ಮಡಿಕೇರಿ, ಅ. ೧೬: ಕೊಡಗು ಜಿಲ್ಲಾ ಅನುದಾನ ರಹಿತ ಶಾಲೆಯ ಮ್ಯಾನೇಜ್ಮೆಂಟ್ ಅಸೋಸಿಯೇಷನ್ ವತಿಯಿಂದ ಎ. ಎಸ್. ಪೊನ್ನಣ್ಣ ಹಾಗೂ ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿ ರಶ್ಮಿ ಮಹೇಶ್ ಅವರನ್ನು ಬೆಂಗಳೂರಿನ ವಿಧಾನಸೌಧ ದಲ್ಲಿರುವ ಪೊನ್ನಣ್ಣ ಅವರ ಕಚೇರಿಯಲ್ಲಿ ಭೇಟಿ ಮಾಡಿ, ಶಿಕ್ಷಣ ಕ್ಷೇತ್ರಕ್ಕೆ ಸಂಬAಧಿಸಿದ ವಿವಿಧ ಪ್ರಮುಖ ವಿಷಯಗಳು ಹಾಗೂ ಕೊಡಗಿನ ಅನುದಾನರಹಿತ ಶಾಲೆಗಳು ಎದುರಿಸುತ್ತಿರುವ ಸಮಸ್ಯೆಗಳ ಕುರಿತು ಚರ್ಚಿಸಲಾಯಿತು.
ಸಭೆಯಲ್ಲಿ ವಿಶೇಷವಾಗಿ ಶಾಲೆಗಳ ಹಾಗೂ ಖಖಿಇ ಮರುಪಾವತಿ ಸೇರಿದಂತೆ ಹಲವು ಪ್ರಮುಖ ಸಮಸ್ಯೆಗಳ ಕುರಿತು ವಿವರವಾಗಿ ಚರ್ಚಿಸಲಾಯಿತು.
ಶಿಕ್ಷಣ ಇಲಾಖೆಯ ಮುಖ್ಯ ಕಾರ್ಯದರ್ಶಿ ಯವರು ಸಂಬAಧಿಸಿದ ಎಲ್ಲಾ ಸಮಸ್ಯೆಗಳನ್ನು ಶೀಘ್ರದಲ್ಲೇ ಪರಿಹರಿಸುವುದಾಗಿ ಭರವಸೆ ನೀಡಿದರು. ಸಭೆಯಲ್ಲಿ ಅಸೋಸಿಯೇಷನ್ ಅಧ್ಯಕ್ಷರಾದ ತಿಮ್ಮಯ್ಯ ಕೋಟ್ರಂಗಡ, ಸಮಿತಿ ಸದಸ್ಯರಾದ ಮಾದಂಡ ತಿಮ್ಮಯ್ಯ, ಮಲ್ಲಂಗಡ ನಿರನ್ ಉತ್ತಪ್ಪ ಹಾಗೂ ಸಚಿನ್ ವಾಸುದೇವ್ ಉಪಸ್ಥಿತರಿದ್ದರು.