ಮಡಿಕೇರಿ, ಅ.೧೬; ಮಹಿಳೆಯ ಕೈಯ್ಯಲಿದ್ದ ಉಂಗುರ ಮಾಯ., ಕಸದಿಂದ ಹೂವಿನ ಚಿತ್ತಾರ., ಲೋಟದಲ್ಲಿದ್ದ ನೀರು ಖಾಲಿ.., ಇದು ಮಡಿಕೇರಿ ದಸರಾ ಸಾಂಸ್ಕೃತಿಕ ಕಾರ್ಯಕ್ರಮದ ವೇದಿಕೆಯಲ್ಲಿ ನಡೆದ ಜಾದೂ., ಇದರೊಂದಿಗೆ ನೃತ್ಯ ವೈವಿಧ್ಯ ಕಾರ್ಯಕ್ರಮಗಳು ಜನ ಮನ ರಂಜಿಸಿದವು.

ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಡಿಕೇರಿ ನಗರ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ತಾ. ೧೫ರಂದು ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವಿಕ್ರಂ ಜಾದೂಗಾರ್ ನಡೆಸಿಕೊಟ್ಟ ಜಾದೂ ಕಾರ್ಯಕ್ರಮ ಮನ ಸೆಳೆಯಿತು. ಪ್ರೇಕ್ಷಕರಿಂದ ತುಂಬಿದ್ದ ಸಭಾಂಗಣದಲ್ಲಿ ನಗುವಿನ ಅಲೆ, ಚಪ್ಪಾಳೆಗಳ ಸದ್ದು ಕೇಳಿಬಂದಿತು. ಇದರೊಂದಿಗೆ ವಿವಿಧ ಕಲಾತಂಡಗಳಿAದ ಮೂಡಿಬಂದ ನೃತ್ಯ ಕಾರ್ಯಕ್ರಮಗಳು ಕಲಾಭಿಮಾನಿಗಳನ್ನು ರಂಜಿಸಿತು. ಮೂರ್ನಾಡುವಿನ ಸ್ಟೆಪ್ ಅಪ್ ಅಕಾಡೆಮಿ, ಮಡಿಕೇರಿಯ ಕಿಂಗ್ಸ್ ಆಫ್ ಕೂರ್ಗ್, ಸುಳ್ಯದ ಫ್ಯೂಷನ್ ಇನ್ಸಿ÷್ಟಟ್ಯೂಟ್, ಮಡಿಕೇರಿಯ ನಾಟ್ಯಕಲಾ ಡ್ಯಾನ್ಸ್ ಸ್ಟುಡಿಯೋ ತಂಡಗಳು ಸೇರಿದಂತೆ ಇನ್ನಿತರ ಕಲಾ ತಂಡಗಳಿAದ ವೈವಿಧ್ಯಮಯ ಕಾರ್ಯಕ್ರಮಗಳು ಮೂಡಿಬಂದವು.