ಐಗೂರು, ಅ. ೧೩: ಐಗೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಾಜೂರಿನ ಶ್ರೀ ಹರಿಹರ ಯುವಕ ಸಂಘದ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷರಾದ ಎಂ.ಕೆ .ಮೋಹನ್ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಕಾರ್ಯಕ್ರಮದಲ್ಲಿ ಸಂಘದ ಸದಸ್ಯ ಗಂಗಾಧರ ಅವರ ಪುತ್ರ ಡಾಕ್ಟರ್. ಜಿತೇಂದ್ರ ಅವರು ಬೆಂಗಳೂರಿನ ಮೆಡಿಕಲ್ ಕಾಲೇಜು ಮತ್ತು ರಿಸರ್ಚ್ ಇನ್ಸ್ಟಿಟ್ಯೂಟ್‌ನಲ್ಲಿ ವೈದ್ಯಕೀಯ ಶಿಕ್ಷಣ(ಎಂಬಿಬಿಎಸ್) ಪೂರೈಸಿದ ಹಿನ್ನೆಲೆಯಲ್ಲಿ ಅವರನ್ನು ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು. ದ್ವಿತೀಯ ಪಿಯುಸಿ ಯಲ್ಲಿ ಅತ್ಯುನ್ನತ ಅಂಕ ಗಳಿಸಿದ ಏ. ಎಸ್. ಧನು ಹಾಗೂ ನಿಶಾಂತ್ ಅವರನ್ನು ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.

ಸಂಘದ ನೂತನ ಆಡಳಿತ ಮಂಡಳಿಯನ್ನು ರಚಿಸಲಾಯಿತು. ಅಧ್ಯಕ್ಷರಾಗಿ ಬಿ.ಸಿ. ಪ್ರದೀಪ್, ಉಪಾಧ್ಯಕ್ಷ ಎ.ಸಿ. ಶ್ರೀಜಿತ್, ಕಾರ್ಯದರ್ಶಿ ಸತೀಶ್ ಕೆ.ಆರ್. ಉಪ ಕಾರ್ಯದರ್ಶಿ ಶರತ್ ಎಮ್. ಆರ್. ಖಜಾಂಚಿ ಬಿ. ಚಂದ್ರಶೇಖರ, ನಿರ್ದೇಶಕರಾಗಿ ಸೆಲ್ವಂ, ಎಂ.ಜಿ. ರಾಜ, ಎಂ.ಕೆ. ಮೋಹನ್, ಎನ್. ಕೃಷ್ಣ, ವಿ.ಕೆ. ಶ್ರೀಜಿತ್, ಎಂ.ಜಿ. ಸುಗು, ದಿನೇಶ್ ಮತ್ತು ಜಿ.ಕೆ. ಅವಿಲಾಶ್ ಆಯ್ಕೆಯಾದÀರು.