ಮಡಿಕೇರಿ, ಅ. ೧೫: ಪ್ರಸಕ್ತ ಸಾಲಿನ ಮುಂಗಾರು ಹಂಗಾಮಿನ ಬೆಳೆ ಸಮೀಕ್ಷೆ ಕಾರ್ಯ ಪ್ರಾರಂಭಗೊAಡಿದ್ದು ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆಗಳ ವಿವರಗಳನ್ನು ಬೆಳೆ ಸಮೀಕ್ಷೆ ತಂತ್ರಾAಶದ ಮೂಲಕ ದಾಖಲಿಸುವಂತೆ ಕೋರಿದೆ.

ಸರ್ಕಾರವು ಬೆಳೆ ಸಮೀಕ್ಷೆ ಮೂಲಕ ರೈತರ ಜಮೀನಿನಲ್ಲಿರುವ ವಿವಿಧ ಬೆಳೆಗಳ ವಿಸ್ತೀರ್ಣ, ಬೆಳೆ ವಿವರ ಸಹಿತ ಅಗತ್ಯ ಮಾಹಿತಿ ಸಂಗ್ರಹಿಸುತ್ತಿದೆ. ಈ ಸಾಲಿನಲ್ಲಿಯೂ ರೈತರು ಸ್ವತಹ ಬೆಳೆ ಸಮೀಕ್ಷೆಯಲ್ಲಿ ನೇರವಾಗಿ ಭಾಗವಹಿಸಲು ಅವಕಾಶ ಕಲ್ಪಿಸಲಾಗಿದೆ ಇದರಿಂದ ರೈತರು ತಮ್ಮ ಬೆಳೆಯ ನಿಖರ ಮಾಹಿತಿಯನ್ನು ತಾವೇ ದಾಖಲಿಸಬಹುದಾಗಿದೆ.

ಬೆಳೆ ಸಮೀಕ್ಷೆ ಆ್ಯಪ್ ಮೂಲಕ ವಿವರ ದಾಖಲಿಸುವುದು. ರೈತರು ತಮ್ಮ ಮೊಬೈಲ್‌ನಲ್ಲಿ ಪ್ಲೇ ಸ್ಟೋರ್‌ಗೆ ತೆರಳಿ ಮುಂಗಾರು ರೈತರ ಬೆಳೆ ಸಮೀಕ್ಷೆ ೨೦೨೬ ಮೊಬೈಲ್ ಆ್ಯಪ್ ಡೌನ್‌ಲೋಡ್ ಮಾಡಿಕೊಳ್ಳಬೇಕು. ಬಳಿಕ ಜಮೀನಿನಲ್ಲಿ ಬೆಳೆದಿರುವ ಬೆಳೆಗಳ ಛಾಯಾಚಿತ್ರ ತೆಗೆದು ಬೆಳೆಗಳ ವಿವರಗಳೊಂದಿಗೆ ಆ್ಯಪ್‌ನಲ್ಲಿ ಅಪ್‌ಲೋಡ್ ಮಾಡಬಹುದಾಗಿದೆ. ಇದು ಸಾಧ್ಯವಾಗದಿದ್ದಲ್ಲಿ ತಾಲೂಕು ಆಡಳಿತ ನೇಮಿಸಿರುವ ಮೊಬೈಲ್ ತಂತ್ರಾAಶದ ಜ್ಞಾನ ಹೊಂದಿರುವ ಸ್ಥಳೀಯ ಖಾಸಗಿ ನಿವಾಸಿಗಳ ನೆರವು ಪಡೆಯಬಹುದಾಗಿದೆ.

ತಾಲೂಕು ಆಡಳಿತದಿಂದ ಪರಿಶೀಲನೆ: ರೈತರು ಅಥವಾ ನೇಮಕಗೊಂಡ ಖಾಸಗಿ ನಿವಾಸಿಗಳು ಛಾಯಾಚಿತ್ರದೊಂದಿಗೆ ದಾಖಲಿಸಿರುವ ಬೆಳೆ ಮಾಹಿತಿಯನ್ನು ತಾಲೂಕು ಆಡಳಿತ ಪರಿಶೀಲಿಸಿ ಅನುಮೋದಿಸಲಿದೆ, ತದನಂತರ ರೈತರು ತಮ್ಮ ಜಮೀನಿನಲ್ಲಿ ಬೆಳೆದಿರುವ ಬೆಳೆ ಸಮೀಕ್ಷೆ ಮಾಹಿತಿಯನ್ನು ಪರಿಶೀಲಿಸಬಹುದಾಗಿದೆ.

