ಮಡಿಕೇರಿ, ಅ. ೧೬: ತಾ. ೧೭ ರಂದು (ಇಂದು) ಘಟಿಸಲಿರುವ ತೀರ್ಥೋದ್ಭವ ಸಂಬAಧ ಪೊಲೀಸ್ ಇಲಾಖೆಯಿಂದ ಅಗತ್ಯ ಕ್ರಮವಹಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿಂದುಮಣಿ ತಿಳಿಸಿದ್ದಾರೆ.

ಭಕ್ತಾದಿಗಳ ನಿಯಂತ್ರಣಕ್ಕೆ ಕುಂಡಿಕೆಯ ಮುಂಭಾಗದಲ್ಲಿ ತಾತ್ಕಾಲಿಕ ಬ್ಯಾರಿಕೇಡ್ ವ್ಯವಸ್ಥೆ ಮಾಡಲಾಗಿದೆ. ತಲಕಾವೇರಿ ತೀರ್ಥೋದ್ಭವಕ್ಕೆ ಆಗಮಿಸುವ ಭಕ್ತಾದಿಗಳ ವಾಹನ ನಿಲುಗಡೆಗೆ ತಲಕಾವೇರಿಯಲ್ಲಿ ಒಟ್ಟು ೪ ಕಡೆ ವ್ಯವಸ್ಥೆ ಕಲ್ಪಿಸಲಾಗಿದೆ.

ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣ, ತಲಕಾವೇರಿ (ದ್ವಿಚಕ್ರ ವಾಹನ), ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣ ಮೇಲ್ಬಾಗ ಲಘು ವಾಹನಗಳ ನಿಲುಗಡೆ, ಕೆ.ಎಸ್.ಆರ್.ಟಿ.ಸಿ ಬಸ್ಸು ನಿಲ್ದಾಣದ ಮುಂಭಾಗದ ಮೈದಾನದಲ್ಲಿ ಟಿ.ಟಿ.ವಾಹನಗಳ ನಿಲುಗಡೆ, ನಾರಾಯಣಾಚಾರ್ ಮನೆಗೆ ಹೋಗುವ ಮೈದಾನದಲ್ಲಿ ವಾಹನ ನಿಲುಗಡೆಗೆ ವ್ಯವಸ್ಥೆ ಮಾಡಲಾಗಿದೆ.

ತಲಕಾವೇರಿಯಲ್ಲಿ ಪಾರ್ಕಿಂಗ್ ಸ್ಥಳಗಳು ಭರ್ತಿ ಆದ ನಂತರ ಭಾಗಮಂಡಲದ ಪ್ರಾಥಮಿಕ ಶಾಲಾ ಮೈದಾನದಲ್ಲಿ ವಾಹನಗಳನ್ನು ಪಾರ್ಕಿಂಗ್ ಮಾಡಿ ಮಾರುಕಟ್ಟೆ ಜಂಕ್ಷನ್‌ನಿAದ ಬಸ್ಸಿನಲ್ಲಿ ತಲಕಾವೇರಿಗೆ ತೆರಳುವುದು.

ತಲಕಾವೇರಿ ತೀರ್ಥೋದ್ಭವಕ್ಕೆ ಆಗಮಿಸುವ ಭಕ್ತಾದಿಗಳ ವಾಹನ ನಿಲುಗಡೆಗೆ ಭಾಗಮಂಡಲದ ಚಾಮುಂಡಿಕಳದಲ್ಲಿ ವಾಹನಗಳ ಪಾರ್ಕಿಂಗ್ ವ್ಯವಸ್ಥೆ ಇದ್ದು ಅಲ್ಲಿ ವಾಹನ ಪಾರ್ಕಿಂಗ್ ಮಾಡಿ ಬಸ್ಸಿನಲ್ಲಿ ತಲಕಾವೇರಿಗೆ ತೆರಳುವ ವ್ಯವಸ್ಥೆ ಮಾಡಲಾಗಿದೆ.

ಭಾಗಮಂಡಲದಲ್ಲಿ ವಾಹನ ನಿಲುಗಡೆ ಭರ್ತಿ ಆದ ನಂತರ ತಾವೂರು ಕಾವೇರಿ ಕಾಲೇಜು ಮೈದಾನದಲ್ಲಿ ಪಾರ್ಕಿಂಗ್ ವ್ಯವಸ್ಥೆ ಮಾಡಲಾಗಿದೆ. ತುರ್ತು ಚಿಕಿತ್ಸೆಗಾಗಿ ತಲಕಾವೇರಿ ಉಪ ಠಾಣೆಯ ಬಳಿ ಹಾಗೂ ಭಾಗಮಂಡಲದ ಸಂಗಮದ ಬಳಿ ತಲಾ ಒಂದೊAದು ಆ್ಯಂಬುಲೆನ್ ವಾಹನದ ವ್ಯವಸ್ಥೆ ಮಾಡಲಾಗಿದೆ, ತುರ್ತು ಚಿಕಿತ್ಸೆಗಾಗಿ ತಲಕಾವೇರಿ ಉಪ ಠಾಣೆಯ ಬಳಿ ಹಾಗೂ ಭಾಗಮಂಡಲದ ಸಂಗಮದ ಬಳಿ ತಲಾ ಒಂದೊAದು ಆ್ಯಂಬುಲೆನ್ಸ್ ವಾಹನದ ವ್ಯವಸ್ಥೆ ಮಾಡಲಾಗಿದೆ. ಸಾರ್ವಜನಿಕರ ಸುರಕ್ಷತೆಯ ದೃಷ್ಟಿಯಿಂದ ಒಟ್ಟು ೬೧ ಸಿ.ಸಿ ಕ್ಯಾಮರಾ ಅಳವಡಿಸಲಾಗಿದೆ.

ಸಾರ್ವಜನಿಕರ ಅನುಕೂಲತೆಯ ದೃಷ್ಟಿಯಿಂದ ತಲಕಾವೇರಿ ಪ್ರಸಾದ ಕೌಂಟರ್ ಬಳಿ, ತಲಕಾವೇರಿ ಕೆಎಸ್‌ಆರ್‌ಟಿಸಿ ಬಸ್ ನಿಲ್ದಾಣದ ಬಳಿ, ಹನಿ ಡ್ಯೂ ಸ್ಪೆöÊಸಸ್ ಬಳಿ ಹಾಗೂ ಭಾಗಮಂಡಲದ ಸಂಗಮದಲ್ಲಿ ಸಹಾಯವಾಣಿ ಕೇಂದ್ರ ತೆರೆಯಲಾಗಿದೆ. ತಲಕಾವೇರಿಗೆ ತೆರಳುವ ರಸ್ತೆ ಮಾರ್ಗದಲ್ಲಿ ಭಕ್ತಾದಿಗಳ ಅನುಕೂಲಕ್ಕೆ ಬೆಳಕಿನ ವ್ಯವಸ್ಥೆ ಮಾಡಲಾಗಿದೆ. ಪಾದಯಾತ್ರೆ ತೆರಳುವ ಭಕ್ತಾದಿಗಳ ಬಂದೋಬಸ್ತ್ ಕರ್ತವ್ಯಕ್ಕೆ ಅಧಿಕಾರಿ ಹಾಗೂ ಸಿಬ್ಬಂದಿಯವರನ್ನು ನಿಯೋಜಿಸಲಾಗಿದೆ.