ಕುಶಾಲನಗರ, ಅ. ೧೬: ಕುಶಾಲನಗರ ಪುರಸಭಾ ವ್ಯಾಪ್ತಿಯಲ್ಲಿ ವಿವಿಧೆಡೆ ಅಳವಡಿಸಿರುವ ಸ್ವಾಗತ ಕಮಾನು ಫಲಕಗಳನ್ನು ಶಾಸಕ ಡಾ.ಮಂತರ್ ಗೌಡ ಉದ್ಘಾಟಿಸಿದರು. ಮಾದಾಪಟ್ಟಣದ ಸರಕಾರಿ ಇಂಜಿನಿಯರಿAಗ್ ಕಾಲೇಜು ಮುಂಭಾಗ ನಡೆದ ಕಾರ್ಯಕ್ರಮದಲ್ಲಿ ಎಲ್ಲಾ ಸ್ವಾಗತ ಕಮಾನುಗಳನ್ನು ಸಾಂಕೇತಿಕವಾಗಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪುರಸಭೆ ಮೂಲಕ ರೂ ೨೧ ಲಕ್ಷ ವೆಚ್ಚದಲ್ಲಿ ಗಡಿ ಭಾಗಗಳಲ್ಲಿ ೪ ಬೋರ್ಡ್ಗಳನ್ನು ಅಳವಡಿಸಲಾಗಿದೆ. ನೆರೆಯ ಮೈಸೂರು, ಹಾಸನ ಜಿಲ್ಲೆಗಳಿಂದ ಕಾವೇರಿ ತವರೂರಿಗೆ ಬರುವ ಮತ್ತು ತೆರಳುವ ಮಂದಿಗೆ ಈ ಸ್ವಾಗತ ಬೋರ್ಡ್ಗಳ ಅಳವಡಿಕೆಯಿಂದ ಅನುಕೂಲ ಉಂಟಾಗಲಿದೆ ಎಂದು ತಿಳಿಸಿದರು.
ಪುತ್ತೂರಿನಿಂದ ಮೈಸೂರಿಗೆ ತೆರಳುವ ಕಂಬಳದ ಕೋಣಗಳ ವೀಕ್ಷಣೆಗೆ ಕುಶಾಲನಗರದಲ್ಲಿ ಅವಕಾಶ ಕಲ್ಪಿಸಿದ್ದು ಹೆಚ್ಚಿನ ಮಂದಿ ಆಗಮಿಸುವಂತೆ ಅವರು ಮನವಿ ಮಾಡಿದರು.
ಜಿಪಂ, ತಾಪಂ ಮೀಸಲಾತಿ ಸಂಬAಧ ಉಂಟಾಗಿ ರುವ ಅಸಮಧಾನದ ಬಗ್ಗೆ ಪ್ರಶ್ನೆಗೆ ಉತ್ತರಿಸಿದ ಅವರು, ಮೀಸಲಾತಿ ನಿಗದಿ, ಬದಲಾವಣೆ ನಮ್ಮ ಕೈಯಲ್ಲಿಲ್ಲ. ಪುರುಷರಷ್ಟೆ ಮಹಿಳೆಯರಿಗೂ ಸ್ಪರ್ಧಿಸಲು ಸಮಾನ ಅವಕಾಶ ಲಭಿಸಿದೆ. ಮಹಿಳಾ ಮತದಾರರು ಸಾಕಷ್ಟಿದ್ದಾರೆ. ಮೀಸಲಾತಿ ವಿಚಾರಕ್ಕೆ ಸಂಬAಧಿಸಿದAತೆ ಆಕ್ಷೇಪಣೆ ಸಲ್ಲಿಸಲು ಅವಕಾಶ ಇದೆ. ಅಧಿಕಾರಿಗಳು ರೊಟೇಷನ್ ಪ್ರಕಾರ ಏನು ಬಂದಿದೆ ಎಂದು ನೋಡಿಕೊಂಡು ಕಾನೂನಾತ್ಮಕವಾಗಿ ಪರಿಶೀಲನೆ ನಡೆಸಬೇಕು. ಎಲ್ಲರನ್ನೂ ಖುಷಿ ಪಡಿಸುವುದು ಈ ವಿಚಾರದಲ್ಲಿ ಕಷ್ಟ. ಆಕ್ಷೇಪಣೆ ಸಲ್ಲಿಸಿದ ನಂತರ ಅಧಿಕಾರಿಗಳು ಪರಿಶೀಲನೆ ನಡೆಸಲಿದ್ದಾರೆ ಎಂದರು. ನೂತನ ಬೋರ್ಡ್ಗಳು ಮೂಲೆಗುಂಪಾಗದAತೆ ಹಾಗೂ ಅಗತ್ಯ ಸ್ವಚ್ಚತೆ ಕಾಪಾಡಿಕೊಳ್ಳುವಂತೆ ಅವರು ಮುಖ್ಯಾಧಿಕಾರಿಗೆ ಸಲಹೆ ನೀಡಿದರು.
ಈ ಸಂದರ್ಭ ಕುಡಾ ಅಧ್ಯಕ್ಷ ಪ್ರಮೋದ್ ಮುತ್ತಪ್ಪ, ಮಾಜಿ ಅಧ್ಯಕ್ಷ ಮಂಜುನಾಥ್ ಗುಂಡುರಾವ್, ನಗರ ಕಾಂಗ್ರೆಸ್ ಅಧ್ಯಕ್ಷ ಜೋಸೆಫ್ ವಿಕ್ಟರ್ ಸೋನ್ಸ್, ಜಿಪಂ ಮಾಜಿ ಅಧ್ಯಕ್ಷೆ ಕೆ.ಪಿ. ಚಂದ್ರಕಲಾ, ಮುಖ್ಯಾಧಿಕಾರಿ ಗಿರೀಶ್ ಸೇರಿದಂತೆ ಮಾಜಿ ಜನಪ್ರತಿನಿಧಿಗಳು, ಪಕ್ಷದ ಪ್ರಮುಖರು ಇದ್ದರು.