ಮಡಿಕೇರಿ, ಅ. ೧೫: ಪ್ರಸಕ್ತ ಸಾಲಿಗೆ ಭಾಗಮಂಡಲ ಜೇನುಗಾರಿಕೆ ತರಬೇತಿ ಕೇಂದ್ರದಲ್ಲಿ ರೈತರ ಮಕ್ಕಳಿಗೆ ೩ ತಿಂಗಳ ಜೇನುಗಾರಿಕೆ ತರಬೇತಿ ಕಾರ್ಯಕ್ರಮ ೨೦೨೬ ರ ನವೆಂಬರ್ ೪ ರಿಂದ ೨೦೨೭ರ ಫೆಬ್ರವರಿ ೩ ರವರೆಗೆ (ಪುರುಷ ಅಭ್ಯರ್ಥಿಗಳು ಮಾತ್ರ) ಹಮ್ಮಿಕೊಳ್ಳಲಾಗುವುದು. ಈ ಸಂಬAಧ ಕೊಡಗು ಜಿಲ್ಲೆಯಿಂದ ಅಭ್ಯರ್ಥಿಯನ್ನು ಆಯ್ಕೆ ಮಾಡಲು ಅವಕಾಶವಿದ್ದು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.

ತಾ. ೨೮ ರವರೆಗೆ ಅರ್ಜಿಯನ್ನು ಈ ಕಚೇರಿಯಲ್ಲಿ/ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿ (ಜಿ.ಪಂ), ಮಡಿಕೇರಿ / ಭಾಗಮಂಡಲ ಜೇನುಗಾರಿಕೆ ತರಬೇತಿ ಕೇಂದ್ರ ಇಲಾಖಾ ವೆಬ್‌ಸೈಟ್: hಣಣಠಿs://hoಡಿಣiಛಿuಟಣuಡಿeಜiಡಿ.ಞಚಿಡಿಟಿಚಿಣಚಿಞಚಿ.gov.iಟಿ ನಲ್ಲಿ ಪಡೆಯಬಹುದು. ಭರ್ತಿ ಮಾಡಿದ ಅರ್ಜಿ ಸಲ್ಲಿಸಲು ತಾ. ೩೦ ಕೊನೆಯ ದಿನವಾಗಿದೆ. ಅರ್ಜಿಯನ್ನು ತೋಟಗಾರಿಕೆ ಉಪನಿರ್ದೇಶಕರ ಕಚೇರಿ, ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರು (ಜಿ.ಪಂ.) ಮಡಿಕೇರಿ ಇಲ್ಲಿಗೆ ಖುದ್ದು ಸಲ್ಲಿಸತಕ್ಕದ್ದು. ಹೆಚ್ಚಿನ ಮಾಹಿತಿಗೆ ದೂ.ಸಂ. ೯೪೪೮೪೦೭೮೧೬/ ೯೯೪೫೮೫೩೩೫೦ ನ್ನು ಸಂಪರ್ಕಿಸಬಹುದು.