರಾಷ್ಟಿçÃಯ ಹೆದ್ದಾರಿಯ ೭ನೇ ಹೊಸಕೋಟೆಯ ಮಾರುತಿ ನಗರದ ಬಳಿ ಶುಕ್ರವಾರ ತಡರಾತ್ರಿ ಮರ ಹಾಗೂ ವಿದ್ಯುತ್ ಕಂಬಕ್ಕೆ ಕಾರೊಂದು ಡಿಕ್ಕಿಯಾದ ಪರಿಣಾಮ ದುರ್ಘಟನೆ ಸಂಭವಿಸಿದೆ.
ಚಿತ್ರದುರ್ಗ ಜಿಲ್ಲೆಯ ಹಿರಿಯೂರುವಿನ ೫ ಮಂದಿ ಕಾರಿನಲ್ಲಿ (ಏಂ ೦೫ ಒ ೬೪೦೯) ಮಂಗಳೂರಿಗೆ ತೆರಳಿ ಅಲ್ಲಿಂದ ಮೈಸೂರು ಕಡೆಗೆ ತೆರಳುತ್ತಿದ್ದ ವೇಳೆ, ಒಟ್ಟು ೫ ಮಂದಿ ಪ್ರಯಾಣಿಕರಿದ್ದ ಕಾರು ಚಾಲಕನ ನಿಯಂತ್ರಣ ಕಳೆದುಕೊಂಡು ರಸ್ತೆ ಬದಿಯ ಮರಕ್ಕೆ ಡಿಕ್ಕಿ ಹೊಡೆದು ನಂತರ ವಿದ್ಯುತ್ ಕಂಬಕ್ಕೆ ಅಪ್ಪಳಿಸಿದೆ. ಡಿಕ್ಕಿಯ ರಭಸಕ್ಕೆ ತಿಮ್ಮನಾಯ್ಕ (೩೦) ಹಾಗೂ ಪ್ರದೀಪ (೨೦) ಎಂಬುವರುಗಳು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ, ಉಳಿದ ೩ ಮಂದಿಗೆ ಗಂಭೀರ ಗಾಂiÀiಗಳಾಗಿದ್ದು ಜಿಲ್ಲಾಸ್ಪತ್ರೆಗೆ ದಾಖಲು ಮಾಡಲಾಗಿದೆ.
ಸುಂಟಿಕೊಪ್ಪ ಪೊಲೀಸರು ಸ್ಥಳಕ್ಕೆ ತೆರಳಿ ಮಹಜರು ನಡೆಸಿದ್ದು ಮೃತಪಟ್ಟವರ ಶವವನ್ನು ಮಡಿಕೇರಿಯ ಜಿಲ್ಲಾಸ್ಪತ್ರೆಗೆ ರವಾನಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.