ಮಡಿಕೇರಿ, ಅ. ೧೫: ಮಡಿಕೇರಿ ಗಾಂಧಿ ಮೈದಾನದಲ್ಲಿ ತಾ. ೧೪ ರಂದು ಕಾಫಿ ದಸರಾ ಪ್ರಯುಕ್ತ ಕಾಫಿ ಕ್ಷೇತ್ರದ ಸಾಧಕರನ್ನು ಗುರುತಿಸಿ ಸನ್ಮಾನಿಸಲಾಯಿತು.

ಚೆಯ್ಯಂಡಾಣೆಯ ಮಕ್ಕಿಮನೆ ಸುಧೀರ್, ಬಾಳೆಲೆಯ ಆದೇಂಗಡ ತಾರಾ ಅಯ್ಯಮ್ಮ, ಸುರೇಂದ್ರ ತಾಕೇರಿ, ಗರ್ವಾಲೆ ಕಿರಂದಾಲೆಯ ಉದಯ್ ಈಶ್ವರನ್, ಮಡಿಕೇರಿ ಕಾಫಿ ತಜ್ಞ ಕೆ.ಕೆ. ವಿಶ್ವನಾಥ್, ಕಾಫಿ ಬ್ಲಾಗರ್ ಕಾರ್ತಿಕ್ ಪಟ್ಟಡ, ಶೇಷಪ್ಪ ಮಣಜೂರು, ಕೊಡ್ಲಿಪೇಟೆಯ ಮಹಮ್ಮದ್ ರಾಜ, ನಾಕೂರು ಶಿರಂಗಾಲದ ಪಿ.ಎಂ ಬಿಜು, ಸುಂಟಿಕೊಪ್ಪ ಎಸ್.ಬಿ ಜಯರಾಜ್, ಹನೀಫ ಇ.ಹೆಚ್ ನೆಲ್ಲಿಹುದಿಕೇರಿ ಸೇರಿದಂತೆ ಕೃಷಿ ಸ್ವಸಹಾಯ ಸಂಘ ಬಗ್ಗನಮನೆ ಹಾಗೂ ವೀಲ್ ಕೆಫೆ ಮಡಿಕೇರಿ ಪ್ರತಿನಿಧಿಗಳಿಗೆ ಸನ್ಮಾನಿಸಲಾಯಿತು.

ಈ ಸಂದರ್ಭ ಕಾಫಿ ದಸರಾ ಸಂಚಾಲಕ ಅನಿಲ್ ಹೆಚ್.ಟಿ, ಶಾಸಕ ಡಾ.ಮಂತರ್ ಗೌಡ, ಕಾಫಿ ಮಂಡಳಿ ಅಧ್ಯಕ್ಷ ದಿನೇಶ್ ಎಂ.ಜೆ, ಕಾರ್ಯದರ್ಶಿ ಕೂರ್ಮಾ ರಾವ್, ಕೆ.ಪಿ.ಎ ಅಧ್ಯಕ್ಷ ಮಾತಂಡ ಕಾರ್ಯಪ್ಪ, ಸಿ.ಪಿ.ಎ ಉಪಾಧ್ಯಕ್ಷ ಪವನ್ ಮೊಣ್ಣಪ್ಪ, ಪ್ರಮುಖರಾದ ವಿನೋದ್ ಶಿವಪ್ಪ ಹಾಗೂ ಕಾಫಿ ದಸರಾ ಸಮಿತಿ ಸದಸ್ಯರು ಹಾಜರಿದ್ದರು.