ಭಾಗಮಂಡಲ, ಅ. ೧೫: ಕಾವೇರಿಯ ಉಗಮ ಸ್ಥಾನ ತಲಕಾವೇರಿಯಲ್ಲಿ ಕಾವೇರಿ ತೀರ್ಥೋದ್ಭವಕ್ಕೆ ಭಾಗಮಂಡಲ ತಲಕಾವೇರಿ ಕ್ಷೇತ್ರಗಳಲ್ಲಿ ಅಗತ್ಯ ಸಿದ್ಧತೆಗಳು ಭರದಿಂದ ಸಾಗುತ್ತಿವೆ. ಪೊಲೀಸ್ ಇಲಾಖೆಯಿಂದ ಬಂದೋಬಸ್ತ್ ಸಿದ್ಧತೆಗಳು ನಡೆಯುತ್ತಿವೆ. ಕಾವೇರಿ ಕುಂಡಿಕೆಯ ಸುತ್ತ ಬ್ಯಾರಿಕೇಡ್ ಅಳವಡಿಸಲಾಗಿದ್ದು ಸುಮಾರು ಆರು ಅಡಿ ಎತ್ತರದ ಬ್ಯಾರಿಕೇಡ್ ಅಳವಡಿಸಲಾಗಿದೆ. ಜನದಟ್ಟಣೆಯನ್ನು ನಿಯಂತ್ರಿಸಲು ನಾಲ್ಕು ಬಾಕ್ಸ್ ರೀತಿಯಲ್ಲಿ ಬ್ಯಾರಿಕೇಡ್ ಕುಂಡಿಕೆಯ ಸುತ್ತ ಹೈ ಮಾಸ್ಕ್ ಲ್ಯಾಂಪ್ ಗಳನ್ನು ಅಳವಡಿಸಲಾಗುತ್ತಿದೆ. ಈ ಬಾರಿ ತೀರ್ಥೋದ್ಭವ ಶನಿವಾರ ಸಂಜೆ ೭.೫೦ಕ್ಕೆ ಜರುಗಲಿರುವುದರಿಂದ ಕುಂಡಿಕೆಯತ್ತ ಭಕ್ತರು ತೆರಳಲು ಏಕಮಾರ್ಗ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. ವಿಐಪಿಗಳಿಗೆ ಪ್ರತ್ಯೇಕ ವ್ಯವಸ್ಥೆ ಕಲ್ಪಿಸಲಾಗಿದೆ. ಸಾಂಸ್ಕೃತಿಕ ಕಾರ್ಯಕ್ರಮಗಳಿಗೆ ಸಂಬAಧಿಸಿದAತೆ ಪ್ರತ್ಯೇಕವಾದ ವೇದಿಕೆ ವ್ಯವಸ್ಥೆ ಕಲ್ಪಿಸಲಾಗಿದ್ದು ಮಳೆ ಬಂದರೂ ಅಡಚಣೆಯಾಗದಂತೆ ಛಾವಣಿ ವ್ಯವಸ್ಥೆ ಕಲ್ಪಿಸಲಾಗಿದೆ.

ಎರಡು ಕ್ಷೇತ್ರಗಳಲ್ಲಿ ಸ್ವಚ್ಛತಾ ಕಾರ್ಯಗಳು ನಿರಂತರವಾಗಿ ನಡೆಯುತ್ತಿವೆ. ತಲಕಾವೇರಿ ಕ್ಷೇತ್ರದಲ್ಲಿ ಒಟ್ಟು ೪೯ ಸಿಸಿ ಕ್ಯಾಮೆರಾ, ಅನ್ನದಾನ ಮಾಡುವಲ್ಲಿ ವಾಹನ ಪಾರ್ಕಿಂಗ್ ಮಾಡುವಲ್ಲಿ ಹಾಗೂ ಇತರ ಸೂಕ್ಷö್ಮ ಪ್ರದೇಶಗಳಲ್ಲಿ ಸಿಸಿ ಕ್ಯಾಮೆರಾ ತೀರ್ಥೋದ್ಭವ ವೀಕ್ಷಣೆಗೆ ಒಟ್ಟು ೫ ಎಲ್‌ಇಡಿ ವಾಲ್‌ಗಳನ್ನು ಅಳವಡಿಸಲಾಗಿದೆ. ತಲಕಾವೇರಿಯಲ್ಲಿ ನಾಲ್ಕು ಹಾಗೂ ಭಾಗಮಂಡಲದಲ್ಲಿ ಒಂದು ಎಲ್‌ಇಡಿ ವಾಲ್ ವ್ಯವಸ್ಥೆ ಕಲ್ಪಿಸಲಾಗಿದೆ.

