ವೀರಾಜಪೇಟೆ, ಅ. ೧೫: ಕೊಡವ ಸಮಾಜಗಳ ಒಕ್ಕೂಟದ ವತಿಯಿಂದ ಪ್ರತಿವರ್ಷ ಬಾಳುಗೋಡುವಿನಲ್ಲಿ ಕೊಡವ ಸಮಾಜಗಳ ನಡುವೆ ನಡೆಯುವ ಕೊಡವ ನಮ್ಮೆ ಕಾರ್ಯಕ್ರಮಗಳು ನವೆಂಬರ್ ೧೯ ರಿಂದ ೨೨ ರವರೆಗೆ ನಡೆಯಲಿದೆ ಎಂದು ಕ್ರೀಡಾ ಸಮಿತಿ ಅಧ್ಯಕ್ಷ ತಂಬುಕುತ್ತಿರ ಮಧು ಮಂದಣ್ಣ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ನವೆಂಬರ್ ೧೯ ರಂದು ಬೆಳಿಗ್ಗೆ ೯ ಗಂಟೆಗೆ ಸ್ಥಳೀಯ ದೇವಾಲಯದಲ್ಲಿ ಪೂಜೆ ಸಲ್ಲಿಸಲಾಗುವುದು. ೧೦ ಗಂಟೆಗೆ ಕೊಡವ ಸಮಾಜಗಳ ನಡುವೆ ಹಾಕಿ ಪಂದ್ಯಾಟದ ಉದ್ಘಾಟನೆ, ತೆಂಗಿನಕಾಯಿಗೆ ಗುಂಡು ಒಡೆಯುವ ಸ್ಪರ್ಧೆ, ನವೆಂಬರ್ ೨೦ ರಂದು ೧೦ ಗಂಟೆಗೆ ಯುವತಿಯರ ೫ ಎ ಸೈಡ್ ಹಾಕಿ ಪಂದ್ಯಾಟ ನಡೆಯಲಿದೆ.
ನ. ೨೧ ರಂದು ಬೆಳಿಗ್ಗೆ ೯ ಗಂಟೆಗೆ ಪುರುಷರು ಮತ್ತು ಮಹಿಳೆಯರ ಹಗ್ಗಜಗ್ಗಾಟಕ್ಕೆ ಚಾಲನೆ ನೀಡಲಾಗುವುದು. ೧೧ ಗಂಟೆಗೆ ಯುದ್ಧ ಸ್ಮಾರಕದಲ್ಲಿ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಲಿದೆ. ಅಪರಾಹ್ನ ೨ ಗಂಟೆಗೆ ಪುರುಷರಿಗೆ ಮತ್ತು ಮಹಿಳೆಯರಿಗೆ ಭಾರದ ಗುಂಡು ಎಸೆಯುವ ಸ್ಪರ್ಧೆ ಆಯೋಜಿಸಲಾಗಿದೆ ಎಂದು ಮಾಹಿತಿ ನೀಡಿದರು.
ನ. ೨೨ ಬೆಳಿಗ್ಗೆ ೯ ಗಂಟೆಗೆ ಮಂದ್ ಮರಿಯುವೊ, ೯-೩೦ಕ್ಕೆ ಸಾಂಸ್ಕೃತಿಕ ಕಾರ್ಯಕ್ರಮ ಪೈಪೋಟಿ ನಡೆಯಲಿದೆ. ಅಪರಾಹ್ನ ೨ ಗಂಟೆಗೆ ಪುರುಷರ ಮತ್ತು ಮಹಿಳೆಯರ ಹಾಕಿ ಪಂದ್ಯಾಟದ ಫೈನಲ್ ಪಂದ್ಯ ನಡೆಯಲಿದೆ. ಪುರುಷರ ಮತ್ತು ಮಹಿಳೆಯರ ಹಗ್ಗಾಜಗ್ಗಾಟ ಪೈಪೋಟಿ ಮತ್ತು ಬಹುಮಾನ ವಿತರಣೆ ಕಾರ್ಯಕ್ರಮ ನಡೆಯಲಿದೆ ಎಂದು ವಿವರಿದರು.
ಗೋಷ್ಠಿಯಲ್ಲಿ ಕ್ರೀಡಾ ಸಮಿತಿ ಸಂಚಾಲಕ ಕಂಬೀರAಡ ಕಿಟ್ಟು ಕಾಳಪ್ಪ, ಕಾರ್ಯದರ್ಶಿ ಕೋಟೆರ ರಘು ಕಾರ್ಯಪ್ಪ, ಹಗ್ಗಜಗ್ಗಾಟ ಸಮಿತಿಯ ಸಂಚಾಲಕ ಬೊಳಿಯಂಗಡ ದಾದು ಪೂವಯ್ಯ, ಸಮಿತಿ ಸದಸ್ಯರಾದ ಮಾದೆಯಂಡ ಸಂಪಿ ಪೂಣಚ್ಚ, ಕುಂಜಿಲAಡ ದೊರೆ ಪೂಣಚ್ಚ ಉಪಸ್ಥಿತರಿದ್ದರು.