ಮಡಿಕೇರಿ, ಅ. ೧೬: ಮಡಿಕೇರಿ ನಗರದಲ್ಲಿ ಪ್ರತಿ ವಾರ ನಡೆಯುವ ಶುಕ್ರವಾರದ ಸಂತೆ ಇಂದು ನಗರದ ಗಾಂಧಿ ಮೈದಾನಕ್ಕೆ ಸ್ಥಳಾಂತರವಾದAತಿತ್ತು. ಬೆಳಿಗ್ಗೆ ೬:೩೦ರಿಂದಲೇ ಮಕ್ಕಳ ದಸರಾ ಅಂಗವಾಗಿ ಮಕ್ಕಳಿಗೆ ನೀಡಲಾದ ವ್ಯಾಪಾರ ಸ್ಥಳದಲ್ಲಿ ತರಕಾರಿ, ತಿಂಡಿ-ತಿನಿಸ್ಸುಗಳೊAದಿಗೆ ಆಗಮಿಸಿದ ಪುಟಾಣಿಗಳು ವ್ಯಾಪಾರದಲ್ಲಿ ನಿರತರಾಗಿದ್ದರು. ಪಾನಿಪುರಿ, ಚುರ್ಮುರಿ, ಉಪ್ಪಿನಕಾಯಿ, ವಿವಿಧ ರೀತಿಯ ಸಿಹಿ ಉಂಡೆಗಳು, ‘ಅಮ್ಮ ಮಾಡಿದ ಕಾಯಿ ಹೋಳಿಗೆ’, ಚಾಕಲೆಟ್ ಮಾತ್ರವಲ್ಲದೆ ಐಸ್‌ಕ್ರೀಮ್ ಯಂತ್ರವನ್ನೇ ಮೈದಾನಕ್ಕಿಳಿಸಿ ಜನರೇಟರ್ ಮೂಲಕ ಅದಕ್ಕೆ ವಿದ್ಯುತ್ ಸಂಪರ್ಕ ಒದಗಿಸಿ ವ್ಯಾಪಾರ ಮಾಡುತ್ತಿದ್ದ ದೃಶ್ಯ ಕಂಡುಬAದಿತು.

ತರಕಾರಿ ಮಾರಾಟ ವಿಭಾಗದಲ್ಲಿ ನಾಡ್ ತರಕಾರಿ ಮಾರಾಟ ಗಮನ ಸೆಳೆಯಿತು. ಇದರೊಂದಿಗೆ ಗಿಡಗಳ ಮಾರಾಟ ಮಳಿಗೆಯನ್ನೂ ಮಕ್ಕಳು ಸ್ಥಾಪಿಸಿ ವ್ಯಾಪಾರ ನಡೆಸಿದರು.

ಮಕ್ಕಳ ದಸರಾ ವೇದಿಕೆಯಲ್ಲಿ ವಿವಿಧ ಧಾರ್ಮಿಕ ವೇಷಧಾರಿ ಪುಟಾಣಿಗಳು ಛದ್ಮವೇಷಧಾರಿಗಳಾಗಿ ಆಕರ್ಷಿಸಿದರೆ, ಕ್ಲೇ ಮಾಡಲಿಂಗ್‌ನಿAದ ಮೂಡಿ ಬಂದ ಕಲಾಕೃತಿಗಳು ಮಕ್ಕಳ ಪ್ರತಿಭೆಗೆ ಉತ್ತಮ ವೇದಿಕೆ ದೊರೆತಿರುವುದಕ್ಕೆ ಸಾಕ್ಷಿಯಾದವು. ಕೃಷ್ಣ, ರಾಮ, ಹನುಮ, ನರಸಿಂಹ, ಮಹಾಲಕ್ಷಿö್ಮÃ ಆದಿಯಾಗಿ ವಿವಿಧ ಧಾರ್ಮಿಕ ವೇಷಧಾರಿಗಳು ಛದ್ಮವೇಷ ಸ್ಪರ್ಧೆಗೆ ಮೆರುಗು ನೀಡಿದ್ದು, ಅಂಬೇಡ್ಕರ್ ಹಾಗೂ ಕಾಫಿ ಬೆಳೆಗಾರ ವೇಷಧಾರಿಗಳೂ ಗಮನ ಸೆಳೆದವು.

