ಗೋಣಿಕೊಪ್ಪಲು, ಅ. ೧೪: ಶ್ರೀ ಕಾವೇರಿ ದಸರಾ ಸಮಿತಿ ವತಿಯಿಂದ ಗೋಣಿಕೊಪ್ಪಲು ದಸರಾ ಅಂಗವಾಗಿ ನಡೆದ ೩ನೇ ದಿನದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ ಹಾಸ್ಯ ನಾಟಕ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರವಾಯಿತು.
ಕಾವೇರಿ ಕಲಾ ವೇದಿಕೆಯಲ್ಲಿ ವಿವಿಧ ಪ್ರತಿಭೆಯ ಅನಾವರಣದೊಂದಿಗೆ ನೋಡುಗರನ್ನು ರಂಜಿಸಿತು. ದೇವರನಾಮ, ಶಾಸ್ತಿçÃಯ ನೃತ್ಯ, ಸುರಕ್ಷ ಹಾಗೂ ಅಭಿಜ್ಞ ವೈಲಾಯ ತಂಡದಿAದ ನಡೆಯಿತು. ಯಾಹವಿ ಡ್ಯಾನ್ಸ್ ಅಕಾಡೆಮಿಯಿಂದ ನೃತ್ಯ ಪ್ರದರ್ಶನ ಗಮನ ಸೆಳೆಯಿತು.
ಮಂಗಳೂರಿನ ಲಕುಮಿ ತಂಡದ ಅರವಿಂದ್ ಬೋಳಾರ್ ನಡೆಸಿಕೊಟ್ಟ ಆಂಟಿ ಮತ್ತು ಅಂಕಲ್ ಹಾಸ್ಯ ನಾಟಕ ಜನರನ್ನು ನಗೆಗಡಲಲ್ಲಿ ತೇಲಿಸಿತು.