ಮಕ್ಕಳ ದಸರಾ ಕಲರವ ವಿಶೇಷವಾಗಿ ವ್ಯಾಪಾರ ಚಟುವಟಿಕೆಯಲ್ಲೂ ಕಂಡು ಬಂತು. ಹಲವೆಡೆಗಳಿಂದ ಗಾಂಧಿ ಮೈದಾನಕ್ಕೆ ಭಾರೀ ಉತ್ಸುಕತೆಯೊಂದಿಗೆ ಆಗಮಿಸಿದ್ದ ಚಿಣ್ಣರು ಪೈಪೋಟಿಯ ರೀತಿಯಲ್ಲಿ ಜನರನ್ನು ಆಕರ್ಷಿಸುತ್ತಿದ್ದರು. ಗ್ರಾಮೀಣ ಭಾಗಗಳಿಂದ ಹಣ್ಣು-ತರಕಾರಿಗಳನ್ನು ತಂದು ವ್ಯಾಪಾರ ಮಾಡುತ್ತಿದ್ದರು, ಜೋರು ಧ್ವನಿಯಲ್ಲಿ ‘ಬಾರಿ..ಬಾರಿ.. ನಾಡ್ ತರಕಾರಿ ಉಂಡ್ ಎಡ್ತೋಳಿ‘ (ಬನ್ನಿ ಬನ್ನಿ ನಾಡು ತರಕಾರಿ ಇದೆ ಖರೀದಿಸಿ) ಎಂದು ಜನರ ಚಿತ್ತವನ್ನು ತಮ್ಮತ್ತ ತಿರುಗಿಸುವ ಪ್ರಯತ್ನ ಮಾಡುತ್ತಿದ್ದುದು ಗಮನ ಸೆಳೆಯಿತು. ಇವರ ಉತ್ಸುಕತೆ ಒಂದೆಡೆಯಾದರೆ ಸಹಜವಾದ ನಾಡು ಹಣ್ಣು, ತರಕಾರಿಯನ್ನು ಗ್ರಾಹಕರು ಹೆಚ್ಚಾಗಿ ಖರೀದಿಸುತ್ತಿದ್ದರು. ಈ ವ್ಯಾಪಾರದ ಭರಾಟೆಯಲ್ಲಿ ಗ್ರಾಮೀಣ ಭಾಗದ ವಸ್ತುಗಳು ಬೇಗಬೇಗನೆ ಖಾಲಿಯಾಗುತ್ತಿತ್ತು. ಮಕ್ಕಳ ಅಂಗಡಿ ವಿಭಾಗ ದಲ್ಲಿಯೂ ಮಕ್ಕಳ ಕ್ರಿಯಾಶೀಲತೆ ಪ್ರದರ್ಶನಗೊಂಡಿತು. ತಾತ್ಕಾಲಿಕ ಫೇಸ್ ಪೈಂಟಿAಗ್ ಹಾಗೂ ಸ್ಥಳದಲ್ಲಿಯೇ ವಿವಿಧ ರೀತಿಯ ಹ್ಯಾಂಡಿಕ್ರಾö್ಯಫ್ಟ್ಗಳನ್ನು ಹೆಣೆಯುತ್ತಿದ್ದ ಮಕ್ಕಳೂ ನೋಡುಗರ ಗಮನ ಸೆಳೆದರು. (ಮೊದಲ ಪುಟದಿಂದ)

೧೩ನೆ ವರ್ಷದ ಆಚರಣೆ-ರೋಟರಿ ಮಿಸ್ಟಿ ಹಿಲ್ಸ್ ಆಯೋಜನೆ

ರೋಟರಿ ಮಿಸ್ಟಿ ಹಿಲ್ಸ್ ವತಿಯಿಂದ ಆಯೋಜಿತ ೧೩ನೇ ವರ್ಷದ ಮಕ್ಕಳ ದಸರಾವನ್ನು ಜಿಲ್ಲಾಧಿಕಾರಿ ಎಸ್.ಜೆ ಸೋಮಶೇಖರ್ ಅವರು ಛದ್ಮವೇಷಧಾರಿ ಮಕ್ಕಳ ಸಮ್ಮುಖದಲ್ಲಿ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು, ಪ್ರತ್ಯೇಕವಾಗಿ ಮಕ್ಕಳಿಗೆ ಸಂತೆ ಆಯೋಜಿಸಿರುವುದು ಉತ್ತಮ ಕಾರ್ಯ ಎಂದು ಶ್ಲಾಘಿಸಿದರು. ನವೆಂಬರ್ ತಿಂಗಳಲ್ಲಿ ಮಕ್ಕಳಿಗೆ ಜಿಲ್ಲೆಯಲ್ಲಿನ ಸಮಸ್ಯೆಗಳ ಬಗ್ಗೆ ಚರ್ಚಾ ಸ್ಪರ್ಧೆ, ಯುವ ಸಂಸತ್ ಕಾರ್ಯಕ್ರಮ ನಡೆಯಲಿದ್ದು, ಇದರಲ್ಲಿ ಜಿಲ್ಲೆಯ ವಿವಿಧ ಸಮಸ್ಯೆಗಳ ಕುರಿತು ಚರ್ಚಾಗೋಷ್ಠಿ ನಡೆಯಲಿದೆ. ಮಕ್ಕಳು ಇದರಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವಂತೆ ಅವರು ಕರೆ ನೀಡಿದರು.

