ನಾಪೋಕ್ಲು, ಅ. ೧೩: ಸ್ಥಳೀಯ ಕರ್ನಾಟಕ ಪಬ್ಲಿಕ್ ಶಾಲೆಯ(ಕೆಪಿಎಸ್) ಆವರಣದಲ್ಲಿ ಪದವಿಪೂರ್ವ ಕಾಲೇಜು ವಿಭಾಗದ ೧.೭೦ ಕೋಟಿ ರೂ. ವೆಚ್ಚದ ನೂತನ ಹೆಚ್ಚುವರಿ ಕೊಠಡಿಗಳ ಕಟ್ಟಡ ಕಾಮಗಾರಿಗೆ ವೀರಾಜಪೇಟೆ ಕ್ಷೇತ್ರದ ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಎ.ಎಸ್. ಪೊನ್ನಣ್ಣ ಅವರು ಭೂಮಿಪೂಜೆ ನೆರವೇರಿದರು.

ಈ ಸಂದರ್ಭದಲ್ಲಿ ಮಾತನಾಡಿದ ಶಾಸಕರು, ಗ್ರಾಮೀಣ ಭಾಗದ ವಿದ್ಯಾರ್ಥಿಗಳ ವಿದ್ಯಾರ್ಜನೆಗೆ ಒತ್ತು ನೀಡಲಾಗುತ್ತಿದ್ದು ಈ ನಿಟ್ಟಿನಲ್ಲಿ ಸರ್ಕಾರಿ ಶಿಕ್ಷಣ ಸಂಸ್ಥೆಗಳನ್ನು ಬಲಪಡಿಸುವ ಅಗತ್ಯ ಅನುದಾನ ಒದಗಿಸಲಾಗುತ್ತಿದ್ದು, ಲೋಕೋಪಯೋಗಿ ಇಲಾಖೆ ಮೂಲಕ ಒಟ್ಟು ೧.೭೦ ಕೋಟಿ ರೂ. ವೆಚ್ಚದಲ್ಲಿ ೭೮೦ ಚದರ ಮೀಟರ್ (ನೆಲಮಹಡಿ ೩೯೦ ಚದರ ಮೀಟರ್ ಹಾಗೂ ಮೊದಲ ಮಹಡಿ ೩೯೦ ಚದರ ಮೀಟರ್) ವಿಸ್ತೀರ್ಣದಲ್ಲಿ ಕಟ್ಟಡ ನಿರ್ಮಾಣವಾಗಲಿದೆ. ದ್ವಿಮಹಡಿಯ ಈ ನೂತನ ಕಟ್ಟಡದಲ್ಲಿ ೪ ತರಗತಿ ಕೊಠಡಿಗಳು., ೨ ಸುಸಜ್ಜಿತ ಪ್ರಯೋಗಾಲಯಗಳು ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಪ್ರತ್ಯೇಕ ಶೌಚಾಲಯಗಳ ನಿರ್ಮಾಣವಾಗಲಿದೆ ಎಂದರು.

ಪ್ರಾAಶುಪಾಲರಾದ ಎ.ಎಂ. ವಿಶಾಲ ಕುಶಾಲಪ್ಪ ಮಾತನಾಡಿ, ವರ್ಷಗಳಿಂದ ಬಾಕಿಯಿದ್ದ ಶಾಲಾ ಕೊಠಡಿ ನಿರ್ಮಾಣ ಕಾಮಗಾರಿ ಕೊನೆಗೂ ಪ್ರಾರಂಭಿಸಲಾಗಿದೆ. ೨೦೧೮-೧೯ನೇ ಸಾಲಿನಲ್ಲಿ ಶಾಲಾ ಕೊಠಡಿ ನಿರ್ಮಾಣಕ್ಕಾಗಿ ಅನುದಾನ (ಗ್ರಾಂಟ್) ಮಂಜೂರಾಗಿತ್ತು. ಆದರೆ ವಿವಿಧ ಕಾರಣಾಂತರಗಳಿAದ ಈ ಕಾಮಗಾರಿ ವಿಳಂಬವಾಗುತ್ತಾ ಬಂದಿತ್ತು. ಇದೀಗ ಎಲ್ಲ ಅಡೆತಡೆಗಳು ನಿವಾರಣೆಯಾಗಿದ್ದು, ಕಾಮಗಾರಿ ಆರಂಭಗೊAಡಿದೆ ಎಂದರು.

ಅರ್ಚಕ ಹರೀಶ್ ಭಟ್ಟ ಪೂಜಾ ವಿಧಿ ವಿಧಾನವನ್ನು ನೆರವೇರಿಸಿದರು

ಈ ಸಂದರ್ಭ ಶಾಲಾ ಅಭಿವೃದ್ಧಿ ಮತ್ತು ಮೇಲುಸ್ತುವಾರಿ ಸಮಿತಿ ಉಪಾಧ್ಯಕ್ಷ ನೂರಂಬಾಡ ಉದಯ ಶಂಕರ್, ಸದಸ್ಯರಾದ ಕೇಟೋಳಿರ ರಾಜ ಗಣಪತಿ, ಉಸ್ಮಾನ್, ಮೊಯ್ಯು, ಆಸೀನಾ, ಉಪ ಪ್ರಾಂಶುಪಾಲರಾದ ಶಿವಣ್ಣ ಎನ್.ಎಸ್, ಉಪನ್ಯಾಸಕರು, ಸಿಬ್ಬಂದಿ ವರ್ಗ, ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷೆ ವನಜಾಕ್ಷಿ ರೇಣುಕೇಶ್, ಮಾಜಿ ಸದಸ್ಯರಾದ ಮಾಚೆಟ್ಟಿರ ಕುಶು ಕುಶಾಲಪ್ಪ, ಎಂ.ಎಚ್ ಅಬ್ದುಲ್ ರೆಹಮಾನ್, ಕುಲ್ಲೇಟಿರ ಅರುಣ್ ಬೇಬಾ, ಹ್ಯಾರಿಸ್ ಕೊಳಕೇರಿ, ಶೌಕತ್ ಅಲಿ, ಕಲಿಯಂಡ ಸಂಪನ್ ಅಯ್ಯಪ್ಪ, ಹಾಗೂ ಬಾಚಮಂಡ ಲವ ಚಿಣ್ಣಪ್ಪ, ಬಿದ್ದಾಟಂಡ ತಮ್ಮಯ್ಯ, ಅಪ್ರು ರವೀಂದ್ರ , ಅರಾಫತ್, ಸಿರಾಜ್, ವಾಸಿಂ, ಲೋಕೋಪಯೋಗಿ ಇಲಾಖೆಯ ಅಭಿಯಂತರ ಗಿರೀಶ್, ನಾಪೋಕ್ಲು ಗ್ರಾಮ ಅಭಿವೃದ್ಧಿ ಅಧಿಕಾರಿ ಚಂದ್ರಮೌಳಿ, ಇಲಾಖೆಯ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಉಪಸ್ಥಿತರಿದ್ದರು.