ಮಡಿಕೇರಿ, ಅ. ೧೭: ಗಾಂಧಿ ಮೈದಾನದ ಕಲಾಸಂಭ್ರಮ ಸಭಾಂಗಣದಲ್ಲಿ ಕಿಕ್ಕಿರಿದು ನೆರೆದಿದ್ದ ಪ್ರೇಕ್ಷಕರನ್ನು, ಮಕ್ಕಳನ್ನು ನಗೆÀಗಡಲಲ್ಲಿ ತೇಲಿಸುವಂತೆ ಮಾಡಿದ್ದು ಆ ಒಂದು ಗೊಂಬೆ., ಮಾತನಾಡುತ್ತಲೇ ಹಾಸ್ಯ ಚಟಾಕಿಗಳೊಂದಿಗೆ ಗೊಂಬೆ ಜನರ ಮನ ಸೆಳೆಯಿತು. ಜೊತೆಗೆ ಪುಟಾಣಿಗಳಿಂದ ಹಿಡಿದು ಮಕ್ಕಳು ಹಾಡುಗಳಿಗೆ ಹೆಜ್ಜೆ ಹಾಕಿ ಸಂಭ್ರಮಿಸಿದರು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಮಡಿಕೇರಿ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ಮಡಿಕೇರಿ ದಸರಾ ಜನೋತ್ಸವ ಅಂಗವಾಗಿ ತಾ. ೧೬ ರಂದು ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಮೈಸೂರಿನ ಕಲಾವಿದೆ ಸುಮಾ ರಾಜ್‌ಕುಮಾರ್ ನಡೆಸಿಕೊಟ್ಟ ಮಾತನಾಡುವ ಗೊಂಬೆ ಹಾಗೂ ಜಾದೂ ಪ್ರದರ್ಶನ ಪ್ರೇಕ್ಷಕರಿಗೆ ಮನರಂಜನೆ ನೀಡಿತು. ಹಾಸ್ಯಮಯವಾಗಿದ್ದ ಕಾರ್ಯಕ್ರಮಕ್ಕೆ ಪ್ರೇಕ್ಷಕರು ಚಪ್ಪಾಳೆಯ ಮೂಲಕ ಅಭಿನಂದಿಸಿದರು.

ಇದರೊAದಿಗೆ ಪೊನ್ನಂಪೇಟೆಯ ನಾಟ್ಯ ಸಂಕಲ್ಪ ನೃತ್ಯ ಕಲಾ ಶಾಲೆ ತಂಡದಿAದ ನೃತ್ಯ ವೈವಿಧ್ಯ, ಟೀಂ ಎಸ್.ಕೆ.ವೈ.ಸಿ. ತಂಡದಿAದ ನೃತ್ಯ, ಕೂರ್ಗ್ ಟೆಕ್ವಾಂಡೋ ತಂಡದಿAದ ಕರಾಟೆ ನೃತ್ಯ ಸೇರಿದಂತೆ ಮಕ್ಕಳಿಂದ ವೈವಿಧ್ಯಮಯ ಕಾರ್ಯಕ್ರಮಗಳು ಮೂಡಿಬಂದವು.