ಈ ಮಾಹಿತಿಯು ಬೆಳೆ ಸಮೀಕ್ಷೆಯಲ್ಲಿ ವ್ಯತ್ಯಾಸವಿದ್ದಲ್ಲಿ ಬೆಳೆ ದರ್ಶಕ ಮೊಬೈಲ್ ಆ್ಯಪ್ ಮೂಲಕ ರೈತರು ಆಕ್ಷೇಪಣೆ ಸಲ್ಲಿಸಬಹುದಾಗಿದೆ. ಈ ಮೂಲಕ ತಮ್ಮ ಜಮೀನಿನ ಬೆಳೆ ಮಾಹಿತಿಯು ಸರಕಾರದ ದಾಖಲಾತಿಗಳಲ್ಲಿ ನಮೂದಾಗುವಂತೆ ಖಚಿತ ಪಡಿಸಿಕೊಳ್ಳಬಹುದಾಗಿದೆ

ಪ್ರಸಕ್ತ ಸಾಲಿನಲ್ಲಿ ಬೆಳೆ ಸಮೀಕ್ಷೆ ಮಾಡಿಸದ ರೈತರಿಗೆ ಬೆಳೆ ವಿಮೆ ಯೋಜನೆಯ ಫಲಾನುಭವಿಯಾಗಲು ಅರ್ಹತೆ ಇರುವುದಿಲ್ಲ.

ಯಾವ ಯೋಜನೆಗೆ ಬೆಳೆ ಸಮೀಕ್ಷೆ ಪ್ರಯೋಜನವಾಗಲಿದೆ

ಬೆಳೆ ವಿಮೆ ಯೋಜನೆಯಡಿ ಹೆಸರು ನೋಂದಣಿಯಾಗಿರುವ ರೈತರು ಸ್ವತಹ ಬೆಳೆ ಸಮೀಕ್ಷೆ ನಡೆಸಿ ತಮ್ಮ ಬೆಳೆಯ ವಿವರ ದಾಖಲಿಸುವುದರಿಂದ ಮುಂದೆ ಬೆಳೆ ವಿಮೆ ಪಡೆಯುವ ಪ್ರಕ್ರಿಯೆಯಲ್ಲಿಯೂ ಸಹಕಾರಿಯಾಗಲಿದೆ.

ರೈತರು ಬೆಳೆದಿರುವ ಬೆಳೆಗಳು ಪಹಣಿಯಲ್ಲಿ ನಮೂದಿಸಲು, ಅತಿವೃಷ್ಟಿ ಅಥವಾ ಅನಾವೃಷ್ಟಿ ಸಂದರ್ಭದಲ್ಲಿ ಸರ್ಕಾರದಿಂದ ದೊರೆಯುವ ಪರಿಹಾರ ಹಣ ಪಡೆಯಲು ಬೆಳೆ ಸಮೀಕ್ಷೆ ಕಡ್ಡಾಯವಾಗಿದೆ. ಬೆಳೆ ಬೆಳೆದು ಫಸಲನ್ನು ಸರಕಾರಿ ಖರೀದಿ ಕೇಂದ್ರಕ್ಕೆ ನೀಡಲು ಹಾಗೂ ಬೆಳೆ ಸಾಲ ಪಡೆಯಲು ಬೆಳೆ ಸಮೀಕ್ಷೆ ವರದಿ ಕಡ್ಡಾಯವಾಗಿದೆ. ಆದ ಕಾರಣ ಎಲ್ಲಾ ರೈತ ಬಾಂಧವರು ಬೆಳೆ ಸಮೀಕ್ಷೆ ಕಾರ್ಯದಲ್ಲಿ ಪಾಲ್ಗೊಳ್ಳಬೇಕು ಎಂದು ಸೋಮವಾರಪೇಟೆ / ಕುಶಾಲನಗರ ಸಹಾಯಕ ಕೃಷಿ ನಿರ್ದೇಶಕ ವೀರಣ್ಣ ಕೆ.ಪಿ. ರೈತರಲ್ಲಿ ಮನವಿ ಮಾಡಿದ್ದಾರೆ.