ಭಾಗಮಂಡಲ, ಅ. ೧೬: ಕಾವೇರಿ ತೀರ್ಥೋದ್ಭವ ಹಿನ್ನೆಲೆಯಲ್ಲಿ ಕಾವೇರಿ ಮಾತೆಗೆ ತೊಡಿಸಲು ಚಿನ್ನಾಭರಣಗಳನ್ನು ಭಾಗಮಂಡಲ ದೇವಾಲಯದಿಂದ ಶುಕ್ರವಾರ ಮೆರವಣಿಗೆಯಲ್ಲಿ ಕೊಂಡೊಯ್ಯಲಾಯಿತು.
ಭಾಗಮAಡಲದ ಭಗಂಡೇಶ್ವರ ದೇವಾಲಯದಲ್ಲಿ ಕಾರ್ಯನಿರ್ವಹಣಾಧಿಕಾರಿ ಚಂದ್ರಶೇಖರ್ ಮತ್ತು ಪಾರುಪತ್ತೆಗಾರ ಪೊನ್ನಣ್ಣ ಅವರಿಂದ ತಕ್ಕರಾದ ಕೋಡಿ ಮೋಟಯ್ಯ ಕಾವೇರಿ ಮಾತೆಗೆ ತೊಡಿಸುವ ಚಿನ್ನಾಭರಣಗಳನ್ನು ಪಡೆದುಕೊಂಡರು. ಬಳಿಕ ದೇವಾಲಯದಲ್ಲಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಬಳಿಕ ತಲಕಾವೇರಿಗೆ ಕೊಂಡೊಯ್ಯಲಾಯಿತು. ಅಲ್ಲಿ ಕಾವೇರಿ ಮಾತೆಗೆ ಚಿನ್ನಾಭರಣ ತೊಡಿಸಲಾಯಿತು. ಒಂದು ತಿಂಗಳ ಕಾಲ ಚಿನ್ನಾಭರಣಗಳಿಂದ ಕಾವೇರಿ ಮಾತೆ ಕಂಗೊಳಿಸುವಳು.
ಈ ಸಂದರ್ಭ ಬಳ್ಳಡ್ಕ ಕುಟುಂಬಸ್ಥರು, ಸ್ಥಳೀಯರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಮೆರವಣಿಗೆಗೆ ವಿಶೇಷ ಮೆರುಗು ತಂದರು.
ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ, ಶಾಸಕ ಎ.ಎಸ್. ಪೊನ್ನಣ್ಣ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಬಾನಂಡ ಪ್ರಥ್ಯು, ಸದಸ್ಯರಾದ ಚೋಡುಮಡ ಎ ಅಯ್ಯಣ್ಣ, ಕೆದಂಬಾಡಿ ಕಾಂಚನ, ದೇವಂಗೋಡಿ ಎನ್ ಹರ್ಷ, ಕೆ.ಎ. ತಿಮ್ಮಯ್ಯ, ಕೆದಂಬಾಡಿ ಜಿ ರಘುನಾಥ್, ಎಂ.ಸಿ, ಲಕ್ಷö್ಮಣ, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ಆನಂದ್ ಕರಂದ್ಲಾಜೆ, ಕುಶಾಲನಗರ ಗೌಡ ಒಕ್ಕೂಟದ ಅಧ್ಯಕ್ಷ ಚಿಲ್ಲನ ಗಣಿ ಪ್ರಸಾದ್, ಭಾಗಮಂಡಲ ನಾಡು ಯುವ ಒಕ್ಕೂಟದ ಅಧ್ಯಕ್ಷ ಕುದುಕುಳಿ ಕಿಶೋರ್, ಕೊಡಗು ಗೌಡ ಯುವ ಒಕ್ಕೂಟದ ಅಧ್ಯಕ್ಷ ಬಾಳಾಡಿ ಮನೋಜ್, ಕೊಡಗು ದಕ್ಷಿಣ ಕನ್ನಡ ಮಹಿಳಾ ಒಕ್ಕೂಟದ ಅಧ್ಯಕ್ಷೆ ಮೂಟೆರ ಪುಷ್ಪಾವತಿ, ಮಕ್ಕಂದೂರು ಗೌಡ ಸಮಾಜದ ಅಧ್ಯಕ್ಷ ಲಕ್ಕಪ್ಪನ ಹರೀಶ್, ಕರಿಕೆ ಗೌಡ ಸಮಾಜದ ಅಧ್ಯಕ್ಷ ಕೋಡಿ ಪೊನ್ನಪ್ಪ, ಸುಂಟಿಕೊಪ್ಪ ಗೌಡ ಸಮಾಜದ ಅಧ್ಯಕ್ಷ ಕುಂಜಿಲನ ಮಂಜುನಾಥ್ ಪಾಲ್ಗೊಂಡಿದ್ದರು