ಗೋಣಿಕೊಪ್ಪ ವರದಿ, ಅ. ೧೬: ಕೊಡಗಿನಲ್ಲಿ ಮೋಟಾರ್ ಸ್ಪೋರ್ಟ್ಸ್ಗೆ ವೇದಿಕೆ ನಿರ್ಮಿಸುವ ಉದ್ದೇಶದಿಂದ ಆರಂಭಗೊAಡಿ ರುವ ಕೂರ್ಗ್ ಚಾಲೆಂಜ್ ೪x೪ ಮೋಟಾರ್ ಸ್ಪೋರ್ಟ್ಸ್ ಮೂರನೇ ಆವೃತ್ತಿಗೆ ಸಜ್ಜಾಗಿದ್ದು, ಡಿಸೆಂಬರ್ ೧೧, ೧೨ ಮತ್ತು ೧೩ ರಂದು ಕುಂದ, ಈಚೂರು ಗ್ರಾಮದಲ್ಲಿ ನಡೆಯಲಿದೆ.
ದೇಶದ ವಿವಿಧ ಭಾಗಗಳಿಂದ ಚಾಲಕರು ಮತ್ತು ಆಫ್ರೋಡ್ ಕ್ರೀಡಾಪಟುಗಳು ಭಾಗವಹಿಸುವ ನಿರೀಕ್ಷೆಯಿದ್ದು, ಹೊಸ ಪ್ರತಿಭೆಗಳಿಗೆ ತಮ್ಮ ಕೌಶಲ್ಯ ಪ್ರದರ್ಶಿಸಲು ವೇದಿಕೆ ಕಲ್ಪಿಸಲಾಗುತ್ತಿದೆ.
೨೦೨೩ರಲ್ಲಿ ಆರಂಭವಾದ ಕೂರ್ಗ್ ಚಾಲೆಂಜ್ನ ಮೊದಲ ಆವೃತ್ತಿಯಲ್ಲಿ ಸುಮಾರು ೬೫ ಸ್ಪರ್ಧಿಗಳು ಭಾಗವಹಿಸಿದ್ದರು. ೨೦೨೫ರಲ್ಲಿ ೧೨೫ಕ್ಕೆ ಏರಿದ್ದು, ಕೊಡಗಿ ನಲ್ಲಿ ಆಫ್ರೋಡ್ ಕ್ರೀಡೆಗೆ ಸಿಕ್ಕಿ ರುವ ಜನಪ್ರಿಯತೆಗೆ ಸಾಕ್ಷಿಯಾಗಿದೆ.
ಬಿಗಿನರ್ಸ್, ಲೇಡಿಸ್, ಜಿಮ್ನಿ, ಎಸ್ಯುವಿ, ಎಕ್ಸ್ಪರ್ಟ್ ಡೀಸೆಲ್, ಎಕ್ಸ್ಪರ್ಟ್ ಪೆಟ್ರೋಲ್, ಎಕ್ಸ್ಪರ್ಟ್ ಓಪನ್, ಮೊಡಿಫೈಡ್ ಡೀಸೆಲ್, ಮೊಡಿಫೈಡ್ ಪೆಟ್ರೊಲ್, ಮೊಡಿಫೈಡ್ ಓಪನ್ ಹಾಗೂ ಎನ್ಡಿಎಂಎಸ್ ವಿಭಾಗದಲ್ಲಿ ಸ್ಪರ್ಧೆ ನಡೆಯಲಿದೆ.
ಸ್ಪರ್ಧೆಯಲ್ಲಿ ಚಾಲನಾ ಕೌಶಲ್ಯ, ವಾಹನ ನಿಯಂತ್ರಣ, ತಾಂತ್ರಿಕ ಸಾಮರ್ಥ್ಯ ಮತ್ತು ಸಮಯದ ಆಧಾರದ ಮೇಲೆ ಸ್ಪರ್ಧಿಗಳಿಗೆ ಸವಾಲುಗಳನ್ನು ನೀಡಲಾಗುತ್ತದೆ. ಸಾಹಸ ಮತ್ತು ಸ್ಪರ್ಧೆ ಜೊತೆಗೆ ಯುವಜನರಲ್ಲಿ ರಸ್ತೆ ಸುರಕ್ಷತೆ ಹಾಗೂ ಜವಾಬ್ದಾರಿಯುತ ಚಾಲನೆಯ ಅರಿವು ಮೂಡಿಸುವುದು, ಡ್ರಿಂಕ್ ಆಂಡ್ ಡ್ರೆöÊವ್ ಬೇಡ, ಸೀಟ್ಬೆಲ್ಟ್ ಕಡ್ಡಾಯ ಎಂಬ ಸಂದೇಶದೊAದಿಗೆ ಸುರಕ್ಷಿತ ಚಾಲನೆ, ಸಾರ್ವಜನಿಕ ರಸ್ತೆಯಲ್ಲಿ ಅಪಾಯಕಾರಿ ಚಾಲನೆ ಮಾಡುವ ಬದಲು, ನಿಯಮಬದ್ಧ ಕ್ರೀಡಾ ವೇದಿಕೆಯಲ್ಲಿ ಚಾಲನಾ ಕೌಶಲ್ಯವನ್ನು ಪ್ರದರ್ಶಿಸುವಂತೆ ಯುವಕರಿಗೆ ಸಂದೇಶ ನೀಡಲು ಮುಂದಾಗಿದೆ.
ಕೊಡಗಿನ ಯುವಕರಿಗೆ ರಾಷ್ಟಿçÃಯ ಮಟ್ಟದ ಸ್ಪರ್ಧೆಗಳಲ್ಲಿ ಭಾಗವಹಿಸುವ ಅನುಭವ ಹೊಂದಿರುವ ತಂಡಗಳು ಹಾಗೂ ಚಾಲಕರೊಂದಿಗೆ ಸ್ಥಳೀಯ ಪ್ರತಿಭೆಗಳು ಸ್ಪರ್ಧಿಸುವ ಮೂಲಕ ಹೆಚ್ಚಿನ ಅನುಭವ ನೀಡಲು ಯೋಜನೆ ರೂಪಿಸಲಾಗಿದೆ. ಸ್ಥಳೀಯ ಪ್ರವಾಸೋದ್ಯಮ, ಹೋಂಸ್ಟೇ, ಹೊಟೇಲ್, ಸಾರಿಗೆ ಸೇರಿದಂತೆ ವಿವಿಧ ಕ್ಷೇತ್ರಗಳಿಗೂ ಉತ್ತೇಜನ ದೊರೆಯಲಿದೆ ಎಂದು ಆಯೋಜಕ ಶ್ರೀಮಂತ್ ಮುತ್ತಣ್ಣ ತಿಳಿಸಿದ್ದಾರೆ.