ಶನಿವಾರಸಂತೆ, ಅ. ೧೬: ಶ್ರೀರಾಮ್ ಫೈನಾನ್ಸ್, ಶ್ರೀರಾಮ್ ಸೇವಾ ಸಂಕಲ್ಪ ವತಿಯಿಂದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ವಿತರಣಾ ಸಮಾರಂಭ ಶನಿವಾರಸಂತೆ ಭಾರತೀಯ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ನಡೆಯಿತು.

ಕಾರ್ಯಕ್ರಮವನ್ನು ಶನಿವಾರಸಂತೆಯ ವೈದ್ಯ ಡಾ. ಪುಟ್ಟರಾಜು ಉದ್ಘಾಟನೆ ಮಾಡಿ ಮಾತನಾಡಿ, ಇಂದು ಶ್ರೀರಾಮ್ ಸಂಸ್ಥೆ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ನೀಡುವ ಮೂಲಕ ಸಾರ್ವಜನಿಕ ಕ್ಷೇತ್ರಕ್ಕೆ ಇನ್ನಷ್ಟು ಹತ್ತಿರವಾಗುತ್ತಿದೆ, ಅದರಲ್ಲೂ ಈ ಕಾರ್ಯಕ್ರಮವನ್ನು ಸ್ಥಳೀಯ ಭಾರತಿ ವಿದ್ಯಾಸಂಸ್ಥೆ ಸಭಾಂಗಣದಲ್ಲಿ ಕಾರ್ಯಕ್ರಮ ಆಯೋಜನೆ ಮಾಡಿದ್ದು ಈ ವಿದ್ಯಾಸಂಸ್ಥೆಯಲ್ಲಿ ವ್ಯಾಸಂಗ ಮಾಡಿದ ಅನೇಕ ವಿದ್ಯಾರ್ಥಿಗಳು ಉನ್ನತ ಸ್ಥಾನಮಾನದಲ್ಲಿದ್ದಾರೆ ಎಂದರು.

ಶ್ರೀರಾಮ್ ಫೈನಾನ್ಸ್ ಪ್ರೆಸಿಡೆಂಟ್ ಹಾಗೂ ಜೋನಲ್ ಕಲೆಕ್ಷನ್ ಹೆಡ್ ಶರಶ್ಚಂದ್ರ ಭಟ್ ಕುಕ್ಕುಂಜೆ ಮಾತನಾಡಿ, ಇಂದು ನಮ್ಮ ಸಂಸ್ಥೆ ಚಾಲಕರು ಕೇವಲ ಚಾಲಕರಾಗಿಯೇ ಇರದೇ ಮಾಲೀಕರಾಗಬೇಕು ಎಂದು ಯೋಚನೆ ಮಾಡಿ ಅದರಂತೆ ಇಂದು ಲಕ್ಷಾಂತರ ಮಂದಿ ಚಾಲಕರು ವಾಹನಗಳ ಮಾಲೀಕರಾಗಿದ್ದಾರೆ. ಜೊತೆಗೆ ಸಾವಿರಾರು ಮಂದಿ ಗ್ರಾಮೀಣ ಭಾಗದ ವಿದ್ಯಾವಂತರಿಗೆ ಉದ್ಯೋಗ ನೀಡಿದೆ. ಈ ನಮ್ಮ ಸಂಸ್ಥೆ, ಮಕ್ಕಳು ವಿದ್ಯಾವಂತರಾಗಬೇಕು ಈ ನಿಟ್ಟಿನಲ್ಲಿ ಕಳೆದ ೪-೫ ವರ್ಷಗಳಿಂದ ಸರಿಸುಮಾರು ೭೫ ಸಾವಿರಕ್ಕಿಂತ ಹೆಚ್ಚು ವಿದ್ಯಾರ್ಥಿಗಳಿಗೆ ಪ್ರೋತ್ಸಾಹಧನ ನೀಡುವ ಮೂಲಕ ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಿದೆ. ಇದರ ಜೊತೆಗೆ ಶಾಲೆಗಳನ್ನು ತೆರೆದಿದೆ ನಮ್ಮ ಸಂಸ್ಥೆ ಎಂದರು. ಇನ್ನಷ್ಟು ಸಮಾಜಮುಖಿ ಸೇವೆ ಮಾಡುವ ಯೋಜನೆ ನಮ್ಮ ಶ್ರೀರಾಮ್ ಸಂಸ್ಥೆ ಹೊಂದಿದೆ. ಅನೇಕ ವರ್ಷಗಳ ಹಿಂದೆ ಹಣಕಾಸು ಸಾಲ ಸೌಲಭ್ಯ ಪಡೆಯಲು ಬಡ ಜನತೆ ಸಮಸ್ಯೆ ಎದುರಿಸುತ್ತಿದ್ದರು. ಇದನ್ನು ಮನಗಂಡು ಶ್ರೀ ರಾಮ್ ಫೈನಾನ್ಸ್ ಸ್ಥಾಪನೆ ಮಾಡಿ ಅದರಲ್ಲಿ ಸುಲಭ ರೀತಿಯಲ್ಲಿ ಸಾಲ ಸೌಲಭ್ಯ ನೀಡಲಾಯಿತು. ಇದರಿಂದ ಇಂದು ಅನೇಕರು ನಮ್ಮ ಫೈನಾನ್ಸ್ ಮೂಲಕ ಬೆಳೆಯುತ್ತಿದ್ದಾರೆ ಎಂದರು.