ರೋಟರಿ ಜಿಲ್ಲೆ-೩೧೮೧ ಗವರ್ನರ್ ಸತೀಶ್ ಬೊಳ್ಳಾರ್ ಮಾತನಾಡಿ, ರೋಟರಿಯು ವಿವಿಧ ಜಿಲ್ಲೆಗಳಲ್ಲಿ ನವರಾತ್ರಿ ಅಂಗವಾಗಿ ಅನ್ನದಾನ, ಪರಿಸರಕ್ಕೆ ಸಂಬAಧಿಸಿದ ಕಾರ್ಯಕ್ರಮಗಳು, ಹಿರಿಯ ನಾಗರಿಕರಿಗೆ ಗೌರವ ಇತ್ಯಾದಿ ಸೇವಾ ಕಾರ್ಯಕ್ರಮಗಳನ್ನು ಮಾಡುತ್ತಿದೆ. ಇಂದಿನ ದಸರಾದಲ್ಲಿ ವಿಭಿನ್ನ ರೀತಿಯ ವೇಷಧಾರಿಗಳು, ಧಾರ್ಮಿಕ ವೇಷಗಳು ಸೇರಿದಂತೆ ಕಾಫಿ ಪ್ಲಾಂಟರ್‌ಅನ್ನು ಪ್ರತಿನಿಧಿಸುವ ವೇಷಧಾರಿ ಇರುವುದೂ ಶ್ಲಾಘನೀಯ ಎಂದ ಅವರು, ಹಿರಿಯರನ್ನು ಗೌರವಿಸುವಂತೆ ಮಕ್ಕಳಿಗೆ ಕರೆ ನೀಡಿದರು.

ರೋಟರಿ ಮಿಸ್ಟಿ ಹಿಲ್ಸ್ ಅಧ್ಯಕ್ಷ ರಾಜೇಶ್ ಪಿ.ಆರ್ ಅವರು ಮಾತನಾಡಿ, ೧೩ನೇ ವರ್ಷ ಮಕ್ಕಳ ದಸರಾ ಆಯೋಜನೆಗೊಂಡಿರುವುದು ಹೆಮ್ಮೆಯ ವಿಚಾರ. ಮಕ್ಕಳ ಪ್ರತಿಭೆಗೆ ಮಕ್ಕಳ ದಸರಾ ವೇದಿಕೆಯಾಗಿದೆ. ಗೆಲವುಗಿಂತ ಭಾಗವಹಿಸುವಿಕೆ ಮುಖ್ಯ ಎಂದು ಭಾವಿಸಿ ಮಕ್ಕಳು ಎಲ್ಲ ಸ್ಪರ್ಧೆಗಳಲ್ಲಿ ಭಾಗವಹಿಸುವಂತೆ ಸಲಹೆ ನೀಡಿದರು.

ಮಿಸ್ಟಿ ಹಿಲ್ಸ್ ಕಾರ್ಯದರ್ಶಿ ಡಾ.ಚೇತನ್ ಜಿ.ಡಿ ಮಾತನಾಡಿ, ಮಕ್ಕಳ ದಸರಾಗೆ ಉತ್ತಮ ಪ್ರತಿಕ್ರಿಯೆ ದೊರಕಿದ್ದು, ಭವಿಷ್ಯದಲ್ಲಿಯೂ ಇದೇ ರೀತಿ ಮುಂದುವರಿಯಲಿ ಎಂದು ಆಶಿಸಿದರು. ರೋಟರಿ ಜಿಲ್ಲಾ ೩೧೮೧ ಸಹಾಯಕ ಗವರ್ನರ್ ಹೆಚ್.ಎಸ್ ವಸಂತಕುಮಾರ್, ವಲಯ ಸೇನಾನಿ ಪೊನ್ನಚ್ಚನ ಮಧುಸೂದನ್ ವೇದಿಕೆಯಲ್ಲಿದ್ದರು. ಮಕ್ಕಳ ದಸರಾ

ಸಂಚಾಲಕ ಅನಿಲ್ ಹೆಚ್.ಟಿ ಸ್ವಾಗತಿಸಿ ನಿರೂಪಿಸಿದರು. ಮಕ್ಕಳಿಂದ ಪ್ರಾರ್ಥನೆ ನೆರವೇರಿತು.