ವೀರಾಜಪೇಟೆ, ಅ. ೧೫ : ತಾಲೂಕಿನ ಹೊರವಲಯದ ಬಾಳುಗೋಡು ಬಳಿ ಇರುವ ಶ್ರೀ ಮಾತಾ ಪೆಟ್ರೋಲ್ ಪಂಪ್ ಆವರಣದಲ್ಲಿ ಬೃಹತ್ ಗಾತ್ರದ ಕಾಳಿಂಗಸರ್ಪವೊAದು ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು.
ಸುಮಾರು ೧೫ ಅಡಿ ಉದ್ದವಿದ್ದ ಈ ಹಾವನ್ನು ಕಂಡು ಪೆಟ್ರೋಲ್ ಪಂಪ್ ಸಿಬ್ಬಂದಿ ಪೆರುಂಬಾಡಿಯ ಉರಗ ತಜ್ಞ ಕುಟ್ಟನ್ ಅವರಿಗೆ ಮಾಹಿತಿ ನೀಡಿದರು. ತಕ್ಷಣವೇ ಸ್ಥಳಕ್ಕೆ ಧಾವಿಸಿದ ಕುಟ್ಟನ್ ಅವರು ಕಾಳಿಂಗ ಸರ್ಪವನ್ನು ಯಶಸ್ವಿಯಾಗಿ ಸೆರೆಹಿಡಿದರು.
ನಂತರ ಯಾವುದೇ ಅಪಾಯವಾಗದಂತೆ ಹಾವನ್ನು ಸುರಕ್ಷಿತವಾಗಿ ಮಾಕುಟ್ಟ ಅರಣ್ಯ ಪ್ರದೇಶಕ್ಕೆ ಕೊಂಡೊಯ್ದು ಬಿಡಲಾಯಿತು. ಜನನಿಬಿಡ ಪ್ರದೇಶದಲ್ಲಿ ಬೃಹತ್ ಗಾತ್ರದ ಕಾಳಿಂಗಸರ್ಪ ಪತ್ತೆಯಾಗಿದ್ದರೂ, ಸಕಾಲದಲ್ಲಿ ಉರಗ ತಜ್ಞರ ಸಮಯ ಪ್ರಜ್ಞೆಯಿಂದ ದೊಡ್ಡಮಟ್ಟದ ಅನಾಹುತ ತಪ್ಪಿದಂತಾಗಿದೆ.