ಭಾರತಿ ವಿದ್ಯಾಸಂಸ್ಥೆ ಅಧ್ಯಕ್ಷ ಜಗನ್ ಪಾಲ್ ಮಾತನಾಡಿ, ಶ್ರೀರಾಮ್ ಫೈನಾನ್ಸ್ ಶ್ರೀರಾಮ್ ಸೇವಾ ಸಂಕಲ್ಪ ಎಂಬ ಹೆಸರಿನಲ್ಲಿ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಶ್ಲಾಘನೀಯ. ಇಂದು ಕೆಲ ಹಣಕಾಸು ಸಂಸ್ಥೆಗಳು ಹಣ ಮಾಡುವುದೊಂದೇ ಆಗಿರುತ್ತದೆ. ಅಂತಹದರಲ್ಲಿ ಈ ರೀತಿಯ ಸೇವೆ ಸಲ್ಲಿಸುತ್ತಿದೆ. ಇದರಿಂದ ಅನೇಕ ಮಕ್ಕಳ ಬಾಳಲ್ಲಿ ಬೆಳಕು ಹರಿದಂತೆ ಆಗುತ್ತಿದೆ ಎಂದರು. ಭಾರತಿ ಕಾಲೇಜು ಪ್ರಾಂಶುಪಾಲ ಅಶೋಕ್ ಮಾತನಾಡಿ, ಒಂದು ಖಾಸಗಿ ಸಂಸ್ಥೆ ಸಾವಿರಾರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡುತ್ತಿರುವುದು ಶ್ಲಾಘನೀಯ, ಇನ್ನಷ್ಟು ಪುರಸ್ಕಾರ ನೀಡಲಿ ಎಂದರು.

ವೇದಿಕೆಯಲ್ಲಿ ಭಾರತಿ ವಿದ್ಯಾಸಂಸ್ಥೆ ಉಪಾಧ್ಯಕ್ಷ ಮಹಮ್ಮದ್ ಪಾಷಾ, ಜೋನಲ್ ಕಲೆಕ್ಷನ್ ಹೆಡ್ ಅರವಿಂದ್, ರೀಜಿನಲ್ ಬ್ಯುಸಿನೆಸ್ ಹೆಡ್ ಚೇತನ್, ರೀಜಿನಲ್ ಕಲೆಕ್ಷನ್ ಹೆಡ್ ಎಂ.ಜೆ. ಪ್ರಖ್ಯಾತ್, ಶನಿವಾರಸಂತೆ ಶಾಖಾ ವ್ಯವಸ್ಥಾಪಕ ರಂಜಿತ್, ಕಲೆಕ್ಷನ್ ವ್ಯವಸ್ಥಾಪಕ ಎಸ್.ಯು. ಅಜಿತ್, ಸೋಮವಾರಪೇಟೆ ಶಾಖಾ ವ್ಯವಸ್ಥಾಪಕ ಮಂಜುನಾಥ್, ವಾಹನ ಚಾಲಕರ ಹಾಗೂ ಮೋಟಾರ್ ಕೆಲಸಗಾರರ ಸಂಘದ ಅಧ್ಯಕ್ಷ ಬಾಲಕೃಷ್ಣ ಪೂಜಾರಿ ಮುಂತಾದವರಿದ್ದರು. ಶಿಕ್ಷಕಿ ಕೋಮಲಾ ಕಾರ್ಯಕ್ರಮ ನಿರೂಪಿಸಿದರು.

ಈ ಸಂದರ್ಭ ನೂರಾರು ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು ಹಾಗೂ ಡಾ. ಪುಟ್ಟರಾಜು, ಜಗನ್ ಪಾಲ್, ಮಹಮ್ಮದ್ ಪಾಷಾ, ಅಶೋಕ್, ಬಾಲಕೃಷ್ಣ ಪೂಜಾರಿ ಹಾಗೂ ಕಳೆದ ಅನೇಕ ವರ್ಷಗಳಿಂದ ಸಂಸ್ಥೆಯೊAದಿಗೆ ಅತ್ಯುತ್ತಮ ರೀತಿಯಲ್ಲಿ ವ್ಯವಹಾರ ಇಟ್ಟುಕೊಂಡ ಸದಸ್ಯರಿಗೆ ಶ್ರೀರಾಮ್ ಫೈನಾನ್ಸ್ ವತಿಯಿಂದ ಸನ್ಮಾನಿಸಲಾಯಿತು.