ಮಕ್ಕಳ ಮಂಟಪ ಪ್ರದರ್ಶನದಲ್ಲಿ ಭಾಗಿಯಾದ ಮಂಟಪಗಳು ಒಂದಕ್ಕೊAದು ಪೈಪೋಟಿ ನೀಡುತ್ತಾ ದಶಮಿಯಂದು ನಗರದಲ್ಲಿ ನಡೆಯುವ ಶೋಭಾಯಾತ್ರೆಯ ರೀತಿಯಲ್ಲಿ ರಾಕ್ಷಸ ಹಾಗೂ ದೇವಾನುದೇವತೆಗಳ ಕಲಾಕೃತಿಗಳ ಚಲನೆಯೊಂದಿಗೆ ಧ್ವನಿಸಹಿತವಾಗಿ ಪುರಾಣ ಕಥಾ ಸಾರಾಂಶವನ್ನು ಪ್ರಸ್ತುತ ಪಡಿಸಿದವು. ಮಕ್ಕಳಲ್ಲಿನ ಕಲೆ, ಶ್ರಮ, ಈ ಮಂಟಪಗಳಲ್ಲಿ ಪ್ರತಿಬಿಂಬಿತವಾದವು. ಶೋಭಾಯಾತ್ರೆ ವೀಕ್ಷಣೆಯಂತೆಯೇ ಜನರು ಮುಗಿಬಿದ್ದು ವೀಕ್ಷಿಸಲು ಕಾತುರ ವ್ಯಕ್ತಪಡಿಸಿದರು. ಶ್ರೀ ಕೋಟೆ ಮಹಾಗಣಪತಿ ದೇವಾಲಯದ ೫೦ನೇ ವರ್ಷದ ದಸರಾ ಅಂಗವಾಗಿ ಮಂಟಪಗಳಿಗೆ ಬಹುಮಾನವನ್ನು ದೇವಾಲಯದಿಂದ ಪ್ರಾಯೋಜಿಸಲಾಗಿತ್ತು.

೪ಐದನೇ ಪುಟಕ್ಕೆ

(ಮೊದಲ ಪುಟದಿಂದ) ೧೩ನೆ ವರ್ಷದ ಆಚರಣೆ-ರೋಟರಿ ಮಿಸ್ಟಿ ಹಿಲ್ಸ್ ಆಯೋಜನೆ

ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿತ ೧೩ನೇ ವರ್ಷದ ಮಕ್ಕಳ ದಸರಾವನ್ನು ಜಿಲ್ಲಾಧಿಕಾರಿ ಎಸ್.ಜೆ ಸೋಮಶೇಖರ್ ಅವರು ಛದ್ಮವೇಷಧಾರಿ ಮಕ್ಕಳ ಸಮ್ಮುಖದಲ್ಲಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪ್ರತ್ಯೇಕವಾಗಿ ಮಕ್ಕಳಿಗೆ ಸಂತೆ ಆಯೋಜಿಸಿರುವುದು ಉತ್ತಮ ಕಾರ್ಯ ಎಂದು ಶ್ಲಾಘಿಸಿದರು. ನವೆಂಬರ್ ತಿಂಗಳಲ್ಲಿ ಮಕ್ಕಳಿಗೆ ಜಿಲ್ಲೆಯಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚಾ ಸ್ಪರ್ಧೆ, ಯುವ ಸಂಸತ್ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಜಿಲ್ಲೆಯ ವಿವಿಧ ಸಮಸ್ಯೆಗಳ ಕುರಿತು ಚರ್ಚಾಗೋಷ್ಠಿ ನಡೆಯಲಿದೆ. ಮಕ್ಕಳು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಅವರು ಕರೆ ನೀಡಿದರು.

