ಭಾಗಮಂಡಲ, ಅ. ೧೬: ಮುಖ್ಯಮಂತ್ರಿ ಅವರ ರಾಜಕೀಯ ಕಾರ್ಯದರ್ಶಿ, ಶಾಸಕ ಎ.ಎಸ್.ಪೊನ್ನಣ್ಣ ತಲಕಾವೇರಿಗೆ ಭೇಟಿ ನೀಡಿ ದೇವಾಲಯದ ಬಳಿ ನೂತನವಾಗಿ ನಿರ್ಮಾಣಗೊಂಡ ಭಂಡಾರ ಮನೆ ಉದ್ಘಾಟಿಸಿದರು.
ಸುಮಾರು ೧ ಕೋಟಿ ರೂ. ವೆಚ್ಚದಲ್ಲಿ ಗ್ರೇಟರ್ ಬೆಂಗಳೂರು ಅಥಾರಿಟಿ (ಜಿಬಿಎ) ವತಿಯಿಂದ ನೀಡಿರುವ ಅನುದಾನದಲ್ಲಿ ಭಂಡಾರ ಮನೆ ಕಟ್ಟಡ ನಿರ್ಮಿಸಲಾಗಿದೆ.
ಬಳಿಕ ತಲಕಾವೇರಿ ಜಾತ್ರಾ ಮಹೋತ್ಸವ ಸಿದ್ಧತೆ ಸಂಬAಧ ಶಾಸಕರಾದ ಎ.ಎಸ್.ಪೊನ್ನಣ್ಣ ಅವರು ಮಾಹಿತಿ ಪಡೆದರು.
ಬಳಿಕ ಮಾತನಾಡಿದ ಶಾಸಕರು, ತಾಯಿ ಕಾವೇರಿ ಪವಿತ್ರ ತೀರ್ಥೋದ್ಭವ ಸಂಬAಧ ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಕಾವೇರಿ ಮಾತೆ ತೀರ್ಥರೂಪಿಣಿ ದರ್ಶನ ಪಡೆಯಲು ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಲಿದ್ದು, ಭಕ್ತಾಧಿಗಳಿಗೆ ಯಾವುದೇ ರೀತಿಯ ತೊಂದರೆಯಾಗದAತೆ ಗಮನ ಹರಿಸಲಾಗಿದೆ ಎಂದರು.
ಜಿಲ್ಲಾಡಳಿತ, ಪೊಲೀಸ್, ದೇವಾಲಯ ಸಮಿತಿ, ವಿವಿಧ ಇಲಾಖೆಗಳು ತಮ್ಮ ತಮ್ಮ ವ್ಯಾಪ್ತಿಯಲ್ಲಿ ಅಗತ್ಯ ತಯಾರಿ ಮಾಡಿಕೊಂಡಿದ್ದಾರೆ ಂದು ಮಾಹಿತಿ ನೀಡಿದರು.
ಕೊಡಗು ಏಕೀಕರಣ ರಂಗದಿAದ ಅನ್ನದಾನ ವ್ಯವಸ್ಥೆ ಇರಲಿದೆ. ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾದಿಗಳು ಆಗಮಿಸಲಿದ್ದು, ಅಗತ್ಯ ಸಿದ್ಧತೆ ಮಾಡಿಕೊಳ್ಳಲಾಗಿದೆ. ಮುಜರಾಯಿ ಇಲಾಖೆಯಿಂದ ೭೫ ಲಕ್ಷ ರೂ. ಬಿಡುಗಡೆಗೆ ಆದೇಶ ಆಗಿದೆ ಎಂದು ಶಾಸಕರು ಮಾಹಿತಿ ನೀಡಿದರು.
ಭಾಗಮಂಡಲದಿAದ ತಲಕಾವೇರಿಯ ವರೆಗೆ ನಡೆಯಲಿರುವ ಪಾದಯಾತ್ರೆಯಲ್ಲಿ ಸಹ ಪಾಲ್ಗೊಳ್ಳಲಾಗುವುದು ಎಂದು ಶಾಸಕ ಪೊನ್ನಣ್ಣ ಅವರು ತಿಳಿಸಿದರು.
ದೇವಾಲಯ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷÀ ಬಾನಂಡ ಪ್ರಥ್ಯು, ಸದಸ್ಯರುಗಳಾದ ಲಕ್ಷö್ಮಣ ಎಂ.ಸಿ., ಕಾಂಚನ ಕೆ.ಪಿ., ಹರ್ಷ ಡಿ.ಎನ್, ಕೆ.ಎ.ತಿಮ್ಮಯ್ಯ, ಸಿ.ಎ.ಅಯ್ಯಣ್ಣ, ಕೆ.ಜೆ.ರಘುನಾಥ, ಕರ್ನಾಟಕ ಅರೆಭಾಷೆ ಸಂಸ್ಕೃತಿ ಮತ್ತು ಸಾಹಿತ್ಯ ಅಕಾಡೆಮಿ ಸದಸ್ಯ ಕುದುಪಜೆ ಪ್ರಕಾಶ್, ತಕ್ಕ ಮುಖ್ಯಸ್ಥ ಕೋಡಿ ಮೋಟಯ್ಯ, ಭಗಂಡೇಶ್ವರ ದೇವಾಲಯ ತಕ್ಕ ಮುಖ್ಯಸ್ಥ ಬಳ್ಳಡ್ಕ ಅಪ್ಪಾಜಿ, ದೇವಾಲಯದ ಇಒ ಚಂದ್ರಶೇಖರ್, ಲೋಕೋಪಯೋಗಿ ಇಂಜಿನಿಯರ್ ಗಿರೀಶ್, ನಿರ್ಮಿತಿ ಕೇಂದ್ರದ ಇಂಜಿನಿಯರ್ ಸಚಿನ್ ಇತರರು ಇದ್ದರು.