ಗೋಣಿಕೊಪ್ಪಲು, ಅ. ೧೫: ಶ್ರೀ ಕಾವೇರಿ ದಸರಾ ಸಮಿತಿ ವತಿಯಿಂದ ಗೋಣಿಕೊಪ್ಪಲು ದಸರಾ ಅಂಗವಾಗಿ ನಡೆದ ೪ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮ ಮೆಚ್ಚುಗೆಗೆ ಪಾತ್ರವಾಯಿತು. ಕಾವೇರಿ ಕಲಾ ವೇದಿಕೆಯಲ್ಲಿ ವಿವಿಧ ನೃತ್ಯಗಳು ನೋಡುಗರನ್ನು ಆಕರ್ಷಿಸಿತು.

ಕಾವೇರಿ ಕಾಲೇಜಿನ ವಿದ್ಯಾರ್ಥಿಗಳಿಂದ ನೃತ್ಯ ಮೂಡಿ ಬಂತು. ತಿರುವಾದಿರ ನೃತ್ಯ, ಎಸ್‌ಎನ್‌ಡಿಪಿ ತಂಡದಿAದ ಫ್ಯೂಷನ್ ಡ್ಯಾನ್ಸ್, ಕೂರ್ಗ್ ವಿಂಗ್ಸ್ ಆಫ್ ಫ್ಯಾಷನ್ ತಂಡದಿAದ ನೃತ್ಯ ಗಮನ ಸೆಳೆಯಿತು.ಸಮಗ್ರ ಗಿರಿಜನ ಅಭಿವೃದ್ದಿ ಕಲಾ ಸಂಸ್ಥೆ ನಾಣಚ್ಚಿ ಇವರು ನಡೆಸಿಕೊಟ್ಟ ಜೇನುಕುರುಬರ ಬುಡಕಟ್ಟು ಹಾಡು ಹಾಗೂ ನೃತ್ಯ ನೋಡುಗರನ್ನು ಖುಷಿ ಪಡಿಸಿತು. ಕೊಡಗು ನೈಟ್ಸ್ ಪೂಡೆ ಪೂಡೆ ವಾ ಹಾಡಿಗೆ ಪ್ರೇಕ್ಷಕರು ಕುಣಿದು ಕುಪ್ಪಳಿಸಿದರು.