ಮಡಿಕೇರಿ,ಅ.೧೪; ಕನ್ನಡ ಮತ್ತು ಸಂಸ್ಕೃತಿ ಇಲಾಖೆ, ಮಡಿಕೇರಿ ನಗರ ದಸರಾ ಸಮಿತಿ ಹಾಗೂ ದಸರಾ ಸಾಂಸ್ಕೃತಿಕ ಸಮಿತಿ ವತಿಯಿಂದ ನಗರದ ಗಾಂಧಿ ಮೈದಾನದ ಕಲಾ ಸಂಭ್ರಮ ವೇದಿಕೆಯಲ್ಲಿ ತಾ.೧೩ರಂದು ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳು ಕಲಾ ಪ್ರೇಕ್ಷಕರ ಮನ ಸೆಳೆದವು.
ರಾಘವೇಂದ್ರ ಮೈಸೂರು ತಂಡದವರಿAದ ಸುಗಮ ಸಂಗೀತ, ಭಾಗಮಂಡಲದ ಡ್ಯಾನ್ಸ್ ಗ್ಯಾಲರಿ ತಂಡದಿAದ ನೃತ್ಯ ವೈವಿಧ್ಯ, ಕುಶಾಲನಗರದ ಎ ಕ್ರಿಯೇಟಿವ್ ತಂಡದಿAದ ನೃತ್ಯ ವೈವಿಧ್ಯ, ಹಾಸನದ ನೃತ್ಯ ನಿನಾದ ಡ್ಯಾನ್ಸ್ ಅಕಾಡೆಮಿಯಿಂದ ನೃತ್ಯ ವೈವಿಧ್ಯ, ಮಡಿಕೇರಿಯ ನಟರಾಜ ನೃತ್ಯನಿಕೇತನ ತಂಡದಿAದ ನೃತ್ಯ, ಮೈಸೂರಿನ ನೃತ್ಯ ನಿರಂತರ ವಿಶೇಷಚೇತನರ ಮಕ್ಕಳಿಂದ ವೈವಿಧ್ಯಮಯ ಸಾಂಸ್ಕೃತಿಕ ಕಾರ್ಯಕ್ರಮಗಳು ಮೂಡಿಬಂದವು.