ಮಡಿಕೇರಿ, ಅ. ೧೫; ಮಡಿಕೇರಿ ದಸರಾ ಉತ್ಸವ ಅಂಗವಾಗಿ ಯುವ ದಸರಾ ಏರ್ಪಡಿಸಲಾಗಿದ್ದು, ತಾ. ೧೭ ಹಾಗೂ ೧೮ ರಂದು ವಿವಿಧ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ.
ಪತ್ರಿಕಾಗೋಷ್ಠಿಯಲ್ಲಿ ಈ ಬಗ್ಗೆ ಮಾಹಿತಿ ನೀಡಿದ ಯುವ ದಸರಾ ಸಮಿತಿ ಅಧ್ಯಕ್ಷ ಕವನ್ ಕೊತ್ತೋಳಿ; ನಗರದ ಗಾಂಧಿ ಮೈದಾನದಲ್ಲಿ ತಾ. ೧೭ ಹಾಗೂ ತಾ.೧೮ ರಂದು ಎರಡು ದಿನಗಳ ಕಾಲ ಯುವ ದಸರಾ ಏರ್ಪಡಿಸಲಾಗಿದೆ.
೧೭ ರಂದು ಬೆಳಿಗ್ಗೆ ೧೦.೩೦ ರಿಂದ ಎರಡನೇ ವರ್ಷದ ರಾಜ್ಯಮಟ್ಟದ ಶ್ವಾನ ಪ್ರದರ್ಶನ ನಡೆಯಲಿದೆ.
ವಿವಿಧ ತಳಿಗಳ ಶ್ವಾನಗಳು ಭಾಗವಹಿಸಲಿದ್ದು, ಸಾರ್ವಜನಿಕರಿಗೆ ವಿಶೇಷ ಆಕರ್ಷಣೆಯಾಗಲಿದೆ. ಪಶುಪಾಲನೆ ಮತ್ತು ಪಶುವೈದ್ಯಕೀಯ ಇಲಾಖೆ ಸಹಯೋಗದೊಂದಿಗೆ ಕಾರ್ಯಕ್ರಮ ನಡೆಯಲಿದ್ದು, ವಿವಿಧ ವಿಭಾಗಗಳಲ್ಲಿ ವಿಜೇತರಾಗುವ ಶ್ವಾನಗಳಿಗೆ ಬಹುಮಾನ ನೀಡಲಾಗುವದು. ಕಳೆದ ವರ್ಷ ೯೦ ಶ್ವಾನಗಳು ಭಾಗವಹಿಸಿದ್ದು, ಈ ಬಾರಿ ೧೫೦ ಕ್ಕೂ ಹೆಚ್ಚು ಶ್ವಾನಗಳು ಭಾಗವಹಿಸುವ ನಿರೀಕ್ಷೆಯಿದೆ ಎಂದು ತಿಳಿಸಿದರು.
ತಾ. ೧೮ರಂದು ಸಂಜೆ ೭ ಗಂಟೆಯಿAದ ಕಲಾ ಸಂಭ್ರಮ ವೇದಿಕೆಯಲ್ಲಿ ಭಾರತೀಯ ಸಾಂಪ್ರದಾಯಿಕ ಉಡುಗೆಯ ಸೌಂದರ್ಯ ನಡಿಗೆ ಕಾರ್ಯಕ್ರಮ ನಡೆಯಲಿದ್ದು, ೩೫ ಮಂದಿ ಭಾಗವಹಿಸಲಿದ್ದಾರೆ.
ಸಭಾ ಕಾರ್ಯಕ್ರಮದ ಬಳಿಕ ರಾಜ್ಯಮಟ್ಟದ ನೃತ್ಯ ಸ್ಪರ್ಧೆ ನಡೆಯಲಿದೆ. ೧೦ ತಂಡಗಳು ಭಾಗವಹಿಸಲಿದ್ದು, ೬ ಕೊಡಗು ಜಿಲ್ಲೆಯ ತಂಡಗಳಾಗಿವೆ ಎಂದರು.
ಇದರೊಂದಿಗೆ ಕಲಾವಿದ ಚೇತನ್ ನಾಯಕ್ ನೇತೃತ್ವದ ಸಕ್ಕರೆ ಮಿಠಾಯಿ ತಂಡದವರಿAದ ಹಾಡುಗಾರಿಕೆ ಹಾಗೂ ಕೇರಳದ ಡ್ರಮ್ಯಾನೋ ಪರ್ಕ್ಯೂಷನ್ ಎಂಬ ವಿಶೇಷ ತಂಡದಿAದ ಲೈವ್ ಡ್ರಂ ಮ್ಯೂಸಿಕ್ ಕಾರ್ಯಕ್ರಮ ನಡೆಯಲಿದೆ. ಯುವ ಪ್ರತಿಭೆಗಳಿಗೆ ವೇದಿಕೆ ಕಲ್ಪಿಸುವದು, ಕಲೆ ಮತ್ತು ಸಂಸ್ಕೃತಿಯನ್ನು ಪ್ರೋತ್ಸಾಹಿಸುವದು ಹಾಗೂ ದಸರಾ ಉತ್ಸವದ ಸಂಭ್ರಮವನ್ನು ಹೆಚ್ಚಿಸುವದು ಈ ಕಾರ್ಯಕ್ರಮದ ಮುಖ್ಯ ಉದ್ದೇಶವಾಗಿದೆ ಎಂದು ಕವನ್ ಹೇಳಿದರು.
ಗೋಷ್ಠಿಯಲ್ಲಿ ಯುವ ದಸರಾ ಸಮಿತಿ ಪದಾಧಿಕಾರಿಗಳಾದ ಅಥುಲ್ ಶರಣ್, ಅರ್ಜುನ್ ಸೂರ್ಯ, ಲೀನೇಶ್ ಹಾಗೂ ಸುನಿಲ್ ಇದ್ದರು.