ರೋಟರಿ ಜಿಲ್ಲೆ-೩೧೮೧ ಗವರ್ನರ್ ಸತೀಶ್ ಬೊಳ್ಳಾರ್ ಮಾತನಾಡಿ, ರೋಟರಿಯು ವಿವಿಧ ಜಿಲ್ಲೆಗಳಲ್ಲಿ ನವರಾತ್ರಿ ಅಂಗವಾಗಿ ಅನ್ನದಾನ, ಪರಿಸರಕ್ಕೆ ಸಂಬAಧಿಸಿದ ಕಾರ್ಯಕ್ರಮಗಳು, ಹಿರಿಯ ನಾಗರಿಕರಿಗೆ ಗೌರವ ಇತ್ಯಾದಿ ಸೇವಾ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಇಂದಿನ ದಸರಾದಲ್ಲಿ ವಿಭಿನ್ನ ರೀತಿಯ ವೇಷಧಾರಿಗಳು, ಧಾರ್ಮಿಕ ವೇಷಗಳು ಸೇರಿದಂತೆ ಕಾಫಿ ಪ್ಲಾಂಟರ್‌ಅನ್ನು ಪ್ರತಿನಿಧಿಸುವ ವೇಷಧಾರಿ ಇರುವುದೂ ಶ್ಲಾಘನೀಯ ಎಂದ ಅವರು, ಹಿರಿಯರನ್ನು ಗೌರವಿಸುವಂತೆ ಮಕ್ಕಳಿಗೆ ಕರೆ ನೀಡಿದರು.

ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರಾಜೇಶ್ ಪಿ.ಆರ್ ಅವರು ಮಾತನಾಡಿ, ೧೩ನೇ ವರ್ಷ ಮಕ್ಕಳ ದಸರಾ ಆಯೋಜನೆಗೊಂಡಿರುವುದು ಹೆಮ್ಮೆಯ ವಿಚಾರ. ಮಕ್ಕಳ ಪ್ರತಿಭೆಗೆ ಮಕ್ಕಳ ದಸರಾ ವೇದಿಕೆಯಾಗಿದೆ. ಗೆಲವುಗಿಂತ ಭಾಗವಹಿಸುವಿಕೆ ಮುಖ್ಯ ಎಂದು ಭಾವಿಸಿ ಮಕ್ಕಳು ಎಲ್ಲ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಸಲಹೆ ನೀಡಿದರು.

ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಡಾ.ಚೇತನ್ ಜಿ.ಡಿ ಮಾತನಾಡಿ, ಮಕ್ಕಳ ದಸರಾಗೆ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಭವಿಷ್ಯದಲ್ಲಿಯೂ ಇದೇ ರೀತಿ ಮುಂದುವರಿಯಲಿ ಎಂದು ಆಶಿಸಿದರು.

ರೋಟರಿ ಜಿಲ್ಲಾ ೩೧೮೧ ಸಹಾಯಕ ಗವರ್ನರ್ ಹೆಚ್.ಎಸ್ ವಸಂತಕುಮಾರ್, ವಲಯ ಸೇನಾನಿ ಪೊನ್ನಚ್ಚನ ಮಧುಸೂದನ್ ವೇದಿಕೆಯಲ್ಲಿದ್ದರು. ಮಕ್ಕಳ ದಸರಾ ಸಂಚಾಲಕ ಅನಿಲ್ ಹೆಚ್.ಟಿ ಸ್ವಾಗತಿಸಿ ನಿರೂಪಿಸಿದರು. ಮಕ್ಕಳಿಂದ ಪ್ರಾರ್ಥನೆ ನೆರವೇರಿತು.