ಈ ಬಾರಿ ಭಾಗಮಂಡಲದಲ್ಲಿ ನೇರವಾಗಿ ಎಲ್‌ಇಡಿ ವಾಲ್ ನೆರವಿನಿಂದ ತೀರ್ಥೋದ್ಭವ ವೀಕ್ಷಣೆಯನ್ನು ಭಕ್ತರು ಮಾಡಬಹುದಾಗಿದೆ. ಭಾಗಮಂಡಲ ಪ್ರವಾಸಿ ಮಂದಿರದಿAದ ತಲಕಾವೇರಿವರೆಗೆ ವಿಶೇಷ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದೆ ಸುಮಾರು ೧೦ ಕಿಲೋ ಮೀಟರ್ ವ್ಯಾಪ್ತಿಯಲ್ಲಿ ಬೆಳಕಿನ ವ್ಯವಸ್ಥೆ ಕಲ್ಪಿಸಲಾಗಿದೆ. ಭಾಗಮಂಡಲದಿAದ ತಲಕಾವೇರಿವರೆಗೆ ಏಳು ಮೊಬೈಲ್ ಟಾಯ್ಲೆಟ್ ವ್ಯವಸ್ಥೆಗಳನ್ನು ಕಲ್ಪಿಸಲಾಗಿದೆ. ಗ್ರಾಮ ಪಂಚಾಯಿತಿಯಿAದ ಪ್ರತ್ಯೇಕ ಶೌಚಾಲಯ ವ್ಯವಸ್ಥೆ ಇದೆ. ಭಾಗಮಂಡಲದಲ್ಲಿ ವಾಹನ ಪಾರ್ಕಿಂಗ್ ಸ್ಥಳದಲ್ಲಿ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ. ಮಹಿಳೆಯರಿಗೆ ಹಾಗೂ ಪುರುಷರಿಗೆ ಪ್ರತ್ಯೇಕವಾಗಿ ಶೌಚಾಲಯ ವ್ಯವಸ್ಥೆ ಕಲ್ಪಿಸಲಾಗಿದೆ. ಭಾಗಮಂಡಲದಲ್ಲಿ ಅನ್ನದಾನ ಪ್ರತಿದಿನ ಮಧ್ಯಾಹ್ನ ನಿರಂತರವಾಗಿ ನಡೆಯಲಿದೆ. ತಲಕಾವೇರಿಯಲ್ಲಿ ಏಕೀಕರಣ ರಂಗದಿAದ ಅನ್ನದಾನ ವ್ಯವಸ್ಥೆ ನಡೆಯಲಿದೆ.

ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ಹೂಳೆತ್ತುವ ಕಾರ್ಯ ಪ್ರಗತಿಯಲ್ಲಿದ್ದು, ಅಕ್ಟೋಬರ್ ೧೭ ಮತ್ತು ೧೮ರಂದು ಸೂರ್ಯೋದಯದಿಂದ ಸಂಜೆ ೪ ವರೆಗೆ ಪಿಂಡಪ್ರದಾನಕ್ಕೆ ಅವಕಾಶ ಕಲ್ಪಿಸಲಾಗಿದೆ. ಪ್ಲಾಸ್ಟಿಕ್ ಬಳಕೆಯನ್ನು ಕಡಿಮೆ ಮಾಡುವ ನಿಟ್ಟಿನಲ್ಲಿ ಸೂಚನೆ ನೀಡಲಾಗಿದೆ. ಡಿವೈಎಸ್ಪಿ ಮೇದಪ್ಪ ಹಾಗೂ ಭಾಗಮಂಡಲ ಠಾಣಾಧಿಕಾರಿ ದಿನೇಶ್ ಭದ್ರತಾ ವ್ಯವಸ್ಥೆ ಪರಿಶೀಲನೆ ನಡೆಸಿದರು. ಭಾಗಮಂಡಲದಲ್ಲಿ ೨೮ ಸಿಸಿ ಕ್ಯಾಮೆರಾ ಸೇರಿದಂತೆ ಕ್ಷೇತ್ರದಲ್ಲಿ ಒಟ್ಟು ೫೩ ಕ್ಯಾಮರಗಳ ಬಳಕೆ ಮಾಡಲಾಗುತ್ತಿದೆ. ಅಕ್ಟೋಬರ್ ೧೭ ರಂದು ಶನಿವಾರ ರಾತ್ರಿ ೭.೫೦ಕ್ಕೆ ಮೇಷ ಲಗ್ನದಲ್ಲಿ ಕಾವೇರಿ ತುಲಾಸಂಕ್ರಮಣದ ಪವಿತ್ರ ತೀರ್ಥೋದ್ಭವ ಜರುಗಲಿದೆ.

ಬಸ್ ವ್ಯವಸ್ಥೆ

ತೀರ್ಥೋದ್ಭವದ ಸಂದರ್ಭ ಭಾಗಮಂಡಲದಿAದ ಕಾವೇರಿಗೆ ಸರ್ಕಾರಿ ಬಸ್‌ಗಳ ವ್ಯವಸ್ಥೆ ಕಲ್ಪಿಸಲಾಗಿದೆ. ವಾಹನಗಳ ನಿಲುಗಡೆಗೆ ಸಮಸ್ಯೆಯಾಗುವುದರಿಂದ ಭಕ್ತರು ಸರ್ಕಾರಿ ಬಸ್‌ನಲ್ಲಿ ತಲಕಾವೇರಿಗೆ ತೆರಳುವಂತೆ ಆಡಳಿತ ಅಧಿಕಾರಿ ಚಂದ್ರಶೇಖರ್ ಮನವಿ ಮಾಡಿದ್ದಾರೆ. ತೀರ್ಥೋದ್ಭವದ ಸಂದರ್ಭ ಕುಂಡಿಕೆಯ ಬಳಿ ಗುರುರಾಜ್ ಮತ್ತು ಪ್ರಶಾಂತ್ ಆಚಾರ್ ತಂಡದಿAದ ಪೂಜಾ ಕಾರ್ಯಗಳು ನೆರವೇರಲಿವೆ.

-ಸುನಿಲ್ ಕುಯ್ಯಮುಡಿ