ನಾಪೋಕ್ಲು, ಅ. ೧೫: ನಾಲ್ಕುನಾಡು ಆಟೋ ಚಾಲಕರ ಮತ್ತು ಮಾಲೀಕರ ಸಂಘ (ರಿ) ಹಾಗೂ ವಾಹನ ಚಾಲಕರ ಸಂಘ ನಾಪೋಕ್ಲು (ರಿ) ಇವರುಗಳ ಜಂಟಿ ಆಶ್ರಯದಲ್ಲಿ ೩೪ನೇ ವರ್ಷದ ಆಯುಧ ಪೂಜಾ ಕಾರ್ಯಕ್ರಮವನ್ನು ತಾ. ೨೦ರಂದು ಮಂಗಳವಾರ ನಾಪೋಕ್ಲುವಿನಲ್ಲಿ ಆಯೋಜಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಟಿ.ಪಿ. ಸುಕುಮಾರ್ ತಿಳಿಸಿದರು.
ಪಟ್ಟಣದಲ್ಲಿ ಆಯೋಜಿಸಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಅಂದು ಮಧ್ಯಾಹ್ನ ೧:೩೦ ಗಂಟೆಗೆ ಹಳೆ ತಾಲೂಕಿನಿಂದ ಅಲಂಕೃತಗೊAಡ ವಾಹನಗಳ ಮೆರವಣಿಗೆ ಪ್ರಾರಂಭವಾಗಲಿದೆ. ಬಳಿಕ ಸಾಯಂಕಾಲ ೪ ಗಂಟೆಗೆ ನಾಪೋಕ್ಲುವಿನ ಮಾರುಕಟ್ಟೆ ಆವರಣದಲ್ಲಿ ಸಾಮೂಹಿಕ ಆಯುಧ ಪೂಜಾ ಕಾರ್ಯಕ್ರಮ ಪ್ರಖ್ಯಾತ ಮಹಾನವಮಿ ಕಲಾವಿದರಿಂದ ಆರ್ಕೆಸ್ಟಾç ಸಭಾ ಕಾರ್ಯಕ್ರಮ ನಡೆಯಲಿದೆ ಎಂದರು.
ಸಭಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ನಾಲ್ಕುನಾಡು ಆಟೋ ಚಾಲಕರ ಮತ್ತು ಮಾಲೀಕರ ಸಂಘದ ಅಧ್ಯಕ್ಷ ಟಿ.ಪಿ. ಸುಕುಮಾರ್ ವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿ ಎ.ಎಸ್. ಪೊನ್ನಣ್ಣ, ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಚಂದ್ರಮೌಳಿ, ನಾಪೋಕ್ಲು ಪೋಲೀಸ್ ಠಾಣಾಧಿಕಾರಿ ರಾಘವೇಂದ್ರ, ಹೊದ್ದೂರು ಪಂಚಾಯಿತಿ ಮಾಜಿ ಅಧ್ಯಕ್ಷ ಹೆಚ್.ಎ. ಹಂಸ, ಪಂಚಾಯಿತಿ ಮಾಜಿ ಅಧ್ಯಕ್ಷ ಕಲಿಯಂಡ ಸಂಪನ್ ಅಯ್ಯಪ್ಪ, ಪಂಚಾಯಿತಿ ಮಾಜಿ ಅಧ್ಯಕ್ಷ ಕೆ.ಎ. ಇಸ್ಮಾಯಿಲ್, ವೈದ್ಯರಾದ ಡಾ. ಹೆಚ್.ವಿ. ದೇವದಾಸ್, ನಾಪೋಕ್ಲು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಹೆಚ್. ಸೌಕತ್ ಅಲಿ, ಬಲಮುರಿ ಗ್ರಾಮದ ಕಾಫಿ ಬೆಳೆಗಾರ ಬೊಳ್ಳಚೆಟ್ಟಿರ ಸುರೇಶ್, ನಾಪೋಕ್ಲು ವಿ.ಎಸ್.ಎಸ್.ಎನ್. ಬ್ಯಾಂಕ್ ಅಧ್ಯಕ್ಷ ಕೆಟೋಳಿರ ಹರೀಶ್ ಪೂವಯ್ಯ, ನಾಪೋಕ್ಲು ಅಂಕುರ್ ಪಬ್ಲಿಕ್ ಶಾಲೆ ಕಾರ್ಯದರ್ಶಿ ಕೆಟೋಳಿರ ರತ್ನಾಚರ್ಮಣ ಹಾಗೂ ಇತರ ಪ್ರಮುಖರು ಭಾಗವಹಿಸಲಿದ್ದಾರೆ ಎಂದರು. ಕಾರ್ಯಕ್ರಮದಲ್ಲಿ ಈ ವರ್ಷ ವಿಶೇಷವಾಗಿ ಎಲ್ಲರಿಗೂ ಊಟದ ವ್ಯವಸ್ಥೆಯನ್ನು ಮಾಡಿರುವ ವೈದ್ಯಕೀಯ ಕ್ಷೇತ್ರದಲ್ಲಿ ಅಪ್ರತಿಮ ಸೇವೆ ಸಲ್ಲಿಸಿರುವ ವೈದ್ಯರಾದ ದಾನಿ ಡಾ. ಹೆಚ್.ವಿ. ದೇವದಾಸ್ ಅವರನ್ನು ಸನ್ಮಾನಿಸಲಾಗುವುದು ಎಂದರು.
ಈ ಸಂದರ್ಭ ವಿಶೇಷ ಅಲಂಕಾರ ಮಾಡಿರುವ ಸೈಕಲ್, ಎರಡು ಚಕ್ರದ ವಾಹನ, ಆಟೋ, ನಾಲ್ಕು ಚಕ್ರದ ವಾಹನ, ಟ್ರ್ಯಾಕ್ಟರ್, ವರ್ಕ್ ಶಾಪ್ ಅಂಗಡಿ ಅಲಂಕಾರಿಗಳಿಗೆ ವಿಶೇಷ ಟ್ರೋಫಿ ಬಹುಮಾನಗಳನ್ನು ನೀಡಲಾಗುವುದು ಎಂದು ಸಂಘದ ಅಧ್ಯಕ್ಷ ಟಿ.ಪಿ. ಸುಕುಮಾರ್ ಮಾಹಿತಿ ನೀಡಿದದರು. ಈ ಸಂದರ್ಭ ಸಂಘದ ಉಪಾಧ್ಯಕ್ಷ ಸತೀಶ ಎ. ಯು., ಪ್ರಧಾನ ಕಾರ್ಯದರ್ಶಿ ಹಂಸ ಬಿ. ಎಂ, ಖಜಾಂಚಿ ಚೇತನ್ ಏ. ಎಂ, ಗೌರವ ಅಧ್ಯಕ್ಷ ಅಬ್ದುಲ್ ರಜಾಕ್, ಸಮರ್ಥ್ ಸಮಿತಿ ಸದಸ್ಯರಾದ ಶ್ರೀ ಜೇಷ್, ಆನಂದ ಉಪಸ್ಥಿತರಿದ್